Asianet Suvarna News Asianet Suvarna News

ಅಕ್ಕನ ನಂತರ ತಂಗಿಯರು ಮತ್ತು ಮಗಳ ಮೇಲೂ ಕಾಮಾಂಧನ ಕ್ರೌರ್ಯ

ಒಂದೇ ಕುಟುಂಬದ ನಾಲ್ವರ ಮೇಲೆ ಅತ್ಯಾಚಾರ ಎಸಗಿದ/ ಮಹಿಳೆ ಮೇಲೆ  ಒಂದು ವರ್ಷದಿಂದ ನಿರಂತರ ದೌರ್ಜನ್ಯ/ ಮಹಿಳೆ ತಂಗಿಯರು ಮತ್ತು ಮಗಳನ್ನು ಟ್ರ್ಯಾಪ್ ಮಾಡಲು ನೋಡಿದ

Man arrested for sexually harassingng minor girl and four famaily members
Author
Bengaluru, First Published Jan 26, 2021, 3:16 PM IST

ಜೈಪುರ(ಜ 26)  ರಾಜಸ್ಥಾನದ ದೌಸಾ ಜಿಲ್ಲೆಯಿಂದ ಆಘಾತಕಾರಿ ಪ್ರಕರಣವೊಂದು ವರದಿಯಾಗಿದೆ. ಅಪ್ರಾಪ್ತೆ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಆರೋಪಿಯನ್ನು ವಿಷ್ಣು ಗುರ್ಜರ್ ಎಂದು ಗುರುತಿಸಿದ್ದು ಡಾಬಾ ನಡೆಸುತ್ತಿದ್ದ.  ವಿಷ್ಣು ಗುರ್ಜರ್  ಕುಟುಂಬದ ಮಹಿಳೆ ಮೇಲೆ ನಿರಂತರವಾಗಿ ಒಂದು ವರ್ಷ ಅತ್ಯಾಚಾರ ಮಾಡಿದ್ದಾನೆ.  ಇದಾದ ಮೇಲೆ ಆಕೆಯ ತಂಗಿಯರು ಮತ್ತು ಪುತ್ರಿಯ ಮೇಲೆಯೂ ದೌರ್ಜನ್ಯ ನಡೆಸಲು ಮುಂದಾಗಿದ್ದಾನೆ. ಈ ಸಂಗತಿ ಮಹಿಳೆಗೆ ಗೊತ್ತಾಗಿ ಪೊಲೀಸರ ಮೊರೆ  ಹೋಗಿದ್ದಾಳೆ.

ಮಲತಾಯಿಯ ಮೇಲೆ ಮೃಗದಂತೆ ಎರಗಿದ

ಮಹಿಳೆ ಪ್ರಕರಣ ದಾಖಲಿಸಿದ ನಂತರ ಉಳಿದ ಮಹಿಳೆಯರು ತಮ್ಮ ಮೇಲೆ ಆದ ದೌರ್ಜನನ್ಯದ ವಿವರವನ್ನು ಪೊಲೀಸರಿಗೆ ನೀಡಿದ್ದಾರೆ.ವಿಷ್ಣು ಗುರ್ಜರ್ ವಿರುದ್ಧ ಜನವರಿ 21 ರಂದು ಮೊದಲ ದೂರು ದಾಖಲಾಯಿತು.  ಅದೇ ದಿನ ಮಹಿಳೆಯ ಸಹೋದರಿ ಸಹ ದೂರು ನೀಡಿದರು.

ಇದಾದ ಮೇಲೆ ಜನವರಿ 23 ಮತ್ತು 24 ರಂದು ಮತ್ತಿಬ್ಬರು ಅತ್ಯಾಚಾರದ ದೂರು ನೀಡಿದರು.  ಒಂದೇ ಕುಟುಂಬದ ನಾಲ್ವರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತ ವ್ಯಕ್ತಿ ಪೊಲೀಸರ ಕಸ್ಟಡಿಯಲ್ಲಿದ್ದಾನೆ.

Follow Us:
Download App:
  • android
  • ios