Vijayapura: ನಂದಿ ಸಕ್ಕರೆ ಕಾರ್ಖಾನೆಯ ಬಾಯ್ಲರ್‌ ಸ್ಫೋಟ ಪ್ರಕರಣ, ಓರ್ವ ಬಲಿ, ಐವರ ಸ್ಥಿತಿ ಚಿಂತಾಜನಕ!

ವಿಜಯಪುರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬಾಯ್ಲರ್  ಬ್ಲಾಸ್ಟ್ ಪ್ರಕರಣದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ, ಈ ಭಯಾನಕ ಸ್ಪೋಟದ ಹಿಂದೆ ಕಳಪೆ ಕಾಮಗಾರಿ ಶಂಕೆ ವ್ಯಕ್ತವಾಗಿದೆ.

many in critical condition after Vijayapura  Nandi sugar factory boiler explosion gow

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಮಾ.5): ರಾಜ್ಯದಲ್ಲಿ ಭರ್ಜರಿಯಾಗಿ ಕಬ್ಬು ಬಂದಿದ್ದು, ಸಕ್ಕರೆ ಕಾರ್ಖಾನೆಗಳ ಕಬ್ಬು ನುರಿಸುವ ಭರಾಟೆ ಜೋರಾಗಿದೆ. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಾಯೋಗಿಕವಾಗಿ ಬಾಯ್ಲರ್ ಟೆಸ್ಟಿಂಗ್ ಮಾಡೋವಾಗ ಬ್ಲಾಸ್ಟ್ ಆಗಿದ್ದು, ಈ ವೇಳೆ ಮೂವರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು ಸೇರಿದಂತೆ ಒಟ್ಟು ಐವರಿಗೆ ಗಾಯಗಳಾಗಿದ್ದವು. ಅದರಲ್ಲಿ ಇಂದು ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ. ಇನ್ನಿಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಆಕಸ್ಮಿಕ ಸ್ಫೋಟದಿಂದಾಗಿ ಬಾಯ್ಲರ್ ನಲ್ಲಿ ಬೆಂದ ಬಿಹಾರ ಮೂಲದ ಕಾರ್ಮಿಕರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. 

ಟೆಸ್ಟಿಂಗ್ ವೇಳೆಯೆ ನಡೆಯಿತು ಭಯಾನಕ‌ ಬ್ಲಾಸ್ಟ್!
ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರೋ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಿನ್ನೆ ಭಯಾನಕ‌ ಬ್ಲಾಸ್ಟ್ ನಡೆದಿದೆ. 51ಕೋಟಿ ರೂಪಾಯಿ ವೆಚ್ಚದಲ್ಲಿ ಪುಣೆಯ ಎಸ್ ಎಸ್ ಇಂಜಿನೀಯರ್ಸ್ ಕಂಪನಿಯಿಂದ ಅಳವಡಿಸಲಾಗಿದ್ದ 220 ಟನ್ ಸಾಮರ್ಥ್ಯದ ಬಾಯ್ಲರ್ ಅನ್ನು ಪ್ರಯೋಗಿಕ ಪರೀಕ್ಷೆ ನಡೆಸೋವಾಗ ನಿನ್ನೆ ಮದ್ಯಾಹ್ನದ ವೇಳೆ ಇದ್ದಕ್ಕಿದ್ದಂತೆ ಬಾಯ್ಲರ್ ಸಿಡಿದಿತ್ತು. ಈ ವೇಳೆ ಕಾರ್ಯನಿರತರಾಗಿದ್ದ ಬಿಹಾರ ಮೂಲದ ಐವರು ಕಾರ್ಮಿಕರು ಗಾಯಗೊಂಡಿದ್ರು. ಗಾಯಾಳುಗಳನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಗಂಭೀರವಾಗಿ ಗಾಯಗೊಂಡಿದ್ದ ಸಂದೀಪ ಮಂಡಳ (21) ತಡರಾತ್ರಿ ಮೃತಪಟ್ಟಿದ್ದಾನೆ. ಇನ್ನುಳಿದಂತೆ ಪರಸನಜೀತ ಮಂಡಳ, ರಾಜಕುಮಾರ ಎಂಬುವವರ ಸ್ಥಿತಿಯೂ ಕೂಡ ಗಂಭೀರವಾಗಿದ್ದು, ಇದರೊಂದಿಗೆ ಇಮ್ರಾನ್ ಅನ್ಸಾರಿ ಹಾಗೂ ಅಶೋಕಕುಮಾರ ಎಂಬುವವರಿಗೆ ಚಿಕಿತ್ಸೆ ಮುಂದುವರೆದಿದೆ. 

ಬ್ಲಾಸ್ಟ್ ವೇಳೆ ತತ್ ಕ್ಷಣವೇ ಪೀಲ್ಡಿಗಿಳಿದ ಅಗ್ನಿಶಾಮಕ  ದಳ!
ಇನ್ನು ನಿನ್ನೆ ಬಾಯ್ಲರ್ ನಲ್ಲಿ ಭಯಾನಕ ಸ್ಪೋಟವಾದಾಗ ಸ್ಥಳೀಯರಲ್ಲಿ ಭಯ ಆವರಿಸಿತ್ತು. ಅಲ್ಲದೆ ಹೆಚ್ಚಿನ ಅನಾಹುತಗಳು ಉಂಟಾಗುವ ಬಗ್ಗೆ ಕಾರ್ಖಾನೆಯವರು ಆತಂಕಗೊಂಡಿದ್ದರು. ಆದ್ರೆ ತ್ವರಿತಗತಿಯಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದರಿಂದ ಹೆಚ್ಚಿನ ಅನಾಹುತಕ್ಕೆ ಬ್ರೇಕ್ ಬಿದ್ದಿದೆ.

