ಬೆಂಗಳೂರಿನ ಟೆಕ್ಕಿ ಅತುಲ್ ನಂತರ, ಟಿಸಿಎಸ್ ಮ್ಯಾನೇಜರ್ ಮಾನವ್ ಶರ್ಮಾ ಪತ್ನಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾದ 390 ದಿನಗಳಲ್ಲೇ ಈ ಘಟನೆ ನಡೆದಿದೆ. ವರದಿಯ ಪ್ರಕಾರ, 2022ರಲ್ಲಿ ಕೌಟುಂಬಿಕ ಕಲಹದಿಂದ 5,576 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಜ್ಞರ ಪ್ರಕಾರ, ಹೊಂದಾಣಿಕೆಯ ಕೊರತೆ, ಆರ್ಥಿಕ ಸಮಸ್ಯೆಗಳು ಕಾರಣವಾಗಬಹುದು. ಪುರುಷರು ಕಾನೂನಿನ ರಕ್ಷಣೆ ಇಲ್ಲದೆ ಒಂಟಿಯಾಗುತ್ತಾರೆ ಎಂದು ಮಾನವ್ ಹೇಳಿದ್ದಾರೆ. 2015 ರಿಂದ 2022 ರವರೆಗೆ 8 ಲಕ್ಷಕ್ಕೂ ಹೆಚ್ಚು ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ (Bangalore Techie Atul Subhash) ಆತ್ಮಹತ್ಯೆ ನಂತ್ರ ಈಗ ಮಾನವ್ ಶರ್ಮಾ (Manav Sharma) ಆತ್ಮಹತ್ಯೆ ಸುದ್ದಿಯಲ್ಲಿದೆ. ಮಾನವ್ ಶರ್ಮಾ ಅವರನ್ನು ಅತುಲ್ 2 ಎಂದೇ ಕರೆಯಲಾಗ್ತಿದೆ. ಟಿಸಿಎಸ್ ಮ್ಯಾನೇಜರ್, ಆಗ್ರಾದ ಮಾನವ್ ಶರ್ಮಾ ಪತ್ನಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ನೇಣಿಗೆ ಶರಣಾಗುವ ಮುನ್ನ ಆತ್ಮಹತ್ಯೆಗೆ ಕಾರಣ ಪತ್ನಿ ಎಂದಿರುವ ಮಾನವ್ ಶರ್ಮಾ, ಪುರುಷರ ಬಗ್ಗೆ ಅನೇಕ ವಿಷ್ಯಗಳನ್ನು ಹೇಳಿದ್ದಾರೆ. ಮಾನವ್ ಶರ್ಮಾಗೆ ಮದುವೆಯಾಗಿ ಕೇವಲ 390 ದಿನಗಳ ಕಳೆದಿದ್ವು. ಆರಂಭದಲ್ಲಿ ಮುಂಬೈನಲ್ಲಿದ್ದ ಜೋಡಿ ಆಗ್ರಾಕ್ಕೆ ವಾಪಸ್ ಬಂದಿದ್ದರು. ಮಾನವ್ ಶರ್ಮಾ, ಆತ್ಮಹತ್ಯೆಗೂ ಮುನ್ನ, ಪತ್ನಿ ಇನ್ನೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು, ಪುರುಷರ ಬಗ್ಗೆಯೂ ಆಲೋಚನೆ ಮಾಡಿ, ಪುರುಷರು ಒಂಟಿಯಾಗಿರ್ತಾರೆ, ಅವರಿಗೆ ಕಾನೂನಿನಲ್ಲಿ ಯಾವುದೇ ರಕ್ಷಣೆ ಇಲ್ಲ ಎಂದಿದ್ದಾರೆ. ಪತ್ನಿಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ತಿರುವ ವ್ಯಕ್ತಿ ನಾನೊಬ್ಬನೇ ಅಲ್ಲ, ಅನೇಕರು ನನ್ನ ಸಾಲಿನಲ್ಲಿದ್ದಾರೆಂದು ಮಾನವ್ ಶರ್ಮಾ ಹೇಳಿದ್ದಾರೆ. ಮಾನವ್ ಶರ್ಮಾ ಹೇಳಿದ್ರಲ್ಲಿ ಸತ್ಯವಿದೆ. ವರದಿ ಒಂದರ ಪ್ರಕಾರ, ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಪುರುಷರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ.
