ಲೋಕಾಯುಕ್ತ ದಾಳಿ : ಚಿನ್ನದ ಮೂಟೆಯನ್ನು ಪಕ್ಕದ ಮನೆಗೆ ಎಸೆದ ಸರ್ಕಾರಿ ಅಧಿಕಾರಿ ಅತ್ಹರ್ ಅಲಿ

ಬೆಂಗಳೂರಿನಲ್ಲಿ ಲೋಕಾಯುಕ್ತ ತಂಡ ಕಾನೂನು ಮಾಪನ ಇಲಾಖೆ ಅಧಿಕಾರಿ ಮನೆ ಮೇಲೆ ದಾಳಿ ಮಾಡಿದ್ದು, ಹೆದರಿದ ಅಧಿಕಾರಿ ವಜ್ರ, ಚಿನ್ನಾಭರಣವನ್ನು ಮೂಟೆ ಕಟ್ಟಿ ಪಕ್ಕದ ಮನೆಗೆ ಎಸೆದಿದ್ದಾನೆ.

Karnataka lokayukta raid gold bag found in bengaluru Legal Metrology Department officer residency sat

ಬೆಂಗಳೂರು (ಜು.19): ಬೆಂಗಳೂರಿನಲ್ಲಿ ಕಾನೂನು ಮಾಪನ ಇಲಾಖೆ ಡೆಪ್ಯೂಟಿ ಕಂಟ್ರೋಲರ್ ಅಧಿಕಾರಿ ಮನೆಯ ಮೇಲೆ ಶುಕ್ರವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಲೋಕಾಯುಕ್ತರು ದಾಳಿ ಮಾಡಿ ಪರಿಶೀಲನೆ ಮಾಡುತ್ತಿದ್ದಂತೆ ಲಕ್ಷಾಂತರ ರೂ. ಹಣ, ಕೇಜಿಗಟ್ಟಲೆ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಮೂಟೆ ಕಟ್ಟಿ ಪಕ್ಕದ ಮನೆಗೆ ಎಸೆದಿದ್ದಾರೆ.

ಹೌದು, ಸರ್ಕಾರಿ ಅಧಿಕಾರಿಗಳು ಬಡವರು ನರಳಾಡುತ್ತಾ ಬಂದು ಸರ್ಕಾರಿ ಸೇವೆಯನ್ನು ಪಡೆಯಲ ಮುಂದಾದರೆ ಅವರಿಂದ ಬೆವರು ಸುರಿಸಿ ದುಡಿದ ಹಣವನ್ನು ಲಂಚವನ್ನಾಗಿ ಸ್ವೀಕರಿಸಿ ತಾವು ಐಷಾರಾಮಿ ಜೀವನ ಮಾಡುತ್ತಾರೆ. ಸರ್ಕಾರದ ಸಂಬಳಕ್ಕಿಂತ ಭ್ರಷ್ಟಾಚಾರದ ದುಡ್ಡಿನಲ್ಲಿಯೇ ಮನೆಹಾಳ ಕೆಲಸವನ್ನು ಮಾಡುತ್ತಲೇ ಹೋಗುತ್ತಾರೆ. ಹೀಗೆ ಬಡ ಬಗ್ಗರ ರಕ್ತವನ್ನು ಹೀರುವ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು, ಇಡಿ ಅಧಿಕಾರಿಗಳು ದಾಳಿ ಮಾಡಿದಾಗ ಬ್ರಹ್ಮಾಂಡ ಬ್ರಷ್ಟಾಚಾರದ ಅನಾವರಣ ತೆರೆದುಕೊಳ್ಳುತ್ತದೆ.

ಲೋಕಲ್ ಚಪ್ಪಲಿ ಮುಟ್ಟಲ್ಲ, ಬ್ರಾಂಡೆಂಡ್ ಶೂ ಎಲ್ಲೇ ಕಂಡ್ರೂ ಬಿಡೊಲ್ಲ! 7 ವರ್ಷ ಬರೋಬ್ಬರಿ 10 ಸಾವಿರ ಚಪ್ಪಲಿ ಕದ್ದ ಖದೀಮರು!

ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಕಲ್ಯಾಣ್ ನಗರದ ಹೆಚ್ ಅರ್ ಬಿ ಆರ್ ಲೇಔಟ್‌ನಲ್ಲಿದ್ದ ಕಾನೂನು ಮಾಪನ ಇಲಾಖೆ ಡೆಪ್ಯೂಟಿ ಕಂಟ್ರೋಲರ್ ಅತ್ಹರ್ ಅಲಿ‌ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮನೆಯೊಳಗೆ ಹೋಗಿ ಲೋಕಾಯುಕ್ತ ತಂಡದ ಅಧಿಕಾರಗಳು ಪರಿಶೀಲನೆ ಮಾಡುವಾಗ, ಚಿನ್ನ, ಬೆಳ್ಳಿಯನ್ನು ಒಂದು ಬ್ಯಾಗ್‌ ಒಳಗೆ ಹಾಕಿ ಅದನ್ನು ಪಕ್ಕದ ಮನೆಗೆ ಎಸೆದಿದ್ದಾನೆ. ಆದರೆ, ಸರ್ಕಾರಿ ಅಧಿಕಾರಿಯ ಮನೆಯಿಂದ ಪಕ್ಕದ ಮನೆಗೆ ಮೂಟೆ ಎಸೆದ ಬಗ್ಗೆ ಶಬ್ದ ಬರುತ್ತದೆ. ಶಬ್ದ ತೆರಳಿ ಪಕ್ಕದ ಮೆನೆಗೆ ತೆರಳಿದ ಲೋಕಾಯುಕ್ತ ಅಧಿಕಾರಿಗಳು ಏನೆಂದು ಪರಿಶೀಲನೆ ಮಾಡಿದ್ದಾರೆ. 

ಆಗ ಪಕ್ಕದ ಮನೆಗೆ ಹೋದ ಲೋಕಾಯುಕ್ತ ಅಧಿಕಾರಿಗಳಿಗೆ ಒಂದು ಬ್ಯಾಗ್ ಸಿಕ್ಕಿದೆ. ಅದರಲ್ಲಿ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳನ್ನು ಎಸೆದಿರುವುದು ಕಂಡುಬಂದಿದೆ. ಈ ಬಗ್ಗೆ ಅತ್ಹರ್ ಅಲಿ ಮನೆಯಿಂದ ಎಸೆದ ಬ್ಯಾಗ್ ಅನ್ನು ವಶಕ್ಕೆ ಪಡೆದು, ಪುನಃ ಆತನ ಮನೆಗೆ ತಂದು ಸಂಪೂರ್ಣವಾಗಿ ಬ್ಯಾಗ್‌ನಲ್ಲಿದ್ದ ವಸ್ತುಗಳನ್ನು ಹೊರಗೆ ತೆಗೆದು ಪರಿಶೀಲನೆ ಮಾಡಿದ್ದಾರೆ. ಆಗ ಕೋಟ್ಯಂತರ ಮೌಲ್ಯದ ವಜ್ರ ಖಚಿತ ಹಾರಗಳು, ಚಿನ್ನಾಭರಣಗಳು, ಬೆಳ್ಳಿಯ ವಸ್ತುಗಳು, ದುಬಾರು ಬೆಲೆ ಬಾಳುವ ವಾಚ್‌ಗಳು, ಲಕ್ಷಾಂತರ ರೂ. ನಗದು ಹಣವಿರುದು ಕಂಡುಬಂದಿದೆ. 

100 ಗ್ರಾಂ ಚಿನ್ನದ ದರದಲ್ಲಿ 4500 ರೂ ಇಳಿಕೆ: ಹೇಗಿದೆ ನಿಮ್ಮ ನಗರದಲ್ಲಿ ಬೆಳ್ಳಿ ಬಂಗಾರ ದರ

ಪಕ್ಕದ ಮನೆಗೆ ಎಸೆದ ಬ್ಯಾಗ್‌ನಲ್ಲಿದ್ದ ಎಲ್ಲ ಚಿನ್ನಾಭರಣವನ್ನು ತೂಕ ಹಾಕಲು ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿಯನ್ನು ಮನೆಗೆ ಕರೆಸಿಕೊಂಡಿದ್ದಾರೆ. ಎಲ್ಲವನ್ನು ಲೆಕ್ಕ ಹಾಕಿದಾಗ ಬರೋಬ್ಬರಿ 25 ಲಕ್ಷ ರೂ. ನಗದು ಹಣ, 2 ಕೆಜಿ 200 ಗ್ರಾಂ ಚಿನ್ನಾಭರಣ ಹಾಗೂ 2 ಬೆಳ್ಳಿ ವಸ್ತುಗಳು ಪತ್ತೆಯಾಗಿವೆ.

Latest Videos
Follow Us:
Download App:
  • android
  • ios