ಬೆಂಗಳೂರು(ಜ. 10)   ಇದೊಂದು ವಿಚಿತ್ರ ಪ್ರಕರಣ. ಆದರೆ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಲೇಬೇಕು. ಅದರಲ್ಲೂ ದಂಪತಿ ಈ ಸುದ್ದಿಯನ್ನು ಓದಲೇಬೇಕು.

ದಂಪತಿ ಖಾಸಗಿ ವಿಡಿಯೋಗಳನ್ನ ಸೆರೆಹಿಡಿದು ಬೆದರಿಕೆ ಹಾಕುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿಯಿಂದ ದಂಪತಿಗೆ ಬೆದರಿಕೆ ಕರೆ ಬರುತ್ತಿರುವ ಬಗ್ಗೆ  ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

ಬಿಜೆಪಿ ನಾಯಕ-ನಾಯಕಿಯ 13 ನಿಮಿಷದ ಖಾಸಗಿ ವಿಡಿಯೋ ವೈರಲ್

ಮಹಿಳೆಯೆ ವ್ಯಕ್ತಿ ಅಶ್ಲೀಲ ಸಂದೇಶಗಳನ್ನು ರವಾನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪತ್ನಿ ನಂಬರ್ ನ ಹ್ಯಾಕ್ ಮಾಡಿ ದಂಪತಿ ಬಗ್ಗೆ ತಿಳಿದುಕೊಂಡಿರುವ ವ್ಯಕ್ತಿ ನೀವು ಇಂತಿಷ್ಟು ಹಣ ಕೊಡದಿದ್ದರೆ ನಿಮ್ಮ ಖಾಸಗಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.

ಯಾರೋ ಗೊತ್ತಿರುವವರೇ ಈ ರೀತಿ ಮಾಡುತ್ತಿರುವ  ಅನುಮಾನ ವ್ಯಕ್ತಪಡಿಸಿ ದೂರು ನೀಡಲಾಗಿದೆ. ದೂರಿನ ಆಧಾರದ ಮೇಲೆ ಅಪರಿಚಿತ ವ್ಯಕ್ತಿಗೆ  ಪೊಲೀಸರು ಬಲೆ ಬೀಸಿದ್ದಾರೆ.