* ಗಂಡನ ಮನೆಯವರಿಂದ ವರದದಕ್ಷಿಣೆ ಕಿರುಕುಳ* ನೇಣಿಗೆ ಶರಣಾದ ಯುವತಿ* ಇತ್ತಿಚೇಗಷ್ಟೇ ಮದುವೆಯಾಗಿದ್ದ ಜೋಡಿ* ಗಂಡ ಕಿರಣ್ ಕುಮಾರ್ ಸರ್ಕಾರಿ ನೌಕರ

ಕೊಲ್ಲಂ(ಜೂ. 21) ಇತ್ತೀಚೆಗಷ್ಟೆ ಮದುವೆಯಾಗಿದ್ದ 24 ವರ್ಷದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ ಮತ್ತು ಆತನ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾಳೆ.

ಗಂಡನ ಮನೆಯವರು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ತನ್ನ ಸಂಬಂಧಿಕರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ವಾಟ್ಸಪ್ ಸಂದೇಶ ಕಳುಹಿಸಿದ್ದರು. ಮೈಮೇಲೆ ಗಾಯಗಳಾಗಿರುವ ಪೋಟೋವನ್ನು ಕಳುಹಿಸಿದ್ದರು.

ಅತ್ತೆ ಕೊಂಕು ಮಾತಿಗೆ ಬೇಸತ್ತು ಸೀಮೆಎಣ್ಣೆ ಸುರಿದುಕೊಂಡಳು 

ಗಂಡನ ಕುಟುಂಬದ ಕಿರುಕುಳ ತಾಳಲಾರದೆ ವಿಸ್ಮಯ ನಾಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳ ರಾಜ್ಯದ ಸರ್ಕಾರಿ ನೌಕರಿಯಲ್ಲಿರುವ ಗಂಡ ಕಿರಣ್ ಕುಮಾರ್ ಮನೆಯ ಬಾತ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದ ಪತ್ನಿ ಶವ ಕಂಡಿದ್ದಾರೆ.

ಯುವತಿಯ ಕುಟುಂಬದವರು ಆಕೆ ಕಳುಹಿಸಿದ ವಾಟ್ಸಪ್ ಸಂದೇಶಗಳನ್ನು ಮಾಧ್ಯಮದವರಿಗೆ ನೀಡಿದ್ದು ಗಂಡ ಪ್ರಮುಖ ಆರೋಪಿಯಾಗಿದ್ದಾನೆ. ಕೇರಳ ಮಹಿಳಾ ಆಯೋಗ ಸಹ ದೂರು ದಾಖಲಿಸಿದ್ದು ರಾಜ್ಯದ ಆರ್ ಟಿಒ ದಲ್ಲಿ ಕೆಲಸ ಮಾಡುತ್ತಿದ್ದ ಗಂಡ ಕಿರಣ್ ಕುಮಾರ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.