Asianet Suvarna News Asianet Suvarna News

ಜಮೀನು ವಿಚಾರಕ್ಕೆ ಸೋದರ ಸಂಬಂಧಿಯ ಶಿರಚ್ಛೇದ ಮಾಡಿದ ಪಾಪಿ: ತಲೆ ಜತೆ ಗೆಳೆಯರಿಂದ ಸೆಲ್ಫಿ..!

ಆರೋಪಿಯ ಬಂಧನದ ನಂತರ, ಮೃತ ಕಾನುವಿನ ಮುಂಡ ಕುಮಾಂಗ್ ಗೋಪ್ಲಾ ಅರಣ್ಯದಲ್ಲಿ ಮತ್ತು ತಲೆ 15 ಕಿ.ಮೀ ದೂರದ ದುಲ್ವಾ ತುಂಗ್ರಿ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಮುರ್ಹು ಪೊಲೀಸ್ ಠಾಣಾಧಿಕಾರಿ ಚೂಡಾಮಣಿ ತುಡು ತಿಳಿಸಿದ್ದಾರೆ.

man beheads cousin over land dispute friends take selfie with head in jharkhand ash
Author
First Published Dec 6, 2022, 4:58 PM IST

ಜಮೀನು ವಿವಾದಕ್ಕೆ (Land Dispute) ಸಂಬಂಧಿಸಿದಂತೆ ತನ್ನ ಸೋದರ ಸಂಬಂಧಿಯ (Cousin) ತಲೆಯನ್ನೇ ಕಡಿಯಲಾಗಿದೆ (Behead). ಜಾರ್ಖಂಡ್‌ನ (Jharkhand) ಕುಂತಿ (Khunti) ಜಿಲ್ಲೆಯಲ್ಲಿ 20 ವರ್ಷದ ಬುಡಕಟ್ಟು ವ್ಯಕ್ತಿಯೊಬ್ಬರು ತನ್ನ 24 ವರ್ಷದ ಸೋದರ ಸಂಬಂಧಿಯ ಶಿರಚ್ಛೇದ ಮಾಡಿರುವ ಘಟನೆ ವರದಿಯಾಗಿದೆ. ಇನ್ನು, ಆರೋಪಿಯ ಸ್ನೇಹಿತರು ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ (Selfie) ತೆಗೆದುಕೊಂಡಿದ್ದಾರೆ ಎಂದು ಪೊಲೀಸರು (Police) ಸೋಮವಾರ ತಿಳಿಸಿದ್ದಾರೆ. ಇತ್ತೀಚೆಗೆ ಮುರ್ಹು ಪ್ರದೇಶದಲ್ಲಿ (Murhu Area) ಈ ಘಟನೆ ನಡೆದಿದೆ ಎಂದೂ ವರದಿಯಾಗಿದೆ. 

ಇನ್ನು, ಈ ಪ್ರಕರಣ ಸಂಬಂಧ ಮೃತನ ತಂದೆ ದಾಸಾಯಿ ಮುಂಡಾ ಅವರು ಡಿಸೆಂಬರ್ 2 ರಂದು ದಾಖಲಿಸಿದ ಎಫ್‌ಐಆರ್ ಆಧರಿಸಿ ಪ್ರಮುಖ ಆರೋಪಿ ಮತ್ತು ಆತನ ಪತ್ನಿ ಸೇರಿದಂತೆ 6 ಮಂದಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ತಮ್ಮ ಮಗ ಕಾನು ಮುಂಡಾ ಡಿಸೆಂಬರ್ 1 ರಂದು ಮನೆಯಲ್ಲಿ ಒಬ್ಬರೇ ಇದ್ದರು. ಆ ವೇಳೆ, ಇತರರು  ಕೆಲಸಕ್ಕಾಗಿ ಗದ್ದೆಗೆ ಹೋಗಿದ್ದರು. ನಂತರ, ಸಂಜೆ ಮನೆಗೆ ಹಿಂದಿರುಗಿದಾಗ ತಮ್ಮ ಸೋದರಳಿಯ ಸಾಗರ್ ಮುಂಡಾ ಮತ್ತು ಅವರ ಸ್ನೇಹಿತರು ತಮ್ಮ ಮಗನನ್ನು ಅಪಹರಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು. ಕಾನುವನ್ನು ಪತ್ತೆಹಚ್ಚಲು ವಿಫಲ ಪ್ರಯತ್ನಗಳ ನಂತರ ತಂದೆ ಮರುದಿನ ಹೋಗಿ ಎಫ್ಐಆರ್ ದಾಖಲಿಸಿದರು ಎಂದು ತಿಳಿದುಬಂದಿದೆ. 

