ಬೆಂಗಳೂರು( ಫೆ. 23) ಚಾರ್ಜಿಂಗ್ ನೆಪದಲ್ಲಿ ಡಾಕ್ಟರ್ ಡ್ರೆಸ್ ಚೇಂಜ್ ಮಾಡುವ ವಿಡಿಯೋ ಸೆರೆಹಿಡಿಯುತ್ತಿದ್ದ ವಿಕೃತ ಕಾಮಿ ಕೊನೆಗೂ ಬಲೆಗೆ ಬಿದ್ದಿದ್ದಾನೆ  ಆಸ್ಪತ್ರೆಯಲ್ಲಿ ಡಾಕ್ಟರ್ ಮತ್ತು ಸ್ಟಾಫ್ ನರ್ಸ್ ಬಟ್ಟೆ ಬದಲಾಯಿಸುವುದನ್ನು ಮೊಬೈಲ್ ನಲ್ಲಿ ಗುಪ್ತವಾಗಿ ಸೆರೆ ಹಿಡಿಯುತ್ತಿದ್ದ ಈ ಕಿರಾತಕ.

ತಿಲಕ್ ನಗರ  ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸರ್ಕಾರಿ ಅಸ್ಪತ್ರೆಯೊಂದರ ವೈದ್ಯೆ ನೀಡಿದ ದೂರಿನ ಮೇರೆಗೆ ಗುತ್ತಿಗೆ ನೌಕರ ಮಾರುತೇಶ್  ಎಂಬಾತನನ್ನು ಬಂಧಿಸಲಾಗಿದೆ ಆಪರೇಷನ್ ಮಾಡುವ ಮುನ್ನ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವುದನ್ನೇ ಈತ ಕಾಯುತ್ತಿದ್ದ ಬಟ್ಟೆ ಬದಲಾಯಿಸಲು ಬಂದಾಗ ಆಗಮಿಸುತ್ತಿದ್ದ ಆರೋಪಿ ಚಾರ್ಜಿಂಗ್ ನೆಪದಲ್ಲಿ‌ ಮೊಬೈಲ್ ಇಟ್ಟು ವಿಡಿಯೋ ಮಾಡಿಕೊಳ್ಳುತ್ತಿದ್ದ.

ಯುವತಿಯರ ಬೆತ್ತಲೆ ಶೂಟ್ ಮಾಡ್ತಿದ್ದ ಖ್ಯಾತ ನಟಿ

ಇತ್ತೀಚೆಗೆ ಮಹಿಳಾ ಡಾಕ್ಟರ್ ಬಟ್ಟೆ ಬದಲಾಯಿಸುವಾಗ ಚಾರ್ಜಿಂಗ್ ಹಾಕಿದ್ದ ಮೊಬೈಲ್ ನ್ನು ಗಮನಿಸಿದ್ದರು  ಇದನ್ನು ಕಂಡು ಅನುಮಾನಗೊಂಡು ಪರಿಶೀಲಿಸಿದಾಗ ರೆರ್ಕಾಡಿಂಗ್ ಮೋಡ್ ನಲ್ಲಿ ಇರುವುದು ಬೆಳಕಿಗೆ  ಬಂದಿದೆ. ಮೊಬೈಲ್ ಗ್ಯಾಲರಿ ನೋಡಿದಾಗ ಅಸಲಿ ವಿಚಾರ ಗೊತ್ತಾಗಿದೆ  ಈ ಸಂಬಂಧ ತಿಲಕ್ ನಗರ ಪೊಲೀಸರಿಗೆ ದೂರು ನೀಡಲಾಗಿತ್ತು.