Asianet Suvarna News Asianet Suvarna News

ಮೈಸೂರು ಆಯ್ತು ಬೆಳಗಾವಿಯಲ್ಲಿ ಭೀಕರ ಅಪಘಾತ : ಒಬ್ಬ ಸಾವು, ಮೂವರ ಸ್ಥಿತಿ ಗಂಭೀರ

ಬೆಳಗಾವಿಯಲ್ಲಿ ಗುರುವಾರ ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಬೈಕ್‌ ಡಿಕ್ಕಿಹೊಡೆದಿದ್ದು, ಒಬ್ಬರು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

KSRTC bus and bike accident in Belagavi one dead and three seriously injured sat
Author
First Published Jun 1, 2023, 5:19 PM IST

ಬೆಳಗಾವಿ (ಜೂ.1): ರಾಜ್ಯದಲ್ಲಿ ಕಳೆದ ಎರಡು ದಿನಗಳ ಹಿಂದೆ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ನಡೆದ ಭೀಕರ ಅಪಘಾತದಲ್ಲಿ ಬಳ್ಳಾರಿ ಮೂಲದ ಒಂದೇ ಕುಟುಂಬದ 10 ಮಂದಿ ಸಾವನ್ನಪ್ಪಿದ್ದರು. ಆದರೆ, ಇಂದು (ಗುರುವಾರ) ಮಧ್ಯಾಹ್ನ ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಬೈಕ್‌ ಡಿಕ್ಕಿಹೊಡೆದಿದ್ದು, ಒಬ್ಬರು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋಳಿಹಳ್ಳಿ ಗ್ರಾಮದ ಬಳಿ ಭೀಕರ ಅಪಘಾತ ಸಂಭಿವಿಸಿದೆ. ಸರ್ಕಾರಿ ಬಸ್ ಹಾಗೂ ಬೈಕ್ (KSRTC Bus and Bike Accident) ನಡುವೆ ಮುಖಾಮುಖಿ ಡಿಕ್ಕಿ ಆಗಿದ್ದು, ನಾಲ್ವರಿಗೆ ಗಂಭೀರ ಗಾಯವಾಗಿತ್ತು. ಇನ್ನು ಯಲ್ಲಪ್ಪ ವಣ್ಣೂರು ಎನ್ನುವ ವ್ಯಕ್ತಿಯ ಒಂದು ಕಾಲಿನ ಭಾಗವೇ ತುಂಡಾಗಿ (Leg) ರಸ್ತೆಯಲ್ಲಿ ಬಿದ್ದಿತ್ತು. ಇನ್ನು ತೀವ್ರ ಗಂಭೀರ ಸ್ಥಿತಿಯಲ್ಲಿದ್ದ ನಾಲ್ವರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತೀವ್ರ ಗಾಯಗೊಂಡಿದ್ದ ಯಲ್ಲಪ್ಪ ವಣ್ಣೂರ (Yallappa Vannur) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