ಇದನ್ನು ಓದಿ: ತಂದೆ​- ಮಲತಾಯಿ ಕೊಲೆಗೆ ಸಂಚು: ವಕೀಲನ ಬಂಧನ

ನಂತರ, ಈ ದೂರಿನ ಸಂಬಂಧ ಆರೋಪಿಯನ್ನು ಬಂಧಿಸಲು ಕುಂತಿ ಉಪವಿಭಾಗದ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ತಂಡ ರಚಿಸಲಾಗಿತ್ತು. ಆರೋಪಿಯ ಬಂಧನದ ನಂತರ, ಮೃತ ಕಾನುವಿನ ಮುಂಡ ಕುಮಾಂಗ್ ಗೋಪ್ಲಾ ಅರಣ್ಯದಲ್ಲಿ ಮತ್ತು ತಲೆ 15 ಕಿ.ಮೀ ದೂರದ ದುಲ್ವಾ ತುಂಗ್ರಿ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಮುರ್ಹು ಪೊಲೀಸ್ ಠಾಣಾಧಿಕಾರಿ ಚೂಡಾಮಣಿ ತುಡು ತಿಳಿಸಿದ್ದಾರೆ. ಅಲ್ಲದೆ, ಆರೋಪಿಗಳು ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದೂ ಅಧಿಕಾರಿ ತಿಳಿಸಿದ್ದಾರೆ.

ಮೃತರ ಮೊಬೈಲ್ ಸೇರಿದಂತೆ ಐದು ಮೊಬೈಲ್ ಫೋನ್‌ಗಳು, ರಕ್ತ ಮೆತ್ತಿಕೊಂಡಿದ್ದ 2 ಹರಿತವಾದ ಆಯುಧಗಳು, ಕೊಡಲಿ ಮತ್ತು ಎಸ್‌ಯುವಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಮುರ್ಹು ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ. ಜಾಗಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬ ಮತ್ತು ಆರೋಪಿಗಳ ನಡುವೆ ದೀರ್ಘಕಾಲದ ದ್ವೇಷವಿದತ್ತು. ಈ ಹಿನ್ನೆಲೆ ಕಾನುವಿನ ತಲೆ ಕಡಿಯಲು ಇದೇ ಕಾರಣ ಎಂದು ಹೇಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Uttara Kannada: ಆಸ್ತಿ ವಿವಾದಕ್ಕೆ ಅಣ್ಣನನ್ನೇ ಹೊಡೆದು ಕೊಂದ ಸಹೋದರರು, ವಿಡಿಯೋ ವೈರಲ್!

ರಾಜ್ಯದಲ್ಲೂ ಆಸ್ತಿ ವಿವಾದಕ್ಕೆ ನಡೆದಿದ್ದ ಕೊಲೆ

ಆಸ್ತಿ ವಿವಾದಕ್ಕೆ ಕರ್ನಾಟಕದಲ್ಲೂ ಸಹೋದರರ ನಡುವೆ ಜಗಳ ನಡೆದು ಕಳೆದ ತಿಂಗಳು ಭೀಕರ ಕೊಲೆಯಾಗಿತ್ತು. ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ತೊಟ್ಟಿಲುಗುಂಡಿ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಡಿಕೆ ತೋಟ ಹಾಗೂ ಆಸ್ತಿ ಭಾಗ ಮಾಡುವ ವಿಚಾರವಾಗಿ ಸಹೋದರರ ನಡುವೆ  ಜಗಳ ನಡೆದಿತ್ತು. ಈ ವೇಳೆ ರೊಚ್ಚಿಗೆದ್ದ ಪಾಪಿ ತಮ್ಮಂದಿರು ಸ್ವಂತ ಅಣ್ಣನನ್ನು ರಾಡ್ ಹಾಗೂ ಕೋಲಿನಿಂದ ಹೊಡೆದು ಕೊಂದಿದ್ದಾರೆ ಎಂದು ವರದಿಯಾಗಿದೆ.

ನವೆಂಬರ್ 5ರಂದು ಸಂಜೆ ಸುಮಾರು 5 ಗಂಟೆ ವೇಳೆ ನಡೆದಿದ್ದ ಜಗಳ  ಕೊಲೆಯಲ್ಲಿ ಅಂತ್ಯವಾಗಿದೆ. ಹೊನ್ನಾವರ ತೊಟ್ಟಿಲಗುಂಡಿಯ ಹನುಮಂತ ನಾಯ್ಕ್ (54) ಕೊಲೆಯಾದ ವ್ಯಕ್ತಿಯಾಗಿದ್ದು, ಸಹೋದರರಾದ ವಿನಾಯಕ, ಚಿದಂಬರ ಹಾಗೂ ಸಂಬಂಧಿ ಮಂಜುನಾಥ ಸೇರಿ ರಾಡ್‌ ಮತ್ತು ಕೋಲಿನಿಂದ ಹಲ್ಲೆ ಮಾಡಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಆಸ್ತಿ ವಿವಾದ: ಟ್ರ್ಯಾಕ್ಟರ್‌ ಲೋಡ್‌ ಮಣ್ಣು ಸುರಿದು ಇಬ್ಬರು ಮಹಿಳೆಯರ ಹತ್ಯೆಗೆ ಯತ್ನ..?

ಅಣ್ಣ ತನ್ನನ್ನು ಬಿಟ್ಟು ಬಿಡಿ ಅಂದ್ರೂ ಕೈಯಲ್ಲಿದ್ದ ರಾಡ್‌ ಹಾಗೂ ಕೋಲಿನಿಂದ ಹಲ್ಲೆ ಮಾಡಿದ್ದರು. ಕೊಲೆ ಮಾಡಿರುವ ಆರೋಪಿಗಳನ್ನು ಪೊಲೀಸರು  ಈಗಾಗಲೇ ವಶಕ್ಕೆ  ಪಡೆದಿದ್ದು, ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದೂ ವರದಿಯಾಗಿತ್ತು. 

Follow Us:
Download App:
  • android
  • ios