ಟಿವಿ ಸೀರಿಯಲ್ ನಟ ತನ್ನ 58 ವರ್ಷದ ಮಲತಾಯಿ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. 78 ವರ್ಷದ ತಂದೆಯೊಂದಿಗೆ ತಾನಿದ್ದ ಮನೆಯಿಂದಲೇ ಈತ ನಗದು ಮತ್ತು ಆಭರಣಗಳನ್ನು ಕದ್ದೊಯ್ದಿದ್ದಾನೆ.

ತನ್ನ ತಂದೆಯ ಮೂರನೇ ಪತ್ನಿ ಅಂದರೆ ಮಲತಾಯಿಯ ಮೇಲೆ 40 ವರ್ಷ ವಯಸ್ಸಿನ ಟಿವಿ ಸೀರಿಯಲ್ ನಟ ಅತ್ಯಾಚಾರ ನಡೆಸಿದ್ದು, ಓಶಿವಾರ ಪೊಲೀಸರು ಕೇಸು ದಾಖಲಿಸಿದ್ದಾರೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ ಜೀವಾವಧಿ ಶಿಕ್ಷೆ

ಸಂತ್ರಸ್ತೆ ಮತ್ತು ಆರೋಪಿಯ ನಡುವೆ ಆಸ್ತಿ ಕುರಿತಾಗಿ ಜಗಳ ನಡೆಯುತ್ತಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ದೂರು ನೀಡಿದ ಮಹಿಲೆ ಅಂಧೇರಿಯ ಲೋಖಂಡ್ವಾಲಾ ನಿವಾಸಿಯಾಗಿದ್ದಾರೆ.

ಈಕೆ ಆರೋಪಿಯ ತಂದೆ ಟಿವಿ ನಿರ್ದೇಶಕರೊಬ್ಬರ ಮೂರನೇ ಹೆಂಡತಿಯಾಗಿದ್ದಾರೆ. ತಾನು ಒಬ್ಬಂಟಿಯಾಗಿದ್ದಾಗ ಮನೆಗೆ ಬಂದು ತನ್ನ ಮೇಲೆ ಅತ್ಯಾಚಾರ ಮಾಡಿ ಆಭರಣ ಮತ್ತು ನಗದು ದೋಷಿದ್ದಾಗಿ ಮಹಿಳೆ ಆರೋಪಿಸಿದ್ದಾರೆ.

15 ವರ್ಷದ ಬಾಲಕಿಯನ್ನು ಕೂಡಿಟ್ಟು 13 ತಿಂಗಳಿಂದ ಸಾಮೂಹಿಕ ಅತ್ಯಾಚಾರ!

ಈ ಸಂಬಂಧ ಪೊಲೀಸರು ಅತ್ಯಾಚಾರ ಆರೋಪದಡಿ ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಇದುವರೆಗೂ ಬಂಧಿಸಿಲ್ಲ. ಮಹಿಳೆ ವಾಸಿಸುತ್ತಿದ್ದ ಫ್ಲಾಟ್ ಮತ್ತು ಅಂಧೇರಿಯಲ್ಲಿರುವ ಶಾಪ್‌ಗಳ ಒಡೆತನಕ್ಕಾಗಿ ಜಗಳ ನಡೆದಿದೆ ಎನ್ನಲಾಗಿದೆ.