ಮಂಗಳೂರು (ಫೆ.13):  ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿ ಬಂಧನ ವಾರಂಟ್‌ ಹಿನ್ನೆಲೆಯಲ್ಲಿ ಹಿರಿಯ ನಟಿ ಪದ್ಮಜಾ ರಾವ್‌  ಮಂಗಳೂರಿನ 5ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿ ಬಾಂಡ್‌ ನೀಡಿ ಜಾಮೀನು ಪಡೆದುಕೊಂಡಿದ್ದಾರೆ.

ಮಂಗಳೂರಿನ ನಟ, ನಿರ್ದೇಶಕ ವೀರೇಂದ್ರ ಶೆಟ್ಟಿಒಡೆತನದ ವೀರೂ ಟಾಕೀಸ್‌ ಪ್ರೊಡಕ್ಷನ್‌ ಹೌಸ್‌ನಿಂದ ಪದ್ಮಜಾ ರಾವ್‌ ಹಂತ ಹಂತವಾಗಿ .41 ಲಕ್ಷ ಸಾಲ ಪಡೆದಿದ್ದರು. ಈ ವೇಳೆ ಸಾಲದ ಭದ್ರತೆಗಾಗಿ .40 ಲಕ್ಷಗಳ ಚೆಕ್‌ ನೀಡಿದ್ದರು. ಪದ್ಮಜಾ ರಾವ್‌ ಸಾಲ ಮೊತ್ತ ವಾಪಸ್‌ ನೀಡದೇ ಇದ್ದಾಗ ಚೆಕ್‌ ಅನ್ನು ಕಲೆಕ್ಷನ್‌ಗೆ ಹಾಕಲಾಗಿತ್ತು. ಆಗ ಖಾತೆಯಲ್ಲಿ ಹಣ ಇಲ್ಲದೆ ಚೆಕ್‌ ಬೌನ್ಸ್‌ ಆಗಿತ್ತು.

ನಟಿ ಪದ್ಮಜಾ ರಾವ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ

ಈ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗಲು ಆದೇಶಿಸಿದ್ದ ಸಮನ್ಸ್‌ ಸ್ವೀಕರಿಸಲು ನಿರಾಕರಿಸುತ್ತಿದ್ದ ಹಿನ್ನೆಲೆಯಲ್ಲಿ ಪದ್ಮಜಾ ರಾವ್‌ ವಿರುದ್ಧ ವಾರೆಂಟ್‌ ಜಾರಿಗೊಳಿಸಲಾಗಿತ್ತು.

ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸವಿದೆ :  ನನಗೆ ನಮ್ಮ ಕಾನೂನು, ನ್ಯಾಯಾಲಯದ ಮೇಲೆ ಸಂಪೂರ್ಣ ಭರವಸೆ ಇದೆ. ನನ್ನ ಮೇಲೆ ನನಗೆ ಪೂರ್ಣ ಭರವಸೆ ಇದೆ. ಈ ಪ್ರಕರಣದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ನೀವೆಲ್ಲ ಕಾದು ನೋಡಬೇಕು. ಈಗ ಏನು ಹೇಳಲು ಆಗುವುದಿಲ್ಲ.

-ಪದ್ಮಜಾ ರಾವ್‌, ಹಿರಿಯ ನಟಿ