Asianet Suvarna News Asianet Suvarna News

2 ಪತ್ನಿ, 6 ಗರ್ಲ್‌ಫ್ರೆಂಡ್ಸ್, 9 ಮಕ್ಕಳು; ಸೋಶಿಯಲ್ ಮೀಡಿಯಾ ಇನ್ಲುಫ್ಲುಯೆನ್ಸರ್ ಅರೆಸ್ಟ್!

6ನೇ ತರಗತಿ ಬಳಿಕ ಶಾಲೆಗೆ ಹೋಗಿಲ್ಲ, ನಕಲಿ ನೋಟು ವಿತರಣೆ, ಚೈನ್ ಲಿಂಕ್ ಮೋಸದ ಜಾಲ ಸೇರಿದಂತೆ ಹಲವು ವಂಚನೆ ಮೂಲಕ ಕೋಟಿ ಕೋಟಿ ರೂಪಾಯಿ ಆದಾಯಗಳಿಸಿದ ಈತನಿಗೆ 2 ಪತ್ನಿ, 6 ಗರ್ಲ್‌ಪ್ರೆಂಡ್ಸ್ ಹಾಗೂ 9 ಮಕ್ಕಳು. ಇದೀಗ ಹೊಸ ವರ್ಷ ಸಂಭ್ರಮಾಚರಣೆಗೆ ವಿದೇಶಕ್ಕೆ ಹಾರಲು ಸಜ್ಜಾಗಿದ್ದ ವೇಳೆ ಅರೆಸ್ಟ್ ಆಗಿದ್ದಾನೆ.
 

Lucknow Man arrested for money double case police found his 2 wives 9 children 6 girlfriend and lavish life ckm
Author
First Published Nov 30, 2023, 5:02 PM IST

ಲಖನೌ(ನ.30) ಒಂದು ಮದುವೆಯಾಗಿ ನೆಟ್ಟಗೆ ಸಂಸಾರ ಮಾಡೋದೇ ದೊಡ್ಡ ಸಾಹಸ ಅನ್ನೋ ಕಾಲದಲ್ಲಿ ಈತ 2 ಹೆಂಡತಿ, 9 ಮಕ್ಕಳು, ಇದರ ಜೊತೆಗೆ 6 ಗರ್ಲ್‌ಫ್ರೆಂಡ್ಸ್ ಇಟ್ಟುಕೊಂಡು ಯಾರಿಗೂ ಯಾವ ಅನುಮಾನವೂ ಬರದಂತೆ ನೋಡಿಕೊಂಡಿದ್ದ. ಇಷ್ಟೇ ಅಲ್ಲ ನಕಲಿ ನೋಟು ಹಂಚಿಕೆ, ವಿಮೆಯಲ್ಲಿ ಮೋಸ, ಚೈನ್ ಲಿಂಗ್ ವ್ಯವಾಹರದಲ್ಲಿ ಮೋಸ ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲಿದೆ. ಇದರ ನಡುವೆ ಪತ್ನಿ ಜೊತೆಗೆ ಹೊಸ ವರ್ಷವನ್ನು ವಿದೇಶದಲ್ಲಿ ಆಚರಿಸಲು ಪ್ಲಾನ್ ಮಾಡುತ್ತಿರುವಾಗಲೇ ಅರೆಸ್ಟ್ ಆದ ಘಟನೆ ಉತ್ತರ ಪ್ರದೇಶದ ಸರೋಜಿನಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

41 ವರ್ಷದ ಅಜಿತ್ ಮೌರ್ಯ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. 6ನೇ ಕ್ಲಾಸ್ ಬಳಿಕ ಶಾಲೆಯಿಂದ ದೂರ ಉಳಿದ ಅಜಿತ್ ಮೌರ್ಯ, ಹಲವು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ. ಇದರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಶಾರ್ಟ್ ವಿಡಿಯೋ ಮೂಲಕ ಉಪದೇಶಗಳನ್ನು ನೀಡುತ್ತಾ ಭಾರಿ ಜನಪ್ರಿಯನಾಗಿದ್ದಾನೆ. ಹಣ ಡಬಲ್ ಮಾಡುವುದು, ಚೈನ್ ಲಿಂಕ್ ಬ್ಯೂಸಿನೆಸ್, ವಿಮೆ, ನಕಲಿ ನೋಟು ಸೇರಿದಂತೆ ಹಲವು ವ್ಯವಹಾರದಲ್ಲಿ ಹಲವರಿಗೆ ಮೋಸ ಮಾಡಿದ್ದಾನೆ. 

