Asianet Suvarna News Asianet Suvarna News

ಚಿತ್ರದುರ್ಗ: ಜಮೀನು ವಿವಾದ, ‌ಕೊಲೆ ಮಾಡುವ ಹಂತಕ್ಕೆ ತಲುಪಿದ ಗಲಾಟೆ

ಜಮೀನು ವಿವಾದಕ್ಕೆ ಶುರುವಾದ ಗಲಾಟೆ ‌ಕೊಲೆ ಮಾಡುವ ಹಂತಕ್ಕೆ ತಲುಪಿರೋದು ದುರಂತವೇ ಸರಿ. ಇನ್ನಾದ್ರು ಪೊಲೀಸರು ಇಂಥವರಿಗೆ ತಕ್ಕ ಪಾಠ ಕಲಿಸಿ ಇವರಲ್ಲಿ ಜಾಗೃತಿ ಮೂಡಿಸಬೇಕಿದೆ
 

Land Dispute Uproar in Chitradurga grg
Author
First Published Aug 16, 2023, 11:29 PM IST | Last Updated Aug 16, 2023, 11:29 PM IST

ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಆ.16):  ಅಕ್ಕ ಪಕ್ಕದ ಜಮೀನುಗಳು ಅಂದ್ಮೇಲೆ ಸಣ್ಣ ಪುಟ್ಟ ಗಲಾಟೆಗಳು ನಡೆಯುವುದು ಕಾಮನ್. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಶುರುವಾದ ಗಲಾಟೆ ‌ಕೊಲೆ‌ ಮಾಡುವ ಹಂತಕ್ಕೆ ತಲುಪಿದ್ದು ನಮಗೆ ಪ್ರಾಣ ಭಯವಿದೆ ರಕ್ಷಣೆ ಕೊಡಿ ಎಂದು ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿರೋ ಘಟನೆಯಾದ್ರು ಏನು ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ......

ಎಸ್, ಹೀಗೆ ಜಿಲ್ಲಾ ಆಸ್ಪತ್ರೆಯಲ್ಲಿ ಕೈ ಹಾಗೂ ಕಾಲುಗಳಿಗೆ ಬ್ಯಾಂಡೇಜ್ ಹಾಕಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಹೆಸರು ಶಿವಕುಮಾರ್ ಅಂತ, ಚಿತ್ರದುರ್ಗ ತಾಲ್ಲೂಕಿನ ಸೊಂಡೇಕೊಳ ಗ್ರಾಮದ ನಿವಾಸಿ. ಇಂದು ಬೆಳಗ್ಗೆ ತಮ್ಮ ಜಮೀನಿನಲ್ಲಿಯೇ ಇದ್ದ ತೆಂಗಿನ ಗರಿಗಳಿಗೆ ಬೆಂಕಿ ಇಟ್ಟಿದ್ದಾನೆ. ಆದ್ರೆ ಇದನ್ನೇ ನೆಪವಾಗಿಟ್ಟುಕೊಂಡ ಪಕ್ಕದ ಜಮೀನಿನ ಮಾಲೀಕ ಗೋಪಾಲ ಹಾಗೂ ಸಹೋದರ ನಿಜಲಿಂಗಪ್ಪ ಶಿವಕುಮಾರ್ ಮಧ್ಯೆ ಮಾತಿನ ಚಕಮಕಿ ನಡೆಸಿ ಗಲಾಟೆ ಶುರು ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದು ಅವರು ಶಿವಕುಮಾರ್ ಅವರನ್ನು ಪಕ್ಕದಲ್ಲಿಯೇ ಇದ್ದ ಬೆಂಕಿಗೆ ನೂಕಿ ಹತ್ಯೆಗಯ್ಯಲು ಯತ್ನಸಿದ್ದಾರೆ. ಸದ್ಯ ಪ್ರಾಣಾಯಾಮದಿಂದ ಪಾರಾಗಿರುವ ಶಿವಕುಮಾರ್ ಕೂಡಲೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಈ ಘಟನೆ ಕುರಿತು ಗಾಯಾಳು ಶಿವಕುಮಾರ್ ಅವರನ್ನೇ ವಿಚಾರಿಸಿದ್ರೆ, ಕಳೆದ ಒಂದು ತಿಂಗಳ ಹಿಂದಷ್ಟೇ ಪಕ್ಕದ ಜಮೀನನ ಗೋಪಾಲ, ನಿಜಲಿಂಗಪ್ಪ ನಮ್ಮ ಜಮೀನಿನ ಪಕ್ಕ ಬೆಂಕಿ ಇಟ್ಟಾಗ ನಮ್ಮದೇ ಜಮೀನಲ್ಲಿದ್ದ ತೆಂಗು ಹಾಗೂ ಅಡಿಕೆ ಮರಗಳು ಸುಟ್ಟು ಹೋಗಿದ್ದವು. ಆದ್ರೂ ನಾವು ಊರು ಅಂದ್ಮೇಲೆ‌ ಎಲ್ಲರೂ ಹೊಂದಾಣಿಕೆಯಿಂದ ಬಾಳಬೇಕು ಎಂದು ಸುಮ್ಮನಾಗಿದ್ದೆವು. ಆದ್ರೆ ಈ ಬಾರಿ ನನ್ನ ಜಮೀನಿನಲ್ಲಿ ತೆಂಗಿನ ಗರಿಗಳಿಗೆ ಬೆಂಕಿ ಹಾಕಿದ್ದಕ್ಕೆ ಸುಖಾ ಸುಮ್ಮನೇ ಗಲಾಟೆ ಶುರು ಮಾಡಿ ನನ್ನನ್ನು ಕೊಲೆ ಮಾಡಲೆಂದೇ ಯತ್ನ ಮಾಡಿದ್ದು, ಕೊಲೆ ಬೆದರಿಕೆ ಇದೆ. ಆದ್ದರಿಂದ ಪೊಲೀಸರು ನಮಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿಕೊಂಡರು.

