ಬೆಳಗಾವಿ(ಡಿ.30): ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೀತಿಯನ್ನು ನಿರಾಕರಿಸಿದ ವಿವಾಹಿತ ಮಹಿಳೆಯನ್ನು ಬೆಳ್ಳಂ ಬೆಳಿಗ್ಗೆ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಕೊಲೆಯಾದ ಸುಧಾ ಹಡಪದ ಬೈಲಹೊಂಗಲ ತಾಲೂಕಿನ ಮೂಗುಬಸವ ಗ್ರಾಮದ ನಿವಾಸಿ. ವಿವಾಹಿತೆಯಾಗಿದ್ದ ಸುಧಾಳ ಪ್ರೀತಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ಈರಣ್ಣ ಜಗಜಂಪಿ ತನ್ನನ್ನು ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ. ಆದರೆ ಸುಧಾ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. 

ಇದರಿಂದ ಕೋಪಗೊಂಡಿದ್ದ ಈರಣ್ಣ ಸುಧಾ ಕೆಲಸ ಮಾಡುತ್ತಿದ್ದ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ಬೆಳ್ಳಂ ಬೆಳಗ್ಗೆ ಆಕೆಯನ್ನು ಕೊಚ್ಚಿ ಕೊಲೆಗೈದಿದ್ದಾನೆ. ಸದ್ಯ ಸುಧಾ ಮೃತದೇಹ ಶವಾಗಾರಕ್ಕೆ ಶಿಫ್ಟ್ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಎಪಿಎಂಸಿ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.