Bengaluru ಬಾಯ್‌ಫ್ರೆಂಡ್‌ ಮೊಬೈಲ್‌ನಲ್ಲಿ ತನ್ನದೂ ಸೇರಿ ಹುಡ್ಗೀರ 13,000 ನಗ್ನ ಫೋಟೋ ಪತ್ತೆ!

ಕೋಟಿ ಕೋಟಿ ರೂಪಾಯಿ ಆದಾಯಗಳಿಸಿರುವ ಈತ 2000ನೇ ಇಸವಿಯಲ್ಲಿ ಮುಂಬೈನಲ್ಲಿ ಸಂಗೀತಾ ಅನ್ನೋ ಮಹಿಳೆಯನ್ನು ವಿವಾಹವಾಗಿದ್ದಾನೆ. 2016ರಲ್ಲಿ ಈತನ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿದೆ. 2019ರಲ್ಲಿ ಸುಶೀಲಾ ಅನ್ನೋ ಮಹಿಳೆಯನ್ನೂ ಮದುವೆಯಾಗಿದ್ದಾನೆ. ಮೊದಲ ಪತ್ನಿಗೆ 6 ಮಕ್ಕಳು, ಎರಡನೇ ಪತ್ನಿಗೆ 3 ಮಕ್ಕಳ ಕರುಣಿಸಿದ್ದಾನೆ. ಇಬ್ಬರಿಗೂ ಕೋಟಿ ರೂಪಾಯಿ ಮೌಲ್ಯದ ಎರಡು ಪ್ರತ್ಯೇಕ ಮನೆ ಕಟ್ಟಿಸಿಕೊಟ್ಟಿದ್ದಾನೆ.

ಇದರ ನಡುವೆ 6 ಗರ್ಲ್‌ಫ್ರೆಂಡ್ಸ್ ಜೊತೆಗೂ ಸಮಯ ಕಳೆಯುತ್ತಿದ್ದ. ಇತ್ತೀಚೆಗೆ ಹಣ ಡಬಲ್ ಮಾಡುವುದಾಗಿ ಧರ್ಮೆಂದ್ರ ಕುಮಾರ್ ಅನ್ನೋ   ವ್ಯಕ್ತಿಗೆ 3 ಲಕ್ಷ ರೂಪಾಯಿ ವಂಚಿಸಿದ್ದು. ಈ ಕುರಿತು ಪ್ರಕರಣ ದಾಖಲಾಗಿತ್ತು. ಹೀಗಾಗಿ ಈತನ ಹಿಂದೆ ಬಿದ್ದಿದ್ದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಈಗಾಗಗಲೇ ಹಲವು ಪ್ರಕರಣಗಳು ಈತನ ವಿರುದ್ಧ ದಾಖಲಾಗಿರುವುದು ಪತ್ತೆಯಾಗಿದೆ.

ಜಗಳದ ವೇಳೆ ಪತಿಯ ಕಿವಿಯನ್ನೇ ಕಚ್ಚಿ ತುಂಡು ಮಾಡಿದ ಮಹಿಳೆ, ಕೇಸ್‌ ದಾಖಲು! 

ಪತ್ನಿ ಜೊತೆ ಹೊಟೆಲ್ ಒಂದರಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಪ್ಲಾನ್ ರೆಡಿ ಮಾಡುತ್ತಿದ್ದ ಅಜಿತ್ ಮೌರ್ಯ, ವಿದೇಶಕ್ಕೆ ಹಾರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ. ಅಷ್ಟರಲ್ಲೇ ಪೊಲೀಸರು ದಾಳಿ ನಡೆಸಿ ಅಜಿತ್ ಮೌರ್ಯನ ಬಂಧಿಸಿದ್ದಾರೆ. ಇದೀಗ ಅಜಿತ್ ಮೌರ್ಯ ವರ್ಣರಂಜಿತ ಬದುಕಿನ ಒಂದೊಂದೆ ಕತೆಗಳು ಹೊರಬರುತ್ತಿದೆ.
 

Follow Us:
Download App:
  • android
  • ios