ಮನೆಯಲ್ಲಿ ಸಾಕಿದ್ದ ಕೋಳಿಗಳ ಮೇಲೆ 45 ವರ್ಷದ ವ್ಯಕ್ತಿಯೊಬ್ಬ ಬಲತ್ಕಾರಿಸಿದ ಘಟನೆ ಸಂಬಂಧ ನೆರೆಮನೆಯವರ ಗಮನಕ್ಕೆ ಬಂದ ನಂತರ ಆತನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ.

ಮುಂಬೈ (ಜುಲೈ.25): ಕೋಳಿಯನ್ನೂ ಬಿಡದೆ ಕಾಮುಕನ ಕ್ರೌರ್ಯ ಬೆಚ್ಚಿಬಿಳಿಸುವಂತಿದೆ. ಕೋಳಿಯೊಂದಿಗೆ ಸಂಭೋಗ ನಡೆಸಿದ ಆರೋಪದ ಮೇಲೆ 45 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮುಂಬೈನ ಬೊರಿವಲಿಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಸಾಕಿದ್ದ ಕೋಳಿಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನೆರೆಹೊರೆಯವರು ಗಮನಿಸಿದ ನಂತರ 45 ವರ್ಷದ ವ್ಯಕ್ತಿಯನ್ನು ಪೋಕ್ಸೊ ಪ್ರಕರಣದಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ರಾಜೇಂದ್ರ ರಹಾಟೆ ಎಂದು ಗುರುತಿಸಲಾಗಿದೆ.

45 ವರ್ಷದ ವ್ಯಕ್ತಿಯ ಕೃತ್ಯವನ್ನು ನೆರೆಮನೆಯವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಇದನ್ನು ತನ್ನ ಪತ್ನಿಗೆ ತೋರಿಸಿದಾಗ, ನೆರೆಮನೆಯವರ ಅಪ್ರಾಪ್ತ ಮಗನಿಗೂ 45 ವರ್ಷದ ವ್ಯಕ್ತಿಯಿಂದ ಕಿರುಕುಳ ಅನುಭವಿಸಿದ್ದಾಗಿ ತಿಳಿಸಿದ್ದಾನೆ. ಬಳಿಕ ನೆರೆಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳವಾರ ಈ ಘಟನೆ ನಡೆದಿದೆ. ಖಾಸಗಿ ಕಂಪನಿಯ ಮೇಕಪ್ ಆರ್ಟಿಸ್ಟ್ ಆಗಿರುವ 48 ವರ್ಷದ ವ್ಯಕ್ತಿಯ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.

48 ವರ್ಷದ ವ್ಯಕ್ತಿಯ ಅಪ್ರಾಪ್ತ ಮಗನ ಮೇಲೆ ರಾಜೇಂದ್ರ ರಹತೆ ಎರಡು ಬಾರಿ ದೌರ್ಜನ್ಯ ಎಸಗಿದ್ದಾನೆ. ಯಾರಿಗಾದರೂ ಹೇಳಿದರೆ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಪ್ರಾಪ್ತ ಬಾಲಕ ಹೇಳಿಕೆ ನೀಡಿದ್ದಾನೆ. ರಾಜೇಂದ್ರ ರಹತೆ ವಿರುದ್ಧ ಪ್ರಾಣಿಗಳ ಮೇಲಿನ ದೌರ್ಜನ್ಯ ಸೇರಿದಂತೆ ಇತರ ವಿಭಾಗಗಳ ಅಡಿಯಲ್ಲಿ ಹೆಚ್ಚಿನ ತನಿಖೆ ನಡೆಸಲಾಗುವುದು. ಪ್ರಸ್ತುತ ನೆರೆಮನೆಯವರ ಮಗನ ಮೇಲೆ ದೌರ್ಜನ್ಯ ಎಸಗಿದ್ದಕ್ಕಾಗಿ ಬಂಧಿಸಲಾಗಿದೆ.