ಸೋಂಕಿನ ಭಯಕ್ಕೆ ವೃದ್ಧೆ ಜತೆ ಕುಟುಂಬ ಮನೆಯಿಂದ ಹೊರಹಾಕಿದ ಮಾಲೀಕ
ಕೊರೋನಾ ಎರಡನೇ ಅಲೆ ಆರ್ಭಟ/ ಸೋಂಕಿನ ಭಯಕ್ಕೆ ಬಾಡಿಗೆದಾರರನ್ನು ಮನೆಯಿಂದ ಹೊರಹಾಕಿದ ಮಾಲೀಕ/ ಸ್ಮಶಾನದಲ್ಲಿ ಆಶ್ರಯ ಪಡೆದುಕೊಂಡ ಕುಟುಂಬ/
ಎಲ್ಲೂರು(ಏ. 22) ಕೊರೋನಾ ಕಾರಣಕ್ಕೆ ಎಂತೆಂಥ ಅವಘಡಗಳು ನಡೆಯುತ್ತಿವೆ ಎಂದು ಹೇಳಲು ಸಾಧ್ಯವಿಲ್ಲ. ಕೊರೋನಾ ಶಂಕಿತ ಎಂಬ ಕಾರಣಕ್ಕೆ ಮನೆಯ ಬಾಡಿಗೆದಾರರನ್ನು ಮಾಲೀಕ ಹೊರಗೆ ಅಟ್ಟಿದ್ದಾನೆ.
80 ವರ್ಷದ ಮಹಿಳೆ ಮತ್ತು ಆಕೆಯ ಪುತ್ರರನ್ನು ಮನೆಯಿಂದ ಹೊರಹಾಕಲು ಮಾಲೀಕ ಯತ್ನ ಮಾಡಿದ್ದಾನೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಅಕಿವೆಡು ಗ್ರಾಮದಿಂದ ಪ್ರಕರಣ ವರದಿಯಾಗಿದೆ. ಎಲ್ಲೂ ಆಶ್ರಯ ಸಿಗದೆ ಸ್ಮಶಾನದಲ್ಲಿ ದಿನ ಕಳೆಯಬೇಕಾದ ಸ್ಥಿತಿ ಬಂದಿದೆ.
ಕರ್ನಾಟಕದಲ್ಲಿ ದಿನವೊಂದಕ್ಕೆ 25 ಸಾವಿರ ಪ್ರಕರಣ
ವೃದ್ಧೆ ಯೆಕುಲ ವೀರಮ್ಮ ಮತ್ತು ಅವಳ ಇಬ್ಬರು ಪತ್ರರನ್ನು ಏ. 19 ರಂದು ಮಾಲೀಕ ಮನೆಯಿಂದ ಹೊರಹಾಕಿದ್ದಾನೆ. ಮಾಲೀಕ ಪೀಠಲಾ ರಾಜು ಸೋಂಕಿನ ಭಯದಿಂದ ಹೀಗೆ ಮಾಡಿದ್ದಾನೆ.
ಅನಾರೋಗ್ಯಕ್ಕೆ ತುತ್ತಾಗಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾಗಿ ನಂತರ ಬಿಡುಗಡೆಯಾಗಿದ್ದರು. ಆಸ್ಪತ್ರೆಯಿಂದ ಮನೆಗೆ ಹೋದಾಗ ಮಾಲೀಕ ನಿಮಗೆ ಕೊರೋನಾ ಇದೆ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಒತ್ತಾಯಪೂರ್ವಕವಾಗಿ ಹೊರದಬ್ಬಿದ್ದಾನೆ.
ಬೀದಿಗೆ ಬಿದಗ್ದ ಕುಟುಂಬಕ್ಕೆ ಏನು ಮಾಡಬೇಕು ಎಂಬುದೇ ಗೊತ್ತಾಗಿಲ್ಲ. ಸ್ಮಶಾನವೊಂದರಲ್ಲಿ ಆಶ್ರಯ ಪಡೆದುಕೊಳ್ಳಬೇಕಾದ ಸ್ಥಿತಿ ಬಂದಿದೆ. ಪಶ್ಚಿಮ ಗೋದಾವರಿ ಎಸ್‌ಪಿ ನಾರಾಯಣ್ ನಯಾ ಅವರು ಘಟನೆಯ ಕರಾಳತೆಯನ್ನು ವಿವರಿಸಿದ್ದಾರೆ. ಅಕೀವೀಡು ಸಬ್ ಇನ್ಸ್‌ಪೆಕ್ಟರ್ ವೀರಭದ್ರ ರಾವ್ ಕ್ರಮ ತೆಗೆದುಕೊಂಡು ಕುಟುಂಬವನ್ನು ವಾಪಸ್ ಮನೆಗೆ ಕಳುಹಿಸಿ ಕೊಡಲಾಗಿದೆ. ಮನೆ ಮಾಲೀಕನಿಗೆ ಎಚ್ಚರಿಕೆ ನೀಡಲಾಗಿದೆ.