ಪೊಲೀಸರು ನೊಟೀಸ್ ನೀಡದ ಪತಿಯನ್ನು ಅಪರಿಸಿದ್ದಾರೆ, ಚೇತನ್ ಪತ್ನಿ ಆರೋಪ 2 ವರ್ಷದ ಹಿಂದಿನ ಟ್ವೀಟ್ ರಿಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದ ಚೇತನ್ ಕೇಂದ್ರ ವಿಭಾಗ ಪೊಲೀಸರಿಂದ ಚೇತನ್ ವಿಚಾರಣೆ

ಬೆಂಗಳೂರು(ಫೆ.22): ಪೊಲೀಸರ ಸೂಚನೆ ಮೀರಿ ಹಿಜಾಬ್ ವಿವಾದ ಹಾಗೂ ಕರ್ನಾಟಕ ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾರನ್ನು(Actor chetan ahimsa) ಕೇಂದ್ರ ವಿಭಾಗ ಪೊಲೀಸರು(Police) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಅತ್ಯಾಚಾರ ಪ್ರಕರಣ ಸಂಬಂಧಿಸಿ ಕರ್ನಾಟಕ ಚೀಫ್ ಜಸ್ಟೀಸ್ ಕೃಷ್ಣ ದೀಕ್ಷಿತ್(Chief Justice krishna dixit) ನೀಡಿದ್ದ ತೀರ್ಪಿನ ವಿರುದ್ಧ ಎರಡು ವರ್ಷಗಳ ಹಿಂದೆ ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದರು. ಹಿಜಾಬ್ ವಿವಾದದ (Hijab Row) ಕುರಿತು ಜಸ್ಚೀಸ್ ಕೃಷ್ಣ ದೀಕ್ಷಿತ್ ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಎರಡು ವರ್ಷಗಳ ಹಿಂದಿನ ಟ್ವೀಟ್ ರಿಟ್ವೀಟ್ ಮಾಡಿರುವ ನಟ ಚೇತನ್, ನ್ಯಾಯಾಧೀಶರು ಸ್ತ್ರಿ ವಿರೋಧಿ. ಹೀಗಾಗಿ ಯಾವ ತೀರ್ಪು ನಿರೀಕ್ಷಿಸಬಹುದು ಎಂದು ನಟ ಚೇತನ್ ರಿಟ್ವೀಟ್ ಮಾಡಿದ್ದರು. ನ್ಯಾಯಾಧೀಶರ ಕುರಿತು ಅವಹೇಳನಕಾರಿ ಟ್ವೀಟ್ ಮಾಡಿದ ಕಾರಣಕ್ಕೆ ಪೊಲೀಸರು ಚೇತನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಗಂಜಿ ಆಸೆಗೆ ಹೇಳಿಕೆ ಕೊಡೋರನ್ನು ಬಂಧಿಸಿ : ನಟ ಚೇತನ್ ವಿರುದ್ಧ ಸಚಿವ ಹೆಬ್ಬಾರ್ ಕಿಡಿ

ಹಿಜಾಬ್ ಕುರಿತು ರಾಜ್ಯದ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಇದರ ನಡುವೆ ಹಲವರಿಗೆ ಪ್ರಚೋದನಕಾರಿ ಭಾಷಣ, ಟ್ವೀಟ್ ಮಾಡದಂತೆ ಪೊಲೀಸರು ತಾಕೀತು ಮಾಡಿದ್ದಾರೆ. ಆದರೆ ಪೊಲೀಸರ ಸೂಚನೆ ಮೀರಿ ಚೇತನ್ ಅಹಿಂಸಾ ರಿಟ್ವೀಟ್ ಮಾಡಿದ್ದಾರೆ. ಹೀಗಾಗಿ ಪೊಲೀಸರು ಚೇತನ್ ಅಹಿಂಸಾರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಇತ್ತ ಚೇತನ್ ವಶಕ್ಕೆ ಪಡೆದಿರುವ ಪೊಲೀಸರ ವಿರುದ್ಧ ಪತ್ನಿ ಮೇಘಾ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ಯಾವುದೆ ನೊಟೀಸ್ ನೀಡದ ಪತಿಯನ್ನು ಅಪಹರಿಸಿದ್ದಾರೆ. ಪತಿಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಸಿಬ್ಬಂದಿ ಹೇಳಿದ್ದಾರೆ. ನನ್ನ ಪತಿಯನ್ನು ಪೊಲೀಸರು ಅಪಹರಿಸಿದ್ದಾರೆ. ಪತಿ ಕಾಣದಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಮೇಘಾ ಹೇಳಿದ್ದಾರೆ.

ರಕ್ಷಿತ್ ಶೆಟ್ಟಿ VS ಚೇತನ್ ಅಹಿಂಸಾ, ಅಷ್ಟಕ್ಕೂ 'ಕೆಟ್ಟ' ಕಮೆಂಟ್ ಹುಟ್ಟಿದ್ದು ಎಲ್ಲಿ?

