ಭಟ್ಕಳ(ಏ.24): ಪುಣೆಯಿಂದ ಆಗಮಿಸಿ ಮುರ್ಡೇಶ್ವರ ವಸತಿ ಗೃಹವೊಂದರಲ್ಲಿ ಕ್ವಾರಂಟೈನ್‌ ಆಗಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಘಟನೆ ನಡೆದಿದೆ. ಬೇಂಗ್ರೆಯ ಚಿಟ್ಟಿಹಕ್ಲ ಬೊಗ್ರಿಜಡ್ಡು ನಿವಾಸಿ ವೆಂಕಟೇಶ ಸುಕ್ರಯ್ಯ ದೇವಡಿಗ (28) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಅವರು 13 ವರ್ಷಗಳಿಂದ ಪುಣೆಯಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ವಾರ ಪುಣೆಯಿಂದ ಮುರ್ಡೇಶ್ವರಕ್ಕೆ ಬಂದಿದ್ದರು. ಪುಣೆಯಲ್ಲಿ ಕೊರೋನಾ ಹೆಚ್ಚಾಗಿರುವುದರಿಂದ ಮನೆಗೆ ಹೋಗದೆ ಮುರ್ಡೇಶ್ವರದ ಲಾಡ್ಜ್‌ನಲ್ಲಿ ರೂಮ್‌ ಮಾಡಿಕೊಂಡಿದ್ದರು. 

ಕೋವಿಡ್ ಸೋಂಕಿತ ಆಸ್ಪತ್ರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ

ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಲಾಡ್ಜ್‌ನ ಕಿಟಕಿಯ ಮೇಲ್ಬದಿಯ ಕಬ್ಬಿಣದ ಸರಳಿಗೆ ಟವೆಲ್‌ ಕಟ್ಟಿ, ಟವೆಲಿನ ಇನ್ನೊಂದು ತುದಿಯನ್ನು ತನ್ನ ಕುತ್ತಿಗೆಗೆ ಕಟ್ಟಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಅವರ ಸಹೋದರ ಗಣಪತಿ ದೇವಡಿಗ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.