'ನಿನ್ನ ಅಮೂಲ್ಯ ವಸ್ತು ಕಿತ್ಕೊಂಡಿದ್ದೇನೆ..' ಬಾಯ್‌ಫ್ರೆಂಡ್‌ನ ಮಗನನ್ನು ಕೊಂದ ಬಳಿಕ ಈ ಮಾತು ಹೇಳಿದ್ದ ಪ್ರೇಯಸಿ!

ಶಿವಕುಮಾರ್ ಗಾಯಾಳು

ಇನ್ನೂ ಈ ಘಟನೆ ಸಂಬಂಧ ಅನೇಕರು ಗ್ರಾಮದಲ್ಲಿ ಶಿವಕುಮಾರ್ ಪರ ಮಾತನಾಡಿದ್ದು, ಆರೋಪಿಗಳಾದ ನಿಜಲಿಂಗಪ್ಪ ಹಾಗೂ ಗೋಪಾಲನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಪತಿ ಜಮೀನುಗಳಿಗೆ ಪ್ರತೀ ಬಾರಿ ಒಬ್ಬೊಬ್ಬರೇ ಹೋಗ್ತಾರೆ. ಇವರು ನೋಡಿದ್ರೆ ಕೊಲೆ ಮಾಡಲಿಕ್ಕೂ ಯೋಚನೆ ಮಾಡದ ಜನರು. ಈ ಹಿಂದೆ ಅವರು ಬೆಂಕಿ ಇಟ್ಟಾಗ ನಮ್ಮ ಜಮೀನಿನಲ್ಲಿದ್ದ ಬೆಳೆ ನಾಶವಾಗಿತ್ತು ಅದಕ್ಕೆ ಯಾರು ಹೊಣೆ. ಇಂದು ಬೆಂಕಿಯಿಂದ ತಂತಿ ಬೇಲಿ ಹಾಳಾಗುತ್ತದೆ ಎಂದು ಗಲಾಟೆ ಮಾಡಿದ ಇವರು, ಅಂದು ನಮ್ಮ ಜಮೀನಲ್ಲಿ ಸುಟ್ಟು ನಾಶವಾಗಿರೋ ಬೆಳೆಗಳಿಗೆ ಹಾಗೂ ಇಂದು ಗಾಯಾಳು ಆಗಿರುವ ನನ್ನ ಗಂಡನಿಗೆ ಏನಾದ್ರು ಅನಾಹುತ ಆದ್ರೆ ಇವರು ವಾಪಸ್ ಮರಳಿ ಕೊಡ್ತಾರ ಎಂದು ಪ್ರಶ್ನಿಸಿದರು. ಆದ್ದರಿಂದ ಪೊಲೀಸರ ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡಬೇಕು ಮುಂದೆ ಈ ರೀತಿಯ ಘಟನೆ ನಡೆಯದಂತೆ ರಕ್ಷಣೆ ಬೇಕು ಎಂದು ಒತ್ತಾಯಿಸಿದರು.

ಒಟ್ಟಾರೆ ಜಮೀನು ವಿವಾದಕ್ಕೆ ಶುರುವಾದ ಗಲಾಟೆ ‌ಕೊಲೆ ಮಾಡುವ ಹಂತಕ್ಕೆ ತಲುಪಿರೋದು ದುರಂತವೇ ಸರಿ. ಇನ್ನಾದ್ರು ಪೊಲೀಸರು ಇಂಥವರಿಗೆ ತಕ್ಕ ಪಾಠ ಕಲಿಸಿ ಇವರಲ್ಲಿ ಜಾಗೃತಿ ಮೂಡಿಸಬೇಕಿದೆ.

Latest Videos
Follow Us:
Download App:
  • android
  • ios