Asianet Suvarna News Asianet Suvarna News

ದರ್ಶನ್‌ ಫಾರ್ಮ್ ಹೌಸ್‌ನಲ್ಲಿ ಮ್ಯಾನೇಜರ್‌ ಸಾವು: ಈಗ ಅನುಮಾನ, ಮತ್ತೆ ತನಿಖೆ?

ಶ್ರೀಧರ್‌ ತಮ್ಮ ಡೆತ್‌ನೋಟ್‌ನಲ್ಲಿ ‘ನನ್ನ ಆತ್ಮಹತ್ಯೆಗೆ ನಾನೇ ಕಾರಣ’ ಎಂದು ಬರೆದಿದ್ದಾರೆ. ಅಲ್ಲದೆ ವಿಡಿಯೋವನ್ನೂ ಅವರು ಮಾಡಿದ್ದು, ಅದರಲ್ಲೂ ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದಿದ್ದಾರೆ. ಆದರೆ ಈ ಸಾವಿನ ಬಗ್ಗೆ ಅವರ ಆಪ್ತ ವಲಯ ಅನುಮಾನ ವ್ಯಕ್ತಪಡಿಸುತ್ತಿದೆ. 

Manager death in Darshan Farm House now suspicion investigation again gvd
Author
First Published Jun 19, 2024, 7:38 AM IST | Last Updated Jun 19, 2024, 7:38 AM IST

ಆನೇಕಲ್ (ಜೂ.19): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಪೊಲೀಸರ ವಶದಲ್ಲಿರುವ ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಎದುರಾಗಿದೆ. ಎರಡು ತಿಂಗಳ ಹಿಂದೆ ಆನೇಕಲ್‌ನಲ್ಲಿರುವ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನೇಜರ್‌ ಶ್ರೀಧರ್ (35) ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಇದೀಗ ಮತ್ತೆ ಚರ್ಚೆ ಶುರುವಾಗಿದ್ದು, ಈ ಪ್ರಕರಣವನ್ನು ತರಾತುರಿಯಲ್ಲಿ ಮುಚ್ಚಿಹಾಕಲಾಗಿದೆ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.

ಶ್ರೀಧರ್‌ ತಮ್ಮ ಡೆತ್‌ನೋಟ್‌ನಲ್ಲಿ ‘ನನ್ನ ಆತ್ಮಹತ್ಯೆಗೆ ನಾನೇ ಕಾರಣ’ ಎಂದು ಬರೆದಿದ್ದಾರೆ. ಅಲ್ಲದೆ ವಿಡಿಯೋವನ್ನೂ ಅವರು ಮಾಡಿದ್ದು, ಅದರಲ್ಲೂ ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದಿದ್ದಾರೆ. ಆದರೆ ಈ ಸಾವಿನ ಬಗ್ಗೆ ಅವರ ಆಪ್ತ ವಲಯ ಅನುಮಾನ ವ್ಯಕ್ತಪಡಿಸುತ್ತಿದೆ. ಪೊಲೀಸರು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿಲ್ಲ ಎಂದು ದೂರುತ್ತಿದ್ದಾರೆ. ಹಾಗಾಗಿ ಈಗಾಗಲೇ ಕೊಲೆ ಕೇಸ್‌ನಲ್ಲಿ ಪೊಲೀಸರಿಂದ ತೀವ್ರ ತನಿಖೆ ಎದುರಿಸುತ್ತಿರುವ ನಟ ದರ್ಶನ್‌ಗೆ ಮತ್ತೊಂದು ಪ್ರಕರಣ ಸುತ್ತಿಕೊಳ್ಳುವ ಲಕ್ಷಣ ಕಾಣಿಸುತ್ತಿದೆ.

ಆಗಿದ್ದು ಏನು: ದರ್ಶನ್‌ಗೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನ ಬಗ್ಗನದೊಡ್ಡಿಯಲ್ಲಿ 2.36 ಎಕರೆ ‘ದುರ್ಗಮ್ಮ’ ಹೆಸರಿನ ಫಾರ್ಮ್‌ ಹೌಸ್‌ ಇದೆ. ಇದರಲ್ಲಿ ಐಷಾರಾಮಿ ಮನೆಯನ್ನು ದರ್ಶನ್‌ ನಿರ್ಮಿಸಿದ್ದಾರೆ. ಇದರಲ್ಲಿ ಬಗ್ಗನದೊಡ್ಡಿ ಸಮೀಪದ ಕಗ್ಗಲೀಪುರ ಮೂಲದ ಶ್ರೀಧರ್‌ ಒಂದು ವರ್ಷದಿಂದ ಮ್ಯಾನೇಜರ್‌ ಆಗಿದ್ದರು. ಏ.14ರಂದು ಡೆತ್‌ನೋಟ್‌ ಬರೆದು ಜೊತೆಗೆ ವಿಡಿಯೋ ಮಾಡಿದ್ದರು. ಅದರಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಿದ್ದರು. ಏ.17ರಂದು ಶ್ರೀಧರ್‌ ಸ್ನೇಹಿತ ಶ್ರೀಧರ್‌ ಸಾವಿನ ಬಗ್ಗೆ ಆನೇಕಲ್‌ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರಿಗೆ ಫೌರ್ಮ್‌ ಹೌಸ್‌ನ ಬಂಡೆಯ ಮೇಲೆ ರಕ್ತಸಿಕ್ತವಾಗಿದ್ದ ಶ್ರೀಧರ್‌ ಮೃತದೇಹ ಸಿಕ್ಕಿತ್ತು. ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ಯುಡಿಆರ್‌ ಪ್ರಕರಣ ದಾಖಲಿಸಿದ್ದಾರೆ. 

ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ್ದರೆ ದರ್ಶನ್‌ ಮನೆ ತೆರವು: ಡಿಕೆಶಿ

ಅನುಮಾನವನ್ನು ಸೃಷ್ಟಿಸಿದೆ ಎಂದು ಜನರು ಆರೋಪಿಸಿದ್ದಾರೆ. ಶ್ರೀಧರ್‌ಗೆ ವಿಷ ಸಿಕ್ಕಿದ್ದು ಹೇಗೆ? ವಿಡಿಯೋ ಮಾಡಿ ಸಾವನ್ನಪ್ಪಿದ 2 ದಿನ ತಡವಾಗಿ ಶವ ಸಿಕ್ಕಿದ್ದು ಏಕೆ? ಈ ಪ್ರಕರಣದಲ್ಲಿ ಫಾರ್ಮ್‌ ಮಾಲೀಕ ದರ್ಶನ್‌ ವಿಚಾರಣೆ ಮಾಡದೆ ನಿರ್ಲಕ್ಷ್ಯ ತೋರಿದ್ದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಆನೇಕಲ್ ಡಿವೈಎಸ್ಪಿ ಮೋಹನ್ ಕನ್ನಡಪ್ರಭದೊಂದಿಗೆ ಮಾತನಾಡಿ, ಶ್ರೀಧರ್‌ ಸಾವಿನ ಬಗ್ಗೆ ಪೊಲೀಸರು ಚಾಚೂ ತಪ್ಪದೆ ಕೆಲಸ ಮಾಡಿದ್ದಾರೆ. ಶವ ಪರೀಕ್ಷೆ ವರದಿ, ಸ್ಥಳ ಮಾಹಿತಿ ಎಲ್ಲವೂ ತಾಳೆ ಆಗಿದೆ. ಎಲ್ಲೂ ಲೋಪವಿಲ್ಲ ಎಂದು ಸ್ಪಷ್ಟನೆ ನೀಡಿದರು.

Latest Videos
Follow Us:
Download App:
  • android
  • ios