ಪೊಲೀಸ್ ಠಾಣೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.

ಚಿತ್ರದುರ್ಗ (ಜು.1) : ಪೊಲೀಸ್ ಠಾಣೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.

ಲಾರಿ ಚಾಲಕ ಬಸವಂತಕುಮಾರ್ (37) ಮೃತ ವ್ಯಕ್ತಿ. ದಾವಣಗೆರೆ ಜಿಲ್ಲೆಯ ಜಗಳೂರು ತಾ. ಕಟ್ಟಿಗೆಹಳ್ಳಿ ನಿವಾಸಿಯಾಗಿರುವ ಬಸವಂತಕುಮಾರ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಜೂನ್ 5 ರಂದು ಸಂಚಾರಿ ನಿಯಮ ಉಲ್ಲಂಘನೆ ಹಿನ್ನೆಲೆ ಸಂಚಾರಿ ಪೊಲೀಸರು ಲಾರಿ ತಡೆಹಿಡಿದು ಲಾರಿ ಸಮೇತ ಚಾಲಕನನ್ನು ಹೊಳಲ್ಕೆರೆ ಪೊಲಿಸ್ ಠಾಣೆಗೆ ಕರೆತಂದಿದ್ದ ಪೊಲೀಸರು.

ಆದರೆ ದಂಡ ಕಟ್ಟಲು ಹಣವಿಲ್ಲದೆ ಪೊಲೀಸ್ ಠಾಣೆಯಿಂದ ನಾಪತ್ತೆಯಾಗಿದ್ದ. ಚಾಲಕನ ಪತ್ತೆಗಾಗಿ ಎಸ್ಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದ ಮೃತನ ಪೋಷಕರು. ಪತ್ತೆ ಹಚ್ಚುವ ಪ್ರಯತ್ನ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ. ಆದರೆ ನಿನ್ನೆ ಸಂಜೆ ಬಸವಂತ ಕುಮಾರ್ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ.

ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ.

ದಂಡ ಕಟ್ಟಲಾಗದೇ ಪೊಲೀಸ್‌ ಠಾಣೆ ಮುಂದಿದ್ದ ಲಾರಿ ಚಾಲಕ 8 ದಿನದಿಂದ ನಾಪತ್ತೆ: ಪೊಲೀಸರ ಮೇಲೆ ಅನುಮಾನ

ಕೆರೆಯಲ್ಲಿ ಬಿದ್ದು ವ್ಯಕ್ತಿ ಸಾವು

ಕಡೂರು: ಪಟ್ಟಣದ ಛತ್ರದ ಬೀದಿಯ ನಿವಾಸಿ ಉಪೇಂದ್ರನಾಥ್‌ ಅವರ ಪುತ್ರ ಎಂ.ಯು.ಅಕ್ಷಯ್‌(28) ತಾಲೂಕಿನ ಅಯ್ಯನಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದು ಈ ಸಂಬಂಧ ಸಖರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಡೂರು ಪಟ್ಟಣದಲ್ಲಿ ಅಕ್ಷಯ್‌ ಸ್ವಂತ ಬಿಸಿನೆಸ್‌ ಮಾಡುತ್ತಿದ್ದು ವ್ಯವಹಾರದಲ್ಲಿ ನಷ್ಟವಾಗಿದೆ ಎಂದು ನಮ್ಮ ಬಳಿ ಹೇಳಿಕೊಂಡಿದ್ದ ಹಾಗೂ ಬೇಸರಿಸಿಕೊಂಡಿದ್ದನು. ನಾವು ಅವನಿಗೆ ಸಮಾಧಾನ ಹೇಳಿದ್ದೆವು. ಕಳೆದ ಜೂ. 28 ರಂದು ಸಂಜೆ ಸುಮಾರು 7.30ರಲ್ಲಿ ಮನೆಯಿಂದ ಯಾರಿಗೂ ಹೇಳದೆ ಅವನ ಹತ್ತಿರ ಇದ್ದ ಸ್ಕೂಟಿಯಲ್ಲಿ ಹೋಗಿದ್ದು ವಾಪಸ್‌ ಮನೆಗೆ ಬಂದಿರುವುದಿಲ್ಲ.

ಭೀಮಾ ನದಿಗೆ ಬಟ್ಟೆ ತೊಳೆಯಲು ಹೋದ ತಾಯಿ-ಮಗು ಸಾವು!

ನಾವುಗಳು ನಮ್ಮ ಸಂಬಂಧಿಕರ, ಅತನ ಸ್ನೇಹಿತರ ಮನೆ ಮತ್ತು ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ. ಆದರೆ ಶುಕ್ರವಾರ ಮಧ್ಯಾಹ್ನ ಸಖರಾಯಪಟ್ಟಣ ಪೊಲೀಸ್‌ ಠಾಣೆಯಿಂದ ನಮಗೆ ದೂರವಾಣಿ ಕರೆ ಮಾಡಿಅಯ್ಯನಕೆರೆ ಹಿನ್ನೀರಿನಲ್ಲಿ ಒಂದು ಶವ ದೊರೆತಿರುವ ಬಗ್ಗೆ ಮಾಹಿತಿ ನೀಡಿದಾಗ ನಾವು ಹೋಗಿ ಶವವನ್ನು ನಮ್ಮ ಮಗ ಅಕ್ಷಯ್‌ ಎಂದು ಗುರುತಿಸಿದ್ದೇವೆ ಎಂದು ಉಪೇಂದ್ರನಾಥ್‌ ಸಖರಾಯಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ದೂರಿನ ಅನ್ವಯ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆದು ನಂತರ ಅವರ ಕುಟುಂಬಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು.