ಉತ್ತರ ಕನ್ನಡದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 4 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಆಸ್ತಿ ವಿಚಾರಕ್ಕೆ ಓರ್ವನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಮೂವರು ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಕಾರವಾರ (ಮೇ.11): ಉತ್ತರ ಕನ್ನಡದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 4 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಆಸ್ತಿ ವಿಚಾರಕ್ಕೆ ಮಚ್ಚಿನಿಂದ ಹೊಡೆದು ವ್ಯಕ್ತಿಯ ಕೊಲೆ ಮಾಡಿರುವ ಘಟನೆ. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಕರಲಕಟ್ಟ ಗ್ರಾಮದ ಬಳಿ ನಡೆದಿದೆ. ಮಚ್ವಿನಿಂದ ಎರಡು ಕಾಲನ್ನು ಕತ್ತರಿಸಿ ಕೊಲೆ ಮಾಡಲಾಗಿದೆ. ಪರಶುರಾಮ ತೋರಸ್ಕರ (52) ಕೊಲೆಯಾದ ವ್ಯಕ್ತಿ.

ಪರುಶುರಾಮ 2021ರಲ್ಲಿ ಕರಲಕಟ್ಟ ಗ್ರಾಮದ ಬಳಿ ಆಸ್ತಿ ಖರೀದಿ ಮಾಡಿದ್ದರು. ಆಸ್ತಿ ಖರೀದಿ ವಿಚಾರದಲ್ಲಿ ಸ್ಥಳೀಯ ವ್ಯಕ್ತಿಯೋರ್ವನ ಜತೆ ನಿರಂತರ ಕಲಹ ಉಂಟಾಗುತ್ತಿತ್ತು. ಈಗಲೂ ಆಸ್ತಿಯ ವ್ಯಾಜ್ಯ ಕೋರ್ಟ್ ನಲ್ಲಿದೆ. ಯಡೋಗಾದ ರೈತನಿಂದ ಪರಶುರಾಮ 3.5 ಎಕರೆ ಆಸ್ತಿ ಖರೀದಿ ಮಾಡಿದ್ದರು. ಇವರು ಫಾರೆಸ್ಟ್ ಡಿಪಾರ್ಟ್ಮೆಂಟ್ ನಲ್ಲಿ ವಾಚ್‌ಮೆನ್ ಆಗಿ ಕೆಲಸ ಮಾಡುತ್ತಿದ್ದರು.

ಪರೀಕ್ಷೆಯಲ್ಲಿ ಫೇಲ್‌: 8 ವಿದ್ಯಾರ್ಥಿಗಳ ಆತ್ಮಹತ್ಯೆ; ಮತ್ತಿಬ್ಬರಿಂದ ಸೂಸೈಡ್‌ಗೆ ಯತ್ನಚರಿಮ

ಮಚ್ಚಿನಿಂದ ಎರಡು ಕಾಲು ಕತ್ತರಿಸಿದ ಪರಿಣಾಮ ತೀವ್ರ ರಸ್ತಸ್ರಾವವಾಗಿ ಹೊಲದಲ್ಲಿ ಪರಶುರಾಮ ಸಾವನ್ನಪ್ಪಿದರು. ಸದ್ಯ ಕೊಲೆಗಾರಿನಿಗೆ ಬಲೆ ಬೀಸಿದ್ದಾರೆ. ಸ್ಥಳಕ್ಕೆ ಹಳಿಯಾಳ ಪೊಲೀಸ್‌ರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹಳಿಯಾಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

SHIVAMOGGA: ಖಾಸಗಿ ಬಸ್‌ಗಳ ನಡುವೆ ಭೀಕರ ಅಪಘಾತ: 10ಕ್ಕೂ ಅಧಿಕ ಸಾವು, 70 ಮಂದಿಗೆ ಗಾಯ!

ಬಾವಿಗೆ ಬಿದ್ದು ಸಾವು:
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನ ಕಟ್ಟ ಗ್ರಾಮದಲ್ಲಿ ಬಾವಿಗೆ ಬಿದ್ದು ಮೂರು ಜನರ ದುರಂತ ಸಾವು ಕಂಡಿದ್ದಾರೆ. ಗೋವಿಂದ ಸೋಮಯ್ಯ ಪೂಜಾರಿ, ಗಣೇಶ್ ರಾಮದಾಸ್ ಶೇಟ್, ಸುರೇಶ್ ನಾಯರ್ ಬಾವಿಗೆ ಬಿದ್ದು ಮೃತ ಪಟ್ಟಿದ್ದಾರೆ. ಬಾವಿಯಲ್ಲಿ ಬಿದ್ದು ಹೋಗಿದ್ದ ಪಂಪ್ ಸೆಟ್ ತೆಗೆಯಲು ಬಾವಿಗೆ ಒಬ್ಬರು ಇಳಿದಿದ್ದರು. ಆದರೆ, ವ್ಯಕ್ತಿ ಮೇಲಕ್ಕೆ ಬರದ ಕಾರಣ ರಕ್ಷಣೆಗೆ ಇಳಿದಿದ್ದ ಇಬ್ಬರು ಸೇರಿ ಮೂವರೂ ಬಾವಿಯಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.