Asianet Suvarna News Asianet Suvarna News

ಯುವತಿಯನ್ನು ಮುಟ್ಟಿದ್ದಕ್ಕೆ ಬೂಟಿನ ಮಾಲೆ ಹಾಕಿ ಎಂಜಲು ನೆಕ್ಕಿಸಿದರು!

ಉತ್ತರಪ್ರದೇಶದ ಸಿದ್ಧಾರ್ಥನಗರದಲ್ಲಿ ಹೇಯ ಘಟನೆ. ಯುವತಿಯನ್ನು ಮುಟ್ಟಿದ್ದಕ್ಕೆ ಬೂಟಿನ ಮಾಲೆ ಹಾಕಿ ಎಂಜಲು ನೆಕ್ಕಿಸಿದರು. 

Man forced to lick spit paraded with shoe garland in uttar pradesh gow
Author
First Published Dec 10, 2023, 10:50 AM IST

ಸಿದ್ಧಾರ್ಥನಗರ (ಉ.ಪ್ರ.): ಯುವತಿಯನ್ನು ಅನುಚಿತವಾಗಿ ಮುಟ್ಟಿದ ಆರೋಪದ ಮೇಲೆ 75 ವರ್ಷದ ವೃದ್ಧನೊಬ್ಬನಿಗೆ ಬೂಟಿನ ಹಾರ ತೊಡಿಸಿ ತನ್ನ ಎಂಜಲನ್ನೇ ನೆಕ್ಕುವಂತೆ ಮಾಡಿದ ಘಟನೆಯ ವಿಡಿಯೋ ವೈರಲ್‌ ಆಗಿದೆ.

ಸಂತ್ರಸ್ತನನ್ನು ತಿಘಾರಾ ಗ್ರಾಮದ ಮೊಹಬ್ಬತ್‌ ಅಲಿ ಎಂದು ಗುರುತಿಸಲಾಗಿದೆ. ಈ ಘಟನೆಯ ಸಂಬಂಧ ಪೊಲೀಸರು ಜಾಫರ್, ಅಮನ್‌ ಪಾಂಡೆ, ಅಖಿಲೇಶ್‌ ಸಾಹನಿ ಮತ್ತು ಘನಶ್ಯಾಮ್ ತಿವಾರಿ ಎಂಬುವರನ್ನು ಬಂಧಿಸಲಾಗಿದೆ.

ವ್ಯಕ್ತಿಯೊಬ್ಬ ಅಲಿ ವಿರುದ್ಧ, ತನ್ನ ಮಗಳನ್ನು ಅಲಿ ಅನುಚಿತವಾಗಿ ಮುಟ್ಟಿದ ಎಂದು ಆರೋಪಿಸಿ ದೂರು ನೀಡಿದ್ದ. ಇದರ ಬೆನ್ನಲ್ಲೇ ಈಗ ಬಂಧಿತರಾಗಿರುವ ಮೂವರು ಅಲಿಗೆ ಬೂಟಿನ ಹಾರ ಹಾಕಿ ಎಂಜಲು ನೆಕ್ಕಿಸಿ ಮುಖಕ್ಕೆ ಕಪ್ಪು ಮಸಿ ಹಚ್ಚಿದ್ದರು. ವಿಡಿಯೋ ವೈರಲ್‌ ಆದ ನಂತರ ಮೂವರನ್ನೂ ಬಂಧಿಸಲಾಗಿದೆ.

ದುಡಿಯಲು ಹೋಗು ಎಂದಿದ್ದಕ್ಕೆ ಪತ್ನಿಯನ್ನ ಕೊಂದು ತಾನೂ ಸಾವಿಗೆ ಶರಣಾದ ಪತಿರಾಯ!

ಉತ್ತರ ಪ್ರದೇಶದಲ್ಲಿ ಅಮಾನುಷ ಘಟನೆ: ಇಬ್ಬರ ಬಂಧನ
ಗಾಜಿಯಾಬಾದ್: ಮದುವೆ ಸಮಾರಂಭದಲ್ಲಿ ವೇಟರ್‌ (ಮಾಣಿ) ತೆಗೆದುಕೊಂಡು ಹೋಗುತ್ತಿದ್ದ ಎಂಜಲು ತಟ್ಟೆಗಳನ್ನು ಅಲ್ಲಿದ್ದ ಅತಿಥಿಗಳು ಮುಟ್ಟಿದ ಎಂಬ ಕಾರಣಕ್ಕೆ ಭಾರೀ ಜಗಳ ನಡೆದು, ಅದು ವೇಟರ್‌ನ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ. ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಈ ಕುರಿತಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಇಬ್ಬರು ಶಿಕ್ಷಕರ ಅಮಾನತು

ಆಗಿದ್ದೇನು?:
ಘಾಜಿಯಾಬಾದ್‌ನ ಪುಸ್ತಾ ರಸ್ತೆಯಲ್ಲಿರುವ ಛತ್ರದಲ್ಲಿ ನ.17 ರಂದು ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ವೇಟರ್‌ ಪಂಕಜ್‌ (26) ಎಂಬಾತ ಎಂಜಲು ತಟ್ಟೆಗಳಿದ್ದ ಟ್ರೇ ಅನ್ನು ತೆಗೆದುಕೊಂಡು ಹೋಗುತ್ತಿದ್ದ. ಆಗ ಅಲ್ಲಿದ್ದ ಅತಿಥಿಗಳಾದ ಮನೋಜ್‌ ಮತ್ತು ಅಮಿತ್‌ ಎಂಬುವವರಿಗೆ ಆ ತಟ್ಟೆಗಳು ತಾಗಿವೆ. ಈ ವೇಳೆ ಜಗಳ ನಡೆದು, ಅಮಿತ್‌ ಮತ್ತು ಮನೋಜ್‌ ಪಂಕಜ್‌ನನ್ನು ಕೊಂದೇ ಬಿಟ್ಟಿದ್ದಾರೆ.

Follow Us:
Download App:
  • android
  • ios