ಹೈದರಾಬಾದ್(ನ.  09)  ಅವರ ಕಣ್ಣಲ್ಲಿ ನೀರು ತುಂಬಿತ್ತು, ಧ್ವನಿ ನಡುಗುತ್ತಿತ್ತು.. ಶೇಕ್ ಅಬ್ದುಲ್ ಸಲಾಂ ಎನ್ನುವವವರು ವಿಡಿಯೋದಲ್ಲಿ ಒಂದೊಂದೆ ವಿಚಾರ ತೆರೆದದಿಡುತ್ತಾ ಹೋದರು.

ವಿಡಿಯೋದಲ್ಲಿ ಶೇಕ್ ಜತೆಗೆ ಅವರ ಪತ್ನಿ ನೂರ್ ಜಹಾನ್ ಮತ್ತು ಮಕ್ಕಳು ಇದ್ದರು. ಮುಗದಲ್ಲಿ ನಗುವಿರಲಿಲ್ಲ. ನೋವು ಮತ್ತು ವಿಷಾದ ತುಂಬಿಕೊಂಡಿತ್ತು.  ವಿಡಿಯೋ ಆರಂಭವಾಗಿತ್ತು. ನಾವು ಏನು ಹೇಳಬೇಕು ಎಂದು ಪತ್ನಿ ಪತಿಯ ಪ್ರಶ್ನೆ ಮಾಡುತ್ತಾರೆ. ವಿಡಿಯೋ ಆರಂಭ ಮಾಡಿದ್ದ ಶೇಕ್ ಅವರಿಗೂ ಏನೂ ಹೇಳಬೇಕು ಎಂಬುದು ಗೊತ್ತಿರಲಿಲ್ಲ!

ಆಂಧ್ರ ಪ್ರದೇಶದ ನಂದ್ಯಾಲ್ ನ ಮನೆಯೊಂದರಿಂದ ಈ ವಿಡಿಯೋ ರೆಕಾರ್ಡ್ ಆಡಗುತ್ತಿತ್ತು.   ನಾನು ಮಾಡದ ಅಪರಾಧವನ್ನು ಪೊಲೀಸರು ನನ್ನ ಮೇಲೆ ಹೊರಿಸಿದರು. ಅವರ ಕಿರುಕುಳ ತಾಳಲು ಸಾಧ್ಯವಾಗುತ್ತಿಲ್ಲ. ಅಂತಿಮವಾಗಿ ನಾವೆಲ್ಲರೂ ಒಂದು  ತೀರ್ಮಾನಕ್ಕೆ ಬಂದಿದ್ದೇವೆ ಎಂದು ಶೇಕ್ ಮಾತು ಆರಂಭಿಸುತ್ತಾರೆ.

ಶಿಕ್ಷಣ ಪಡೆಯಲು ಹಣವಿಲ್ಲ, ನೊಂದ ಟಾಪರ್ ಸುಸೈಡ್

ಆಂಧ್ರಪ್ರದೇಶದ ರೈಲ್ವೆ ಪೊಲೀಸರಿಗೆ ಕರ್ನೂಲ್ ಜಿಲ್ಲೆಯಲ್ಲಿ ಕುಟುಂಬವೊಂದರ ನಾಲ್ಕು ಮಂದಿಯ ಶವ ದೊರೆಯುತ್ತದೆ. ಈ ಕುಟುಂಬದ ಸಾವಿನ ನಂತರ ವಿಡಿಯೋ  ವೈರಲ್ ಆಗುತ್ತದೆ. ಸರ್ಕಲ್ ಇನ್ಸ್ ಪೆಕ್ಟರ್ ಮತ್ತು  ಮುಖ್ಯ ಪೇದೆಯೊಬ್ಬರು ಕುಟುಂಬಕ್ಕೆ ತಿಂಗಳುಗಳಿಂದ ನಿರಂತರ ಕಿರುಕುಳ ನೀಡುತ್ತಾ ಬಂದಿದ್ದರು.

ನಂದ್ಯಾಲ್ ದ ಆಭರಣದ ಅಂಗಡಿಯೊಂದರಲ್ಲಿ ಶೇಕ್ ಕೆಲಸ ಮಾಡಿಕೊಂಡಿದ್ದರು.  ಅಂಗಡಿಯಲ್ಲಿ ಆದ ಆಭರಣ ಕಳ್ಳತನದ ಆರೋಪವನ್ನು ಶೇಕ್ ಮೇಲೆ ಹೊರೆಸಿ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಅವರನ್ನು  ಬಂಧಿಸಿ ಜೈಲಿಗೆ ಹಾಕಲಾಗಿತ್ತು.  ಜಾಮೀನು ಪಡೆದುಕೊಂಡು ಬಂದ ಶೇಕ್ ಬಾಡಿಗೆ ಆಟೋ ಒಂದನ್ನು ಓಡಿಸುತ್ತಿದ್ದರು. ಆದರೆ ಇಲ್ಲಿಯೂ ಬಿಡದ ಆಭರಣ ಅಂಗಡಿ ಮಾಲೀಕ ಮತ್ತು ಪೊಲೀಸರು ಕಿರುಕುಳ ನೀಡುತ್ತಲೇ ಇದ್ದರು.

