ಸಿಂಧನೂರು(ಫೆ.19): ನನ್ನ ಸಾವಿಗೆ ನಾನೇ ಕಾರಣವೆಂದು ಡೆತ್‌ನೋಟ್‌ ಬರೆದಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣರಾಗಿರುವ ಘಟನೆ ಬುಧವಾರ ಜರುಗಿದೆ. ನಗರದ ಶರಣಬಸವೇಶ್ವರ ಕಾಲೊನಿಯ ನಿವಾಸಿ ವೀಣಾ (28) ಮೃತ ದುರ್ದೈವಿ. 

ಶರಣಪ್ಪ ಎಂಬಾತನ ಜೊತೆ 2013ರಲ್ಲಿ ಈಕೆಯ ವಿವಾಹವಾಗಿತ್ತು. ಮದುವೆ ನಂತರ ತನ್ನ ಜೀವನದಲ್ಲಿ ಖುಷಿ ಸಿಕ್ಕಿಲ್ಲ ಎಂದು ಡೆತ್‌ನೋಟ್‌ನಲ್ಲಿ ಬರೆದು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಗದಗ: ಬ್ಲೇಡ್‌ನಿಂದ ಬೇಕಾಬಿಟ್ಟಿ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

ಸಾರ್ವಜನಿಕ ಆಸ್ಪತ್ರೆಗೆ ಮೃತದೇಹ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಕುರಿತು ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್‌ನೋಟ್‌ ವಶಕ್ಕೆ ಪಡೆದಿರುವ ಸಬ್‌ಇನ್ಸ್‌ಪೆಕ್ಟರ್‌ ವಿಜಯಕೃಷ್ಣ ತನಿಖೆ ಕಾರ್ಯ ಚುರುಕುಗೊಳಿಸಿದ್ದಾರೆ.