Asianet Suvarna News Asianet Suvarna News

ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಾಗ ತಾಯಿಯ ಕೈಗೆ ಸಿಕ್ಕಿಬಿದ್ದ

ಪುಟ್ಟ ಮಗುವಿನ ಮೇಲೆ ಲೈಂಗಿಕ  ದೌರ್ಜನ್ಯ ಎಸಗಿದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.  

Man Arrested For Sexual Assualt on 2 Year Baby
Author
Bengaluru, First Published Dec 26, 2019, 8:21 AM IST
  • Facebook
  • Twitter
  • Whatsapp

ಬೆಂಗಳೂರು (ಡಿ.26):  ಎರಡೂವರೆ ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಪೋಕ್ಸೋ ಪ್ರಕರಣದಡಿ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಳ್ಳಾಲಸಂದ್ರದ ನಿವಾಸಿ ಮಲ್ಲಪ್ಪ (52) ಬಂಧಿತ ಆರೋಪಿ. ಮೂಲತಃ ಆಂಧ್ರಪ್ರದೇಶದ ಮಲ್ಲಪ್ಪ ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಕುಟುಂಬ ಜತೆ ಅಳ್ಳಾಲಸಂದ್ರದಲ್ಲಿ ನೆಲೆಸಿದ್ದಾನೆ. ಆರೋಪಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾನೆ.

ಎರಡೂವರೆ ವರ್ಷದ ಮಗುವಿನ ಪೋಷಕರು ಬಿಹಾರ ರಾಜ್ಯದವರಾಗಿದ್ದು, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆರೋಪಿ ಮನೆಗೆ ಸ್ವಲ್ಪ ದೂರದಲ್ಲೇ ಮಗುವಿನ ಮನೆ ಇದೆ. ಮಂಗಳವಾರ ಬೆಳಗ್ಗೆ 9ರ ಸುಮಾರಿಗೆ ಮಗು ಮನೆ ಮುಂದೆ ಆಟವಾಡುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಚಾಕೋಲೆಟ್‌ ಕೊಡಿಸುವ ಆಮಿಷವೊಡ್ಡಿ ಮಗುವನ್ನು ಕರೆದೊಯ್ದಿದ್ದ.

ಶೋಕಿಲಾಲ ತೋರಿಸಿದ್ದು ಅರಣ್ಯದಲ್ಲಿ ಹೂತಿಟ್ಟ 12 ಕೆಜಿ ಚಿನ್ನ!...

ಮಗುವನ್ನು ಹುಡುಕಿಕೊಂಡು ತಾಯಿ ಹೊರಗೆ ಬಂದಾಗ ಮಲ್ಲಪ್ಪ ಮಗು ಕರೆದೊಯ್ದಿರುವ ವಿಷಯ ತಿಳಿದಿದೆ. ಮಗುವಿನ ತಾಯಿ ಮಗುವನ್ನು ಕರೆ ತರಲು ಆತನ ಮನೆ ಬಳಿ ಹೋಗಿದ್ದರು. ಈ ವೇಳೆ ಆರೋಪಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಾಗ ತಾಯಿಗೆ ಕೈಗೆ ಸಿಕ್ಕಿ ಬಿದ್ದಿದ್ದು, ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ಸಂಬಂಧ ಮಗುವಿನ ಪೋಷಕರು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪೋಕ್ಸೋ ಪ್ರಕರಣದಡಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios