ಮೂಲತಃ ಹಿಂದೂ ಸಂಸ್ಥೆ ಆಗಿದ್ದರೂ, ಮುಸ್ಲಿಮರ ಹೆಸರಿನಲ್ಲಿ ಆಗಮಿಸಿ ಬಡ ಹಿಂದೂ ರೈತರಲ್ಲಿ ಭೀತಿ ಹುಟ್ಟಿಸಿ ಒಟ್ಟು 200 ಎಕರೆ ಜಮೀನು ಲಪಟಾಯಿಸಿದ ಪ್ರಕರಣ ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ನಡೆದಿದೆ.
ಖರ್ಗೋನ್: ಮೂಲತಃ ಹಿಂದೂ ಸಂಸ್ಥೆ ಆಗಿದ್ದರೂ, ಮುಸ್ಲಿಮರ ಹೆಸರಿನಲ್ಲಿ ಆಗಮಿಸಿ ಬಡ ಹಿಂದೂ ರೈತರಲ್ಲಿ ಭೀತಿ ಹುಟ್ಟಿಸಿ ಒಟ್ಟು 200 ಎಕರೆ ಜಮೀನು ಲಪಟಾಯಿಸಿದ ಪ್ರಕರಣ ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ನಡೆದಿದೆ.
2000ನೇ ಸಾಲಿನಲ್ಲಿ ಖರ್ಗೋನ್ ಪಟ್ಟಣದ (Khargone town) ಹೊರವಲಯದಲ್ಲಿರುವ ಸಣ್ಣ ರೈತರಿಂದ ಭೂಮಿಯನ್ನು ಖರೀದಿಸಲಾಗಿತ್ತು. ಅಲ್ಲಿದ್ದ ಹಿಂದೂ (Hindu) ಸಣ್ಣ ರೈತರಿಗೆ, ‘ಈ ಜಾಗದಲ್ಲಿ ಮುಸ್ಲಿಮರು (Muslim) ಶೀಘ್ರವೇ ಬಂದು ನೆಲೆಸಲಿದ್ದಾರೆ. ಕಸಾಯಿ ಖಾನೆಗಳು ಬರಲಿವೆ’ ಎಂದು ಜಾಕೀರ್ ಖಾನ್ (Zakir Khan) ಹೆಸರಿನ ವಕ್ತಿಯೊಬ್ಬ ಹೇಳಿದ್ದ. ಅಲ್ಲದೆ, ‘ನಮ್ಮದು‘ತಂಜೀಮ್-ಇ-ಝರ್ಕೇಕ್’ ಹೆಸರಿನ ಮುಸ್ಲಿಂ ಸಂಸ್ಥೆ ಆಗಿದ್ದು ಹಜ್ ಸಮಿತಿ ಹಾಗೂ ಮುಸ್ಲಿಮರಿಗಾಗಿ ಸ್ಮಶಾನ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದ. ಕಸಾಯಿಖಾನೆಗಳು ಬರಲಿವೆ ಎಂಬ ಸುದ್ದಿ ಕೇಳಿ ಚಿಂತೆಗೀಡಾದ ಜನರು ಪುಡಿಗಾಸಿಗೆ ತಮ್ಮ ಜಮೀನನ್ನು ‘ತಂಜೀಮ್-ಇ-ಝರ್ಕೇಕ್’ (Tanjeem-e-Zarkeq) ಸಂಘಟನೆಗೆ ಮಾರಾಟ ಮಾಡಿದ್ದರು.
ಆದರೆ ಜಾಗ ಖರೀದಿ ಮುಗಿಸಿದ್ದೇ ತಡ, ಸಂಘಟನೆಯ ಹೆಸರನ್ನು 2007ರಲ್ಲಿ ‘ಪ್ರೊಫೆಸರ್ ಪಿ.ಸಿ. ಮಹಾಜನ್ ಫೌಂಡೇಶನ್’ ಎಂದು ಬದಲಾಯಿಸಲಾಗಿದೆ. ಬಿಜೆಪಿ ನಾಯಕ ರಣಜೀತ್ ಸಿಂಗ್ ದಂಡಿರ್ (Ranjeet Singh Dandir) ಈ ಸಂಘಟನೆಯ ಮುಖ್ಯಸ್ಥನಾಗಿದ್ದಾರೆ. ಈ ಸ್ಥಳದಲ್ಲಿ ಈಗ ಟೌನ್‌ಶಿಪ್ ನಿರ್ಮಾಣ ಆಗುತ್ತಿದೆ. ಇದು ತಿಳಿದ ಕೂಡಲೇ, ತಾವು ಮೋಸ ಹೋದೆವು ಎಂದು ರೈತರು ಪೊಲೀಸರಿಗೆ ದೂರಿದ್ದಾರೆ. ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಈ ಜಾಗವನ್ನು ಸದುದ್ದೇಶಕ್ಕಾಗಿ ಬಳಸಲಾಗುತ್ತಿದ್ದು, ವಸತಿ ಸಂಕೀರ್ಣ ಹಾಗೂ ಗೋಶಾಲೆಯನ್ನು ಇಲ್ಲಿ ನಿರ್ಮಿಸಲಾಗುವುದು ಎಂದು ರಣಜೀತ್ ಹೇಳಿದ್ದಾರೆ.
ಜಮ್ಮು - ಕಾಶ್ಮೀರದಲ್ಲಿ ಎಲ್ಲಾ ಭಾರತೀಯರಿಗೆ ಭೂಮಿ ಖರೀದಿಗೆ ಅವಕಾಶ, ಕೇಂದ್ರದ ಮಹತ್ವದ ಹೆಜ್ಜೆ!
