ಉತ್ತರ ಪ್ರದೇಶದ ಸರಣಿ ಕಿಲ್ಲರ್ ಕುಲ್ದೀಪ್ ಗಂಗಾವರ್ ಇದೀಗ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಈತನ ಸೀರಿಯಲ್ ಕಿಲ್ಲರ್ ಆಗಿ ಬದಲಾಗಿದ್ದು ಏಕೆ? ಈತನನ್ನು ಖಾಕಿ ಪಡೆ ಬಂಧಿಸಿದ್ದು ಹೇಗೆಂದು ನೋಡೋಣ ಬನ್ನಿ

ಮಹಿಳೆಯರನ್ನು ಬೆತ್ತಲೆ ಮಾಡಿ ಕೊಲ್ಲುವ ಸೀರಿಯಲ್ ಕಿಲ್ಲರ್.! 13 ತಿಂಗಳು, 9 ಕೊಲೆ. ಒಂದೇ ವಯಸ್ಸು. ಒಂದೇ ರೀತಿಯ ಮರ್ಡರ್. ಕಬ್ಬಿನ ಗದ್ದೆಯಲ್ಲಿ ಶವಗಳು. ಬೆಚ್ಚಿ ಬಿತ್ತು ಯೋಗಿ ನಾಡು..! 'ಸಾರಿ' ಮರ್ಡರ್'ಗೆ ಯು.ಪಿ ಪೊಲೀಸರೇ ಬೆಚ್ಚಿ ಬಿದ್ದದ್ದೇಕೆ..? ಯಾರು ಆ ಕೊಲೆಗಾರ..? ಯಾರು ಆ ಆಗಂತುಕ..? ಏನಿದು ಮರ್ಡರ್ ಮಿಸ್ಟರಿ..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್‌

ಯೋಗಿ ನಾಡು ಉತ್ತರ ಪ್ರದೇಶದಲ್ಲಿ ಸೈಕೋ ಕಿಲ್ಲರ್ ಕಾಟದಿಂದ ತತ್ತರಿಸಿ ಹೋಗಿತ್ತು. ಹೆಣ್ಣು ಹಂತಕನ ಅಟ್ಟಹಾಸಕ್ಕೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆ ಬೆಚ್ಚಿ ಬಿದ್ದಿದೆ. ಅದ್ರಲ್ಲೂ ಆ ಮೂರು ಹಳ್ಳಿಗಳಲ್ಲಂತೂ ಮಹಿಳೆಯರು ಕನಸಲ್ಲೂ ಬೆಚ್ಚಿ ಬೀಳೋ ಹಾಗಾಗಿತ್ತು. ಹಾಗಾದ್ರೆ ಯೋಗಿ ನಾಡಿನ ಮಹಿಳಾ ಮಣಿಗಳನ್ನು ಈ ಪರಿ ಕಾಡ್ತಾ ಇದ್ದ ಆ ಹಂತಕ ಯಾರು..? ಪೊಲೀಸರು ಈ ಸೀರಿಯಲ್​ ಕಿಲ್ಲರ್​ ಅನ್ನ ಪತ್ತೆ ಹಚ್ಚಿದ್ದು ಹೇಗೆ..? ಆ ರೋಚಕ ಕಾರ್ಯಾಚರಣೆ ಹೇಗಿತ್ತು ಅನ್ನೋದರ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ನಿಮ್ಮ ಮುಂದೆ ಎಳೆಎಳೆಯಾಗಿ ಬಿಚ್ಚಿಡ್ತೀವಿ ನೋಡಿ.

ಅರೆಸ್ಟ್​ ಆಗಿರುವ ಹೆಣ್ಣು ಹಂತಕ ಮಹಿಳೆಯರನ್ನು ಕೊಲ್ಲಲು ಕಾರಣವೇನು ಎಂಬೂದನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಅದನ್ನ ಕೇಳಿದ ಪೊಲೀಸರೇ ಶಾಕ್​ ಆಗಿದ್ದಾರೆ. ಸೈಕೋ ಕಿಲ್ಲರ್ ಕುಲದೀಪ್‌ ಗಂಗಾವರ್‌ನಿಗೆ ಸ್ತ್ರೀದ್ವೇಷ ಭಯಂಕರವಾಗಿತ್ತು. ಮಲತಾಯಿಯ ಚಿತ್ರಹಿಂಸೆಯಿಂದ ಈ ಕುಲದೀಪ್‌ ಗಂಗಾವರ್‌ ಅಕ್ಷರಶಃ ಸ್ತ್ರೀ ದ್ವೇಷಿಯಾಗಿ ಬದಲಾಗಿ ಬಿಟ್ಟ. ಈ ಕಾರಣಕ್ಕಾಗಿ 50 ರಿಂದ 60 ವರ್ಷದ ವಯಸ್ಸಿನ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದ. ಈ ಹಂತಕನನ್ನು ಯುಪಿ ಪೊಲೀಸರು ಹಳ್ಳಿಗರ ವೇಷ ತೊಟ್ಟು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬರೇಲಿ ಮಹಿಳೆಯರು ನಿಟ್ಟುಸಿರು ಬಿಡುವಂತೆ ಆಗಿದೆ.