ಶವಗಳ ಅತ್ಯಾಚಾರ ಮಾಡುವ ಕಾಮುಕರಿಗೆ ಶಿಕ್ಷೆಯ ಚೌಕಟ್ಟು ರೂಪಿಸಿ

ಸ್ಥಳದಲ್ಲಿಯೇ ಬೈಕ್‌ ಸವಾರನ ಕಾಲು ತುಂಡು:  ಇನ್ನು ಬಸ್‌ ಮತ್ತು ಬೈಕ್‌ ಅಪಘಾತದ ರಭಸಕ್ಕೆ ಬೈಕ್ ಸವಾರನ ಕಾಲು ತುಂಡಾಗಿತ್ತು. ಇನ್ನು ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಾರದ ಹಿನ್ನೆಲೆ ಕಾರಿನಲ್ಲಿ ಗಾಯಾಳು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಬೈಕ್‌ನಲ್ಲಿ ಇಬ್ಬರು ಮಕ್ಕಳು ಸೇರಿ ಒಟ್ಟು ನಾಲ್ವರು ತೆರಳುತ್ತಿದ್ದರು. ಕಡತನ ಬಾಗೇವಾಡಿಯಿಂದ (Kadatana Bagevadi) ಅಳ್ನಾವರದತ್ತ ನಾಲ್ವರು ಬೈಕ್‌ನಲ್ಲಿ ಹೋಗುತ್ತಿದ್ದರು. ಇನ್ನು ಶಿರಸಿಯಿಂದ ಬೆಳಗಾವಿಯತ್ತ ಕೆಎಸ್ಆರ್‌ಟಿಸಿ ಬಸ್ ಬರುತ್ತಿತ್ತು. ಆದರೆ, ತಿರುವಿನಲ್ಲಿ ಬೈಕ್‌ ಹಾಗೂ ಬಸ್‌ ಮುಖಾಮುಖಿ ಢಿಕ್ಕಿಯಾಗಿವೆ. 

ಯಲ್ಲಪ್ಪ ವಣ್ಣೂರು ಸಾವು: ಗಾಯಾಳುಗಳನ್ನು ಕಡತನ ಬಾಗೇವಾಡಿ ನಿವಾಸಿಗಳಾದ ಯಲ್ಲಪ್ಪ ವಣ್ಣೂರ(25), ಭೀಮಪ್ಪ ವಣ್ಣೂರ (38) ಪಲ್ಲವಿ ವಣ್ಣೂರ ಹಾಗೂ ಐಶ್ವರ್ಯ ವಣ್ಣೂರು (16) ಎಂದು ಗುರುತಿಸಲಾಗಿದೆ. ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು. ಆದರೆ, ಯಲ್ಲಪ್ಪ ವಣ್ಣೂರು ಈಗ ಸಾವನ್ನಪ್ಪಿದ್ದು, ಭೀಮಪ್ಪ ವಣ್ಣೂರ ಹಾಗೂ ಅವರ ಪುತ್ರಿ ಪಲ್ಲವಿಗೆ ಗಂಭೀರ ಗಾಯವಾಗಿದೆ. ಖಾನಾಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ ನಂತರ ಬೆಳಗಾವಿ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ರವಾನೆ ಮಾಡಲಾಗಿದೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ದೂಧಗಂಗಾದಲ್ಲಿ ಈಜಲು ಹೋಗಿ ಯುವಕ ಸಾವು: ಕಲ್ಲುಕ್ವಾರಿಯಲ್ಲಿ ಇಬ್ಬರು ಬಾಲಕರ ದುರ್ಮರಣ

ಬೆಳಗಾವಿ ಜಿಲ್ಲಾಸ್ಪತ್ರೆಗೆ ಗಾಯಾಳುಗಳ ರವಾನೆ: ಅಪಘಾತದಲ್ಲಿ ಗಾಯಗೊಂಡಿದ್ದ ಮೂವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ (Belagavi District hospital) ರವಾನೆ ಮಾಡಲಾಗಿದೆ. ಇನ್ನು ಯಲ್ಲಪ್ಪ ವಣ್ಣೂರ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದು, ಬಾಕಿ ಮೂವರಿಗೆ ಜಿಲ್ಲಾಸ್ಪತ್ರೆಯ ಐಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಲುಗಳಾದ ಭೀಮಪ್ಪ, ಐಶ್ವರ್ಯ ಹಾಗೂ ಪಲ್ಲವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ವ್ಯಕ್ತಿ ಹಾಗೂ ಗಾಯಾಳುಗಳ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಆಗಮಿಸಿ ಗೋಳಾಡುತ್ತಿದ್ದು, ಭೀಕರ ಅಪಘಾತದ ಘಟನೆಯ ಸಂತ್ರಸ್ಥರ ಸ್ಥಿತಿ ಮನಕಲಕುವಂತಿತ್ತು. 

Follow Us:
Download App:
  • android
  • ios