ಮಸ್ಕಿ: ಪಕ್ಕದ ಮನೆಯವರಿಂದ ಮಾನಸಿಕ ಹಿಂಸೆ ಆರೋಪ: ಗೃಹಿಣಿ ಆತ್ಮಹತ್ಯೆ
ಹೊಸ ಮನೆ ಕಟ್ಟಡ ನಿರ್ಮಾಣಕ್ಕೆ ತಕರಾರು ವ್ಯಕ್ತಪಡಿಸುತ್ತಿರುವ ನೆರೆ ಹೊರೆಯವರ ಕಾಟ ನೀಡುತ್ತಿದ್ದಾರೆಂದು ಆರೋಪಿಸಿ ಮನನೊಂದು ಗೃಹಿಣಿ ಸುಮಾ (34) ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣ 9ನೇ ವಾರ್ಡ್ ಬಳಿ ತಡ ರಾತ್ರಿ ನಡೆದಿದೆ.
ಮಸ್ಕಿ (ಮೇ.18) : ಹೊಸ ಮನೆ ಕಟ್ಟಡ ನಿರ್ಮಾಣಕ್ಕೆ ತಕರಾರು ವ್ಯಕ್ತಪಡಿಸುತ್ತಿರುವ ನೆರೆ ಹೊರೆಯವರ ಕಾಟ ನೀಡುತ್ತಿದ್ದಾರೆಂದು ಆರೋಪಿಸಿ ಮನನೊಂದು ಗೃಹಿಣಿ ಸುಮಾ (34) ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣ 9ನೇ ವಾರ್ಡ್ ಬಳಿ ತಡ ರಾತ್ರಿ ನಡೆದಿದೆ.
ಕೆಲ ದಿನಗಳ ಹಿಂದೆ ಹಳೆ ಮನೆ ನೆಲಸಮಗೊಳಿಸಿ ಹೊಸ ಮನೆ ಕಟ್ಟಲು ಕಾಮಗಾರಿ ಆರಂಭ ಮಾಡಿದ್ದ ಸಂದಂರ್ಭದಲ್ಲಿ ಮನೆ ಪಕ್ಕದ ಗಂಗಮ್ಮ ಬಸವರಾಜ, ವಸಂತ ತಂದೆ ರಾಮಲಿಂಗಪ್ಪ, ಶಿವು ಕುಮಾರ್, ವಿನಾಯಕ ಬೆಲ್ಲದ, ಸುಭಾಶ, ಮಹೇಶ ಇನ್ನಿತರ 17 ಜನರು ಮನೆ ಕಟ್ಟಡ ನಿರ್ಮಾಣಕ್ಕೆ ವಿನಾ ಕಾರಣ ತಕರಾರು ಮಾಡಿ ಮಾನಸಿಕ ಚಿತ್ರ ಹಿಂಸೆ ನೀಡುತ್ತಿರುವ ಕಾರಣ ಬೇಸತ್ತು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದೇನೆ ಎಂದು ಗೃಹಿಣಿ ಸುಮಾ ಹೇಳಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
Bengaluru: ಪತ್ನಿ ಶೋಕಿಗೆ ಹಣ ಹೊಂದಿಸಲಾಗದೇ, ಮಕ್ಕಳ ಸಮೇತ ತಂದೆಯೂ ಆತ್ಮಹತ್ಯೆ!
ವಿಡಿಯೋ ವೈರಲ್(Video viral) ಆದ ನಂತರ ಸುಮಾ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ನನ್ನ ಪತ್ನಿಗೆ ಮಾನಸಿಕ ಚಿತ್ರಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು ಎಂದು ಮೃತ ಸುಮಾ ಪತಿ ವಿಶ್ವನಾಥ ಶೆಟ್ಟಿಮಸ್ಕಿ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಇಲ್ಲಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪಿಎಸ್‌ಐ ಸಿದ್ದರಾಮ ಬಿದರಾಣಿ ತಿಳಿಸಿದ್ದಾರೆ.
ನೇಣುಬಿಗಿದು ಯುವತಿ ಆತ್ಮಹತ್ಯೆ
ಹೊನ್ನಾವರ: ತಾಲೂಕಿನ ಇಡಗುಂಜಿ ಕುಳಿಮನೆಯಲ್ಲಿ ಗೇರು ಮರಕ್ಕೆ ನೇಣು ಬಿಗಿದುಕೊಂಡು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಅನಿಲಗೋಡ ಮೂಲದ ಯುವತಿ ಅಕ್ಷತಾ ನಾಗೇಂದ್ರ ನಾಯ್ಕ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಂಕಿ ಮೂಲದ ಯೋಗೀಶ ನಾಯ್ಕ ಎಂಬಾತ ಕರೆ ಮಾಡಿ, ಮದುವೆಯಾಗಲು ಬೆದರಿಕೆ ಹಾಕಿದ್ದಾನೆ. ಇದರಿಂದ ಯುವತಿ ಮಾನಸಿಕವಾಗಿ ಜರ್ಝರಿತಗೊಂಡು, ಮನೆ ಸಮೀಪದ ಗೇರು ಮರಕ್ಕೆ ಸೀರೆಯನ್ನು ಕುತ್ತಿಗೆಗೆ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ಫೇಲ್: 8 ವಿದ್ಯಾರ್ಥಿಗಳ ಆತ್ಮಹತ್ಯೆ; ಮತ್ತಿಬ್ಬರಿಂದ ಸೂಸೈಡ್‌ಗೆ ಯತ್ನ
ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.