ಪುರುಷರ ಆತ್ಮಹತ್ಯೆಗೆ ಕಾರಣ ಏನು? : ಎನ್ ಸಿಆರ್ ಬಿ ವರದಿ ಪ್ರಕಾರ, 2022 ರಲ್ಲಿ, ಶೇಕಡಾ 3.28 ರಷ್ಟು ಪುರುಷರು ಅಂದ್ರೆ ಸುಮಾರು 5,576 ಪುರುಷರು ವೈವಾಹಿಕ ಕಲಹದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೇಕಡಾ 21.7 ಪುರುಷರು ಕೌಟುಂಬಿಕ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಅಪರಾಧ ಬ್ಯೂರೋ ಕೌಟುಂಬಿಕ ಸಮಸ್ಯೆಯನ್ನು ವ್ಯಾಖ್ಯಾನಿಸಿಲ್ಲ. ಜಗಳ, ಮಾನಸಿಕ ಕಿರುಕುಳ, ದೈಹಿಕ ಕಿರುಕುಳದಂತಹ ವಿಷಯಗಳನ್ನು ಇದರಲ್ಲಿ ಸೇರಿಸಬಹುದು. ವಿವಾಹಿತ ಪುರುಷರ ಆತ್ಮಹತ್ಯೆಗೆ ಕೇವಲ ವರದಕ್ಷಿಣೆ ಮಾತ್ರ ಕಾರಣವಲ್ಲ ಎನ್ನುತ್ತಾರೆ ತಜ್ಞರು. ಇಲ್ಲಿ ಹಲವು ಸಮಸ್ಯೆಗಳಿವೆ. ಹೆಂಡತಿ, ಅತ್ತೆ-ಮಾವನ ಜೊತೆ ಹೊಂದಿಕೊಳ್ಳದಿರುವುದು, ಗಂಡ ಹೆಂಡತಿಗೆ ಹೆಚ್ಚು ಸಮಯ ನೀಡದಿರುವ ಕಾರಣ ನಡೆಯುವ ಜಗಳ ಸೇರಿದಂತೆ ಆರ್ಥಿಕ ಸಮಸ್ಯೆ ಕೂಡ ಇವರ ಆತ್ಮಹತ್ಯೆಗೆ ಕಾರಣವಾಗುತ್ತದೆ.
ಲೈಂಗಿಕ ಸಂಪರ್ಕಕ್ಕೆ ಸಹಕರಿಸದಿದ್ದಕ್ಕೆ ಚಾಕುವಿನಿಂದ ಚುಚ್ಚಿ ಮಹಿಳೆ ಕೊಂದವನಿಗೆ
ಕೆಲವೊಮ್ಮೆ ಮಹಿಳೆಯರು ಐಪಿಸಿಯ ಸೆಕ್ಷನ್ 498A ಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಪತಿ ಮತ್ತು ಕುಟುಂಬದವರ ವಿರುದ್ಧ ಸೇಡು ತೀರಿಸಿಕೊಳ್ಳಲು ವರದಕ್ಷಿಣೆ ಕಿರುಕುಳ ದೂರು ದಾಖಲಿಸ್ತಾರೆ ಎಂದು ಡಿಸೆಂಬರ್ 10, 2024 ರಂದು ವರದಕ್ಷಿಣೆ ವ್ಯವಸ್ಥೆ ಪ್ರಕರಣದ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ಹೇಳಿತ್ತು. ಅಷ್ಟೇ ಅಲ್ಲ ಕೋಲ್ಕತ್ತಾ ಹೈಕೋರ್ಟ್ ಕೂಡ ಮಹಿಳೆಯರು ಈ 498A ದುರುಪಯೋಗಪಡಿಸಿಕೊಳ್ತಾರೆ ಎಂದಿದೆ.
ಅಕ್ಕ ಎಂದು ಕರೆದು ಬಸ್‌ನಲ್ಲೇ ಅತ್ಯಾ*ಚಾರವೆಸಗಿದ್ದ ಹಿಸ್ಟರಿ ಶೀಟರ್ ಕಾಮುಕನ
ಅಂಕಿಅಂಶಗಳ ಪ್ರಕಾರ, 2015 ರಿಂದ 2022 ರವರೆಗೆ 8 ಲಕ್ಷ 9 ಸಾವಿರ ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಪ್ರಕಾರ, ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಪ್ರತಿ ವರ್ಷ 43,314 ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆ ಅರ್ಧದಷ್ಟಿದೆ. 2022 ರಲ್ಲಿ ಆತ್ಮಹತ್ಯೆ ಮಾಡಿಕೊಂಡ 1 ಲಕ್ಷ 70 ಸಾವಿರ ಪುರುಷರಲ್ಲಿ ಶೇಕಡಾ 58.2 ರಷ್ಟು ಜನರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್‌ಸಿಆರ್‌ಐಬಿ ವರದಿ ಹೇಳಿದೆ. ಶೇಕಡಾ 25.4 ರಷ್ಟು ಜನರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಸಮಸ್ಯೆ ಇಲ್ಲಿ ಮುಖ್ಯ ಕಾರಣವಾದ್ರೂ ಮಾನಸಿಕ ಖಿನ್ನತೆಗೊಳಗಾದ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳೋದಿಲ್ಲ. ಮನೋಜ್ ಗೆ ಆತ್ಮಹತ್ಯೆಯೊಂದೇ ದಾರಿಯಾಗಿರಲಿಲ್ಲ. ಪತ್ನಿಗೆ ವಿಚ್ಛೇದನ ನೀಡಿ ನೆಮ್ಮದಿ ಜೀವನ ನಡೆಸಬಹುದಿತ್ತು ಅನ್ನೋದು ತಜ್ಞರ ಅಭಿಪ್ರಾಯ.
