ಲುಧಿಯಾನ, (ನ.07): ಕಟ್ಟಿಕೊಂಡ  ಹೆಂಡ್ತಿ ಸ್ನಾನ ಮಾಡುವ ವಿಡಿಯೋ, ಫೋಟೋಗಳನ್ನು ತೆಗೆದುಕೊಂಡ ಪತಿಯೊಬ್ಬ ಹಣಕ್ಕಾಗಿ ಬ್ಲಾಕ್​ಮೇಲ್​ ಮಾಡಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ. 

 ಪತಿ ಆಕೆಗೆ ಗೊತ್ತಾಗದಂತೆ ಬಾತ್​ರೂಂನಲ್ಲಿ ಕ್ಯಾಮೆರಾ ಅಡಗಿಸಿಟ್ಟಿದ್ದಾನೆ. ನಂತರ ಅದರಲ್ಲಿ ಚಿತ್ರೀಕರಣವಾದ ವಿಡಿಯೋ, ಫೋಟೋಗಳನ್ನಿಟ್ಟುಕೊಂಡು ಆಕೆಗೆ ಹಣಕ್ಕಾಗಿ ಕಿರುಕುಳ ನೀಡಿದ್ದಾನೆ.

ಪ್ರಿಯಕರನ ಜೊತೆ ಬೆತ್ತಲಾದ ಮೂರು ಮಕ್ಕಳ ತಾಯಿ: ಬಳಿಕ ನಡೆದಿದ್ದು ಭಯಾನಕ..!

ಅಲ್ಲದೇ  20 ಲಕ್ಷ ರೂಪಾಯಿ ಕೊಡು, ಇಲ್ಲದಿದ್ದರೆ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಇದರಿಂದ ಬೇಸತ್ತ ಪತ್ನಿ ತವರು ಮನೆಗೆ ಘಟನೆಯನ್ನು ತಂದೆ ತಾಯಿಗೆ ವಿವರಿಸಿದ್ದಾಳೆ. ಈ ವಿಚಾರವಾಗಿ ಮಹಿಳೆಯ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪತಿ ವಿರುದ್ಧ ಐಟಿ ಕಾಯ್ದೆ 2000 ರ ಸೆಕ್ಷನ್ 67 ಮತ್ತು 67-ಎ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.