2008ರಲ್ಲಿ ನಾಲ್ಕು ವರ್ಷದ ಮಗುವಿನ ಮೇಲೆ ದಾರುಣವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದಲ್ಲಿ ಬಂಧಿತನಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ತಿರಸ್ಕರಿಸಿದ್ದಾರೆ. 

ನವದೆಹಲಿ (ಮೇ.4): 4 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ತಿರಸ್ಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ. 2008ರಲ್ಲಿ ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿತ್ತು. 2017ರ ಮೇ 3 ರಂದು ಸುಪ್ರೀಂ ಕೋರ್ಟ್‌ ಈ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ವಸಂತ ಸಂಪತ್‌ ದುಪಾರೆಯ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕಾರ ಮಾಡಿತ್ತು. ವಸಂತ ಸಂಪತ್‌ ದುಪಾರೆ ಕೇಂದ್ರ ಗೃಹ ಸಚಿವಾಲಯದ ಮೂಲಕ ಕಳಿಸಿದ್ದ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿಗಳ ಕಾರ್ಯಾಲಯ ಮಾರ್ಚ್‌ 28 ರಂದು ಸ್ವೀಕರಿಸಿತ್ತು. 'ಈ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿಗಳು (ಏಪ್ರಿಲ್‌ 10 ರಂದು) ತಿರಸ್ಕರಿಸಿದ್ದಾರೆ' ಎಂದು 2023 ರ ಏಪ್ರಿಲ್ 28 ರಂತೆ ರಾಷ್ಟ್ರಪತಿಗಳ ಸಚಿವಾಲಯದಿಂದ ಅಪ್‌ಡೇಟ್‌ ಮಾಡಲಾದ ಕ್ಷಮಾದಾನ ಅರ್ಜಿಯ ಸ್ಥಿತಿಯ ಕುರಿತು ಹೇಳಿಕೆ ತಿಳಿಸಿದೆ. 2017 ರಲ್ಲಿ ಸುಪ್ರೀಂ ಕೋರ್ಟ್, 'ತೀರಾ ಕೆಟ್ಟ ಸಂದರ್ಭ ಇದು ಮತ್ತು ನಾಲ್ಕು ವರ್ಷದ ಮಗುವನ್ನು ಕೊಂದ ಅನಾಗರಿಕ ವಿಧಾನವು ಯಾವ ಶಿಕ್ಷೆಗೂ ಇವರನ್ನು ಕಡಿಮೆ ಇಲ್ಲದಂತೆ ಮಾಡುತ್ತದೆ' ಎಂದು ಹೇಳಿತ್ತು.

2014ರ ನವೆಂಬರ್ 26 ರಂದು, 2008 ರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮಹಾರಾಷ್ಟ್ರ ನಿವಾಸಿ ದುಪಾರೆಗೆ ಮರಣದಂಡನೆ ವಿಧಿಸುವ ವಿಚಾರಣಾ ನ್ಯಾಯಾಲಯದ ಹಾಗೂ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿದಿತ್ತು. ತನಗೆ ಮರಣದಂಡನೆ ವಿಧಿಸಿದ ವಿಚಾರಣಾ ನ್ಯಾಯಾಲಯದಲ್ಲಿ ತನ್ನ ವಾದವನ್ನು ಮಂಡಿಸಲು ತನಗೆ ನ್ಯಾಯಯುತವಾದ ಅವಕಾಶವನ್ನು ನೀಡಲಾಗಿಲ್ಲ ಎಂದು ಪ್ರತಿಪಾದಿಸಿದ ದುಪಾರೆ ಅವರ ಮನವಿಯನ್ನು ಪರಿಶೀಲಿಸಲು 2016ರ ಜುಲೈ 14 ರಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತ್ತು. 

ಅಪರಾಧಿಗೆ ನೀಡಲಾದ ಮರಣದಂಡನೆಯನ್ನು ಎತ್ತಿಹಿಡಿಯುವಾಗ, ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರವು "ಕತ್ತಲೆಯಲ್ಲಿ ಆಕೆಯ ಘನತೆಯ ಮೇಲೆ ಮಾಡಿದ ದೈತ್ಯಾಕಾರದ ಅನಾಚಾರ" ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. 

ಏನಿದು ಘಟನೆ: ಪ್ರಕರಣದ ಘಟನೆಗಳ ಅನುಕ್ರಮವನ್ನು ಉಲ್ಲೇಖಿಸಿದ ನ್ಯಾಯಾಲಯವು ಈ ಬಾಲಕಿಯ ಪಕ್ಕದ ಮನೆಯಲ್ಲಿಯೇ ವಾಸವಿದ್ದ ವಸಂತ್‌ ದುಪಾರೆ, ಆಕೆಗೆ ಚಾಕೆಲೆಟ್‌ ನೀಡುವ ಆಮಿಷವೊಡ್ಡಿ ಅತ್ಯಾಚಾರ ಎಂದರೇನು ಅಂತಲೂ ಗೊತ್ತಿಲ್ಲದ ಮಗುವಿನ ಮೇಲೆ ರೇಪ್‌ ಮಾಡಿದ್ದ. ಬಳಿಕ ಆಕೆಯ ತಲೆಯ ಮೇಲೆ ಎರಡು ಭಾರವಾದ ಕಲ್ಲುಗಳನ್ನು ಎತ್ತಿಹಾಕಿ ಸಾಯಿಸಿದ್ದ ಎಂದು ಹೇಳಿದೆ.

ಬಿಲ್ಕಿಸ್‌ ಬಾನು ಪ್ರಕರಣ, ಯಾವ ಆಧಾರದಲ್ಲಿ ರೇಪಿಸ್ಟ್‌ಗಳಿಗೆ ಕ್ಷಮೆ : ಸುಪ್ರೀಂಕೋರ್ಟ್ ಪ್ರಶ್ನೆ

ಒಂದೊಂದು ಕಲ್ಲು ಕ್ರಮವಾಗಿ 8.5 ಕೆಜಿ ಹಾಗೂ 7.5 ಕೆಜಿ ಭಾರವಿತ್ತು ಎಂದು ಕೋರ್ಟ್‌ ತಿಳಿಸಿದೆ. ಮಗುವನ್ನು ಈತ ಸೈಕಲ್‌ ಮೇಲೆ ಕೂರಿಸಿಕೊಂಡು ಹೋಗಿದ್ದನ್ನು ಕೆಲವು ಪ್ರತ್ಯಕ್ಷದರ್ಶಿಗಳು ಕೂಡ ನೋಡಿದ್ದಾರೆ. ಇನ್ನು ಬಾಲಕಿಯನ್ನು ಸಾಯಿಸಿದ ಸ್ಥಳವನ್ನು ತೋರಿಸಿದ ವಸಂತ್‌ ದುಪಾರೆ, ಅಲ್ಲಿಯೇ ಇದ್ದ ನಲ್ಲಿಯಲ್ಲಿ ರಕ್ತವಾದ ಬಟ್ಟೆಯನ್ನು ತೊಳೆದುಕೊಂಡಿದ್ದೇ ಎನ್ನುವುದನ್ನೂ ವಿವರಿಸಿದ್ದ.

ಟ್ರಂಪ್ ಮತ್ತೊಂದು ವಿವಾದಾತ್ಮಕ ನಿರ್ಧಾರ, ಅಮೆರಿಕದಲ್ಲಿ ಕಂಡುಕೇಳರಿಯದ ಬೆಳವಣಿಗೆ!