ಬೆಂಗಳೂರು(ಏ. 08)  ಮದುವೆ ಆಗೋದಾಗಿ ನಂಬಿಸಿ ಮಹಿಳಾ ಟೆಕ್ಕಿಗೆ 10 ಲಕ್ಷ ವಂಚನೆ ಮಾಡಿದವ ಎಸ್ಕೇಪ್ ಆಗಿದ್ದಾನೆ. ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ಮಹಿಳಾ ಟೆಕ್ಕಿಗೆ ದೋಖಾ ಮಾಡಿದ್ದಾನೆ.

ಕಳೆದ ಫೆಬ್ರವರಿಯಲ್ಲಿ ತನ್ನ ಮದುವೆ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಯುವತಿ ಅಕೌಂಟ್ ಗೆ ಮದುವೆ ಪ್ರಪೋಸಲ್ ಕಳಿಸಿದ್ದ ಮಧ್ಯಪ್ರದೇಶ ಮೂಲದ ಯುವಕ ಅದಿಕರ್ಶ್ ಶರ್ಮಾ ಬೆಂಗಳೂರಿನ ಯುವತಿಗೆ ವಂಚನೆ   ಮಾಡಿದ್ದಾನೆ.

ದೊಡ್ಡದೊಡ್ಡವರ ಜತೆ ಪೋಟೋ ಹಂಚಿಕೊಂಡು ಬೃಹತ್ ವಂಚನೆ

ಬೆಂಗಳೂರಿನಲ್ಲಿ ಬಿಸಿನೆಸ್ ಮಾಡ್ತೀನಿ ಅಮೌಂಟ್ ಶಾರ್ಟೇಜ್ ಇದೆ ಅಂತ ಯುವತಿ ಬಳಿ ಹೇಳಿಕೊಂಡಿದ್ದ. ಮದುವೆಯಾಗೋ ಹುಡುಗ ಅಂತ ಬ್ಯಾಂಕಿನಿಂದ 10 ಲಕ್ಷ ಲೋನ್ ಪಡೆದ ಮಹಿಳಾ ಟೆಕ್ಕಿ  ನೀಡಿದ್ದರು. ಈಗ ಮೊಬೈಲ್ ಪೊನ್ ಸ್ವಿಚ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಮೋಸಹೋದ ಮಹಿಳಾ ಟೆಕ್ಕಿಯಿಂದ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.