ಆಭರಣ ಕಳ್ಳತನ ಪ್ರಕರಣದಲ್ಲಿ ಶೇಕ್ ಅವರನ್ನು ಬಂಧಿಸಿ ಅವರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ಮಾಡಿದ್ದರು.  ಪ್ರತಿ ತಿಂಗಳು ಸಹಿ ಹಾಕಲು ಪೊಲೀಸ್ ಸ್ಟೇಶನ್ ಗೆ ಹೋದಾಗ ಅಲ್ಲಿ ಅಶ್ಲೀಲ ಭಾಷೆಯಲ್ಲಿ ನಿಂದಿಸಲಾಗುತ್ತಿತ್ತು ಎಂದು ಶೇಕ್ ಸಂಬಂಧಿಕರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ತನ್ನ ಬ್ಯಾಗ್ ಮಿಸ್ ಆಗಿದೆ ಎಂದದು ಪೊಲೀಸರ ಬಳಿ ಬಂದಿದ್ದ. ಆತ ಅಬ್ದುಲ್ ಶೇಕ್ ಆಟೋದಲ್ಲಿ ಪ್ರಯಾಣಿಸಿದ್ದೇನೆ ಎಂದು ಆರೋಪಿಸಿದ ಪೊಲೀಸರು ನಾಳೆಯೊಳಗೆ ಬ್ಯಾಗ್ ಹಿಂದಿರುಗಿಸದಿದ್ದರೆ ವಿಜಯವಾಡಕ್ಕೆ ಎಳೆದುಕೊಂಡು ಹೋಗುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

 ವಿಡಿಯೋದಲ್ಲಿ ಎಲ್ಲ ವಿಚಾರ ಹೇಳಿರುವ ಅಬ್ದುಲ್, ಬ್ಯಾಗ್ ಕಳ್ಳತನಕ್ಕೂ, ಆಭರಣ ಕಳ್ಳತನಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಪೊಲೀಸರ ಕಿರುಕುಳ ತಾಳಲಾರಾಗಿದೆ. ನಮಗೆ ಸಹಾಯ ಮಾಡುವವರು ಯಾರೂ ಇಲ್ಲವಾಗಿದೆ.  ಸಾವಿನಲ್ಲೇ ನಮಗೆ ಶಾಂತಿ ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದು ವಿಡಿಯೋ ಮಾಡಿದ್ದಾರೆ.  ಪತ್ನಿ ನೂರ್ ಜಹಾನ್ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೆ, ಮಗಳು ಸಲ್ಮಾ ಹತ್ತನೇ ತರಗತಿ ಅಧ್ಯಯನ ಮಾಡುತ್ತಿದ್ದರು. ಪುತ್ರ ಕಲಂದರ್ ನಾಲ್ಕನೇ ಕ್ಲಾಸ್.

ನೊಂದು ಬೆಂದ ಕುಟುಂಬ ನವೆಂಬರ್ ನಾಲ್ಕರಂದು ಆತ್ಮಹತ್ಯೆಗೆ ಶರಣಾಗಿದೆ.  ಪೊಲೀಸರು ನಿರಂತರ ಕಿರುಕುಳ ತಾಳಲಾರದೆ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ. ಪೊಲೀಸರು ನೂರ್ ಜಹಾನ್ ಅವರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದರು. ಆಭರಣ ಕಳ್ಳತನಕ್ಕೆ ಸಂಬಂಧಿಸಿ ಕುಟುಂಬದ ಆಭರಣ ಮುಟ್ಟುಗೋಲು ಹಾಕಿಕೊಂಡಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ.

ಸಿಎಂ ಜಗನ್ ಮೋಹನ್ ರೆಡ್ಡಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ತನಿಖೆಗೆ ಆದೇಶ ನೀಡಿದ್ದಾರೆ.  ಇಬ್ಬರು ಪೊಲೀಸ್ ಅಧಿಕಾರಿಗಳ ಬಂಧನವಾಗಿದೆ. ಇನ್ನೊಂದು ಕಡೆ ಮುಸ್ಲಿಂಮರ ಮೇಲೆ ಯಾವ ರೀತಿ ಸುಳ್ಳು ಕೇಸ್ ದಾಖಲಿಸಲಾಗುತ್ತದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ  ನಿದರ್ಶನ ಬೇಕಾ ಎಂದು ಚಂದ್ರಬಾಬು ನಾಯ್ಡು ಕೇಳಿದ್ದಾರೆ