ಬೆಂಗಳೂರು: ಹಳೆ ದ್ವೇಷದ ಹಿನ್ನಲೆ, ಉದ್ಯಮಿ ಮೇಲೆ ಲೇಡಿ ಡಾನ್ ಹಲ್ಲೆ
ಆರೋಪಿಗಳಾದ ದುರ್ಗಾ @ ಸಹನಾ ಅಮೋದ್ ಮತ್ತು ತರುಣ್ ಗ್ಯಾಂಗ್ ಹಳೆ ದ್ವೇಷದ ಹಿನ್ನಲೆಯಲ್ಲಿ ಉದ್ಯಮಿ ಅಖಿಲ್ ಯಾದವ್ ಮೇಲೆ ಹಲ್ಲೆ ನಡೆಸಿದೆ.
ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು(ಮೇ.18): ಅದು ಐದು ವರ್ಷಗಳ ಹಳೆಯ ವ್ಯವಹಾರದ ವಿಚಾರ, ವ್ಯವಹಾರದಲ್ಲಿ ಮೋಸ ಆಗಿದ್ದ, ಕಾರಣ ಕೇಸ್ ದಾಖಲಾಗಿ ಒರ್ವ ಅರೆಸ್ಟ್ ಸಹ ಆಗಿದ್ದ, ಎಲ್ಲವು ಮುಗಿತು ಎನ್ನುವಾಗ ಮತ್ತೆ ಮನೆ ಹತ್ತಿರ ಬಂದು ಅಟ್ಯಾಕ್ ಮಾಡಲಾಗಿದೆ.
ಐದು ವರ್ಷಗಳ ಹಿಂದೆ ಈಗ ಹಲ್ಲೆಗೆ ಒಳಗಾಗಿದ್ದೇನೆ ಎಂದು ಅರೋಪಿಸಿರುತ್ತಿರೋ ಅಖಿಲ್ ಮತ್ತು ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿರುವ ರೋನಿತ್ ಇಬ್ಬರು ಒಳ್ಳೆಯ ಪರಿಚಿತರು. ಇಬ್ಬರು ಉದ್ಯಮಿಗಳೇ ಆದ್ರೆ ತನ್ನ ಸ್ನೇಹವನ್ನು ತಪ್ಪಾಗಿ ಬಳಸಿಕೊಂಡು ಮಹೇಂದ್ರ ಶೋರೂಂ ನಲ್ಲೂ ಮೂರು ಕಾರುಗಳ ಖರೀದಿ ಮಾಡಿದ್ದಾರೆ. ಅದನ್ನು ಚೆಕ್ ಮೂಲಕ ಕೊಟ್ಟಿ ಅಲ್ಲಿ ಚೆಕ್ ಬೌನ್ಸ್ ಆಗಿತ್ತು. ಆ ನಂತ್ರ ಶೋರೂಮ್ ನಲ್ಲಿ ಕೊಂಡಿದ್ದ ಮೂರು ಕಾರನ್ನು ಹಲ್ಲೆಗೆ ಒಳಗಾದ ಆಖಿಲ್ ಗೆ ಮಾರಾಟ ಮಾಡಿ ದಾಖಲಾತಿ ನೀಡಿರಲಿಲ್ಲಾ ಕೊನೆಗೆ ಶೋರೂಮ್ ಗೆ ಕಟ್ಟಬೇಕಾದ ಹಣವನ್ನು ಅಖಿಲ್ ಕಟ್ಟಿದ್ದರು ಎನ್ನೋದು ಹಳೆ ಕಥೆ.
ಹೊಸಕೋಟೆ: ಮತ ಹಾಕಿಲ್ಲ ಅನ್ನೋ ವಿಚಾರಕ್ಕೆ ಗಲಾಟೆ, ದೊಡ್ಡಪ್ಪನನ್ನೇ ಕೊಲೆ ಮಾಡಿದ ಮಗ..!
ಈ ಬಗ್ಗೆ ಶೋರೂಮ್ ಮ್ಯಾನೇಜರ್ ನೀಡಿದ್ದ ಕೇಸ್ ನಲ್ಲಿ ರೋನಿತ್ ಅರೆಸ್ಟ್ ಆಗಿದ್ದರಂತೆ ಇಷ್ಟೆಲ್ಲಾ ಆಗಿದೆ. ಎಲ್ಲವೂ ಮುಗಿದಿದೆ ಎನ್ನುವ ಎಂದುಕೊಂಡು ವರ್ಷಗಳು ಕಳೆದ ನಂತ್ರ ರೋನಿತ್ ಮತ್ತು ದುರ್ಗ ಹಾಗೂ ಇತರರು ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ಬರ್ತಿದ್ದ. ಅಖಿಲ್ ನನ್ನು ಫಾಲೋ ಮಾಡಿ ಅಡ್ಡಗಟ್ಟಿ ಹಲ್ಲೆಗೆ ಯತ್ನ ಮಾಡದ್ದಾರೆ ಎನ್ನಲಾಗಿದೆ. ಲೇಡಿ ಡಾನ್ ಗಲಾಟೆ ನಡೆದಿದೆ ಎನ್ನುವುದಕ್ಕೆ ಮೊಬೈಲ್ ನಲ್ಲಿ ಸೆರೆಯಾಗಿರೋ ಒಂದು ವಿಡಿಯೋ ಸಹ ಇದೆ.
ಹಳೇ ಕೇಸ್ ನಲ್ಲಿ ಈಗಾಗಲೇ ತನಿಖೆ ಮುಗಿದಿದೆ. ಸದ್ಯ ಗಲಾಟೆ ಬಗ್ಗೆ ಪ್ರಕಾರಣ ದಾಖಲು ಮಾಡಿಕೊಂಡಿರುವ ಕೊಡಿಗೆಹಳ್ಳಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತಿದ್ದಾರೆ.