ಮಾವಿನ ಹಣ್ಣಿನ ಆಸೆ ತೋರಿಸಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ!
- ದೆಹಲಿಯಲ್ಲಿ ಮತ್ತೊಂದು ಭಯಾನಕ ಘಟನೆ ವರದಿ
- ಮಾವಿನ ಹಣ್ಣುಕೊಡಿಸುವುದಾಗಿ ಹೇಳಿ ಅತ್ಯಾಚಾರ
- 3 ವರ್ಷದ ಪುಟ್ಟ ಮಗುವಿನ ಮೇಲೆ ಏರಗಿದ ಕಾಮುಕ
ನವದೆಹಲಿ(ಜೂ.22): ದೇಶದಲ್ಲಿ ಮತ್ತೆ ಮತ್ತೆ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದೆ. ಒಂದಕ್ಕಿಂತ ಮತ್ತೊಂದು ಭಯಾನಕ ಘಟನೆಗಳಾಗಿವೆ. ಇದೀಗ ದೆಹಲಿಯಲ್ಲಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ಮಗುವಿನ ಮಾವಿನ ಹಣ್ಣು ಕೊಡಿಸುವುದಾಗಿ ಹೇಳಿ ಅತ್ಯಾಚಾರ ಎಸಗಲಾಗಿದೆ.
ಈ ಘಟನೆ ದೆಹಲಿ ತುಘಲಕ್‌ಬಾದ್‌ನಲ್ಲಿ ನಡೆದಿದೆ. ಮಗುವಿನ ಪೋಷಕರು ದೂರು ದಾಖಲಿಸಿದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಇತ್ತ ತುಘಲಕ್‌ಬಾದ್‌ನಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
ದಿನೇ ದಿನೇ ಹೆಚ್ಚುತ್ತಿರುವ ರೇಪ್ ಕೇಸ್, ಪಂಜಾಬ್ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆಗೆ ನಿರ್ಧಾರ!
ಆರೋಪಿ ಹಾಗೂ ಮಗುವಿನ ಕುಟುಂಬಸ್ಥರು ಪರಿಚಯಸ್ಥರಾಗಿದ್ದಾರೆ. ಅಕ್ಕ ಪಕ್ಕದಲ್ಲೇ ಮನೆಗಳಿವೆ. ಮನೆಯಿಂದ ಮಗು ಆಟವಾಡಲು ಹೊರಗೆ ಬಂದಾಗ ಆರೋಪಿ ಮಗುವನ್ನು ತನ್ನ ಮನೆಯೊಳಕ್ಕೆ ಕರೆದಿದ್ದಾನೆ. ಮಗುವಿನ ಮಾವಿನ ಹಣ್ಣು ತೋರಿಸಿ ಮನೆಗೆ ಕರೆದಿದ್ದಾನೆ. ಹಣ್ಣು ಕತ್ತರಿಸಿ ಕೊಡುವುದಾಗಿ ಹೇಳಿದ್ದಾನೆ.
3 ವರ್ಷದ ಪುಟ್ಟ ಮಗು ಈತನ ಕಪಟ ನಾಟಕ ಅರಿಯದೆ ಆತನ ಮನೆ ಪ್ರವೇಶಿಸಿದೆ. ಅಷ್ಟೇ ನೋಡಿ, ಕಾಮುಕ ಮಗುವಿನ ಮೇಲೆ ಏರಗಿದ್ದಾನೆ. ಮಗು ಕಿರುಚಾಡಲು ಆರಂಭಿಸಿದೆ. ಬಾಯಿ ಗಟ್ಟಿಯಾಗಿ ಹಿಡಿದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಮಾವಿನ ಹಣ್ಣು ನೀಡಿ ಮನೆಗೆ ಕಳುಹಿಸಿದ್ದಾನೆ.
ಮನೆಗೆ ಬಂದ ಮಗು ಆಘಾತಕ್ಕೆ ಒಳಗಾಗಿದೆ. ಏನೂ ಅರಿಯದ ಮಗುವಿನ ಪೋಷಕರಲ್ಲಿ ಹೇಳಲು ತಿಳಿಯದಾಗಿದೆ. ಸಂಜೆ ವೇಳೆ ಮಗುವಿನ ಆರೋಗ್ಯ ಕ್ಷೀಣಿಸತೊಡಗಿದೆ. ಮಾತು ಆಡದೇ ಮಗುವನ್ನು ನೋಡಿ ಪೋಷಕರು ಭಯಭೀತಗೊಂಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಮಗುವನ್ನು ಪರಿಶೀಲಿಸದ ವೈದ್ಯರಿಗೆ ಆಘಾತ ಕಾದಿತ್ತು. ಮಗುವಿನ ಮೇಲೆ ಅತ್ಯಾಚಾರ ಆಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸದ್ಯ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಪ್ರಾಪ್ತೆ ಮೇಲೆ ಸೋದರ ಮಾವ ಅತ್ಯಾಚಾರ, ಬಾಲಕಿ 7 ತಿಂಗಳು ಗರ್ಭಿಣಿ
ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ
ಏಳು ವರ್ಷದ ಅಪ್ರಾಪ್ತೆ ಮೇಲೆ 32 ವರ್ಷದ ವ್ಯಕ್ತಿಯ ಎರಡು ಬಾರಿ ಲೈಂಗಿಕ ಅತ್ಯಾಚಾರ ನಡೆಸಿದ ಘಟನೆ ಇಳಕಲ್ಲ ತಾಲೂಕು ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಲವಂತವಾಗಿ ಬಾಲಕಿಯ ಮೆಲೆ ಅತ್ಯಾಚಾರ ಮಾಡಿದ ವ್ಯಕ್ತಿಯ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಕೇಸ್ ದಾಖಲಿಸಿ ಸದ್ಯ 3 ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುನಗುಂದ ಸಿಪಿಐ ಹೊಸಕೇರಪ್ಪ ಹಾಗೂ ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆ ಪಿಎಎಸ್ ಎಸ್ .ಬಿ.ಪಾಟೀಲ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದು ಆರೋಪಿಗಳನ್ನು ಗ್ರಾಮಕ್ಕೆ ಕರೆದೊಯ್ದು, ಘಟನೆ ನಡೆದ ಬಗ್ಗೆ ವಿವರ ಪಡೆದರು.
ಹುನಗುಂದ ಹಾಗೂ ಇಳಕಲ್ಲ ತಾಲೂಕಿನಲ್ಲೇ ಈ ಹಿಂದೆ ಅಪ್ರಾಪ್ತೆ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ. ಬಾಲಕಿ ಮೇಲಿನ ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ ಮಾಜಿ ಅದ್ಯಕ್ಷೆ ಶ್ರೀಮತಿ ವೀಣಾ ಕಾಶಪ್ಪನವರ, ಸಮಾಜ ಸೇವಕಿ ಜಯಶ್ರೀ ಸಾಲಿಮಠ ಹಾಗೂ ನಗರಸಭೆ ಸದಸ್ಯೆ ಮಾರನಬಸರಿ ಆಗ್ರಹಿಸಿದ್ದಾರೆ.