ಸಿಂಗಾಪೂರ(ಫೆ.19): ಮಹಿಳೆಯನ್ನು ಕೊಂದು ಆಕೆಯ ಶವದೊಂದಿಗೆ ಸಂಭೋಗ ಮಾಡಲು ಯತ್ನಿಸಿದ ದುರುಳನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಘಟನೆ ಸಿಂಗಾಪೂರ್'ನಲ್ಲಿ ನಡೆದಿದೆ.

ಇಲ್ಲಿನ 51 ವರ್ಷದ ಬೋಹ್ ಸೂನ್ ಎಂಬ ವ್ಯಕ್ತಿ ಜಾಂಗ್ ಹಾಕ್ಸಿಯಾಂಗ್ ಎಂಬ ಮಹಿಳೆಯನ್ನು ಕೊಂದು ಆಕೆಯ ಶವದೊಂದಿಗೆ ಸಂಭೋಗ ನಸೆಸಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

ಶವದ ಜೊತೆ ಸೆಕ್ಸ್‌ಗಿಳಿಯುವಷ್ಟು ಸ್ಯಾಡಿಸ್ಟ್ ಆಗೋದಾದ್ರೂ ಯಾಕೆ?

ಜಾಂಗ್ ಹಾಕ್ಸಿಯಾಂಗ್'ಳನ್ನು ಪ್ರೀತಿಸುತ್ತಿದ್ದ ಬೋಹ್ ಸೂನ್, ಸೆಕ್ಸ್‌ಗಾಗಿ ಆಕೆಯನ್ನು ಪದೇ ಪದೇ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಇದಕ್ಕೆ ಒಪ್ಪದ ಜಾಂಗ್ ಹಾಕ್ಸಿಯಾಂಗ್'ಳನ್ನು ಆಕೆಯ ಅಪಾರ್ಟ್'ಮೆಂಟ್‌ನಲ್ಲೇ ಕೊಂದು ಹಾಕಿದ್ದ.

ಬಳಿಕ ಜಾಂಗ್ ಹಾಕ್ಸಿಯಾಂಗ್ ಶವದ ಬೆತ್ತಲೆ ಫೋಟೋ ಕ್ಲಿಕ್ಕಿಸಿದ್ದ ದುರುಳ ಬೋಹ್ ಸೂನ್, ಶವದೊಂದಿಗೆ ಸಂಭೋಗ ನಡೆಸಲೂ ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಗೆಗಳ ಶವ ಸಂಭೋಗ: ಇದೆಂತಾ ವಿಚಿತ್ರ ನಡುವಳಿಕೆಯ ಪ್ರಯೋಗ!

ಜಾಂಗ್ ಹಾಕ್ಸಿಯಾಂಗ್'ಳನ್ನು ಕೊಂದು ಮಲೇಷ್ಯಾಗೆ ಪರಾರಿಯಾಗಿದ್ದ ಬೋಹ್ ಸೂನ್'ನನ್ನು ಬಂಧಿಸುವಲ್ಲಿ ಸಿಂಗಾಪೂರ್ ಪೊಲೀಸರು ಯಶಸ್ವಿಯಾಗಿದ್ದರು. 2016ರಲ್ಲೇ ಈ ಘಟನೆ ನಡೆದಿದ್ದು, ಸುದೀರ್ಘ ವಿಚಾರಣೆ ಬಳಿಕ ಬೋಹ್ ಸೂನ್'ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.