ಇತ್ತೀಚೆಗೆ ಬದಲಾಗಿದ್ದ ಕಾರ್ಖಾನೆ ನಿರ್ವಹಣೆ ಗುತ್ತಿಗೆ!
ಈ ಮೊದಲು ದೆಹಲಿಯ ISGC ಎಂಬ ಕಂಪನಿಯ ನಿರ್ವಹಣೆಯಲ್ಲಿದ್ದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಗುತ್ತಿಗೆಯನ್ನು ರದ್ದುಪಡಿಸಿ ಇತ್ತೀಚೆಗಷ್ಟೆ ಪುಣೆಯ ಎಸ್ ಎಸ್ ಇಂಜಿನೀಯರ್ಸ್ ಕಂಪನಿಗೆ ಆಡಳಿತ ಮಂಡಳಿ ಗುತ್ತಿಗೆ ನೀಡಿತ್ತು. ಈ ರೀತಿಯಾದ ದೊಡ್ಡ ಪ್ರಾಜೆಕ್ಟ್ ಗಳನ್ನು ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಲಾಗಿರುತ್ತದೆ. ಆದ್ರೂ ಸಹ ಹೀಗೆ ಏಕಾಏಕಿ ಬ್ಲಾಸ್ಟ್ ಆಗಿದ್ದು ಎಲ್ಲರಲ್ಲೂ ಶಾಕ್ ಉಂಟು ಮಾಡಿದೆ.

ಭಯಾನಕ ಬ್ಲಾಸ್ಟ್ ಹಿಂದೆ ಕಳಪೆ ಕಾಮಗಾರಿ!
ಹೊಸದಾಗಿ ನಿರ್ಮಾಣಗೊಂಡ ಬಾಯ್ಲರ್ ಟೆಸ್ಟಿಂಗ್ ವೇಳೆಯೇ ಈ  ಬ್ಲಾಸ್ಟ್ ಆಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಳಪೆ ಕಾಮಗಾರಿ ಏನಾದ್ರೂ ಆಗಿತ್ತಾ ಎಂಬುದರ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಯಾವ ಕಾರಣಕ್ಕಾಗಿ ಹೀಗೆ ಆಗಿದೆ ಎಂಬುದರ ಬಗ್ಗೆ ತನಿಖೆ ಆಗಬೇಕಿದೆ. ಆದ್ರೆ ಕಾರ್ಖಾನೆ ಅಧ್ಯಕ್ಷ ಹೇಳ್ತಿರೋದೆ ಬೇರೆ.

ವಿಜಯಪುರ: ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್‌ ಸ್ಫೋಟ, ನಾಲ್ವರಿಗೆ ಗಾಯ

ಇದು ಆಕಸ್ಮಿಕ ಘಟನೆ' ಕಾರ್ಖಾನೆ ಅಧ್ಯಕ್ಷರ ಪ್ರತಿಕ್ರಿಯೆ
ಈ ಕುರಿತು ಫೋನ್ ಮೂಲಕ ಪ್ರತಿಕ್ರಿಯಿಸಿರುವ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ್ ಅವರು ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಕೊಳ್ಳಲಾಗಿದ್ದು, ಇದು ಆಕಸ್ಮಿಕವಾಗಿ ಆಗಿರುವ ಘಟನೆ. ಬಾಯ್ಲರ್ ನಲ್ಲಿದ್ದ ಇ ಎಸ್ ಪಿ ಎಂಬ ಯಂತ್ರ ಬ್ಲಾಸ್ಟ್ ಆಗಿದ್ದರಿಂದ ಓರ್ವ ಸಾವನ್ನಪ್ಪಿದ್ದು, ಉಳಿದವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ಸುರೆನ್ಸ್ ಮೂಲಕ ಕಾರ್ಮಿಕರಿಗೆ ಪರಿಹಾರ ಒದಗಿಸಲಾಗುವುದು, ಜೊತೆಗೆ ಆಡಳಿತ ಮಂಡಳಿಯಿಂದಲೂ ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.

Belagavi : ಫಾರ್ಮರ್ಸ್ ಸಕ್ಕರೆ ಕಾರ್ಖಾನೆಯಿಂದ ರೈತರ ಹೆಸರಲ್ಲಿ ಸಾಲ

ಕಾರ್ಮಿಕ ಕುಟುಂಬಗಳಿಗೆ ಸಿಗಬೇಕಿದೆ ಸೂಕ್ತ ಪರಿಹಾರ
ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಈ ಅವಘಡ ಕಾರ್ಮಿಕರನ್ನು ಭಯಭೀತರನ್ನಾಗಿಸಿದ್ದು, ಹಾನಿಗೊಳಗಾದ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ನ್ಯಾಯ ಸಿಗಬೇಕಿದೆ. ಜೊತೆಗೆ ಇನ್ಮುಂದಾದ್ರೂ ಇಂತಹ ಅವಘಡಗಳು ಆಗದಂತೆ ಎಲ್ಲ ಕಾರ್ಖಾನೆಗಳ ಆಡಳಿತ ಮಂಡಳಿಗಳು ಎಚ್ಚರಿಕೆ ವಹಿಸಿ, ಕಾರ್ಮಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

Latest Videos
Follow Us:
Download App:
  • android
  • ios