ಘಟನ ವಿವರ:
ಕರ್ನಾಟಕದ ಕರಾವಳಿಯಿಂದ ಆರಂಭಗೊಂಡ ಹಿಜಾಬ್ ವಿವಾದ ಇಡೀ ದೇಶವನ್ನೇ ವ್ಯಾಪಿಸಿದೆ. ಹಿಜಾಬ್ ಪರ ಹೋರಾಟ ಮಾಡುತ್ತಿರುವ ನಟ ಚೇತನ್, ಕರ್ನಾಟಕ ಹೈಕೋರ್ಟ್‌ನಿಂದ ನ್ಯಾಯಸಮ್ಮತ ತೀರ್ಪು ನಿರೀಕ್ಷಿಸಲು ಸಾಧ್ಯವೇ ಅನ್ನೋದನ್ನೂ ಸೂಚ್ಯವಾಗಿ ಟ್ವೀಟ್ ಮೂಲಕ ಹೇಳಿದ್ದರು. ಎರಡು ವರ್ಷಗಳ ಹಿಂದೆ ಜಡ್ಜ್ ಕೃಷ್ಣ ದೀಕ್ಷಿತ್, ಅತ್ಯಾಚಾರ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದರು. ಇದೇ ವೇಳೆ ಜಾಮೀನು ಮಂಜೂರು ಮಾಡಲು ಕಾರಣಗಳನ್ನು ನೀಡಿದ್ದರು. ಇದರ ವಿರುದ್ಧ ಆಕ್ರೋಶಗೊಂಡಿದ್ದ ಚೇತನ್ ಟ್ವೀಟ್ ಮೂಲಕ ರೋಷ ಹೊರಹಾಕಿದ್ದರು. ಅಂದು ಸ್ತ್ರಿ ವಿರೋಧಿಯಾಗಿ ನಡೆದುಕೊಂಡಿದ್ದ ಕೃಷ್ಣ ದೀಕ್ಷಿತ್ ಇದೀಗ ಹಿಜಾಬ್ ಬೇಕೆ ಬೇಡವೇ ಅನ್ನೋ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ರೇಪ್ ಕೇಸ್ ಕುರಿತು ಯಾರೂ ಒಪ್ಪಿಕೊಳ್ಳದ ಹೇಳಿಕೆ ನೀಡಿದ್ದರು. ಹೀಗಾಗಿ ಇದಕ್ಕಿಂತ ಹೆಚ್ಚಿನ ಸ್ಪಷ್ಟತೆ ಬೇಕೆ ಎಂದು ಚೇತನ್ ಹಿಂದಿನ ಟ್ವೀಟ್ ರಿಪೋಸ್ಟ್ ಮಾಡಿದ್ದರು. 

ಫೆಬ್ರವರಿ 16 ರಂದು ಚೇತನ್ ನ್ಯಾಯಾಧೀಶರನ್ನು ಅವಹೇಳನಕಾರಿಯಾಗಿ ಚಿತ್ರಿಸುವ ಟ್ವೀಟ್ ಮಾಡಿದ್ದಾರೆ. ಆದರೆ ಫೆಬ್ರವರಿ 12 ರಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಹಿಜಾಬ್ ವಿಚಾರಣೆ ನಡೆಯುತ್ತಿರುವುದರಿಂದ ಯಾರೂ ಕೂಡ ಪ್ರಚೋದನಕಾರಿ ಹೇಳಿಕೆ, ಟ್ವೀಟ್, ಬರಹ ಪೋಸ್ಟ್ ಮಾಡಬಾರದು ಎಂದಿದ್ದರು. ಈ ಸೂಚನೆ ಬಳಿಕ ಚೇತನ್ ರಿಟ್ವೀಟ್ ಮಾಡಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದರು.

ನನ್ನ ಪತಿ ಹೊರಗೆ ಹೋದವರು ಮರಳಿ ಮನೆಗೆ ಬಂದಿಲ್ಲ. ಅವರ ಫೋನ್ ಸ್ವಿಚ್ ಆಫ್ ಆಗಿದೆ. ಪೊಲೀಸರನ್ನು ಕೇಳಿದರೆ ಗೊತ್ತಿಲ್ಲ ಎಂದಿದ್ದಾರೆ. ಸಿಬ್ಬಂದಿಗೆ ಕರೆ ಮಾಡಿದಾಗ ಪೊಲೀಸರು ಬಂದು ಚೇತನ್ ಅವರನ್ನು ಕರೆದುಕೊಂಡುಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಪೊಲೀಸರು ಯಾವುದೇ ನೊಟೀಸ್ ನೀಡದೆ ಪತಿಯನ್ನು ಕರೆದುಕೊಂಡು ಹೋಗಿದ್ದಾರೆ. ಪೊಲೀಸರೇ ನನ್ನ ಪತಿಯನ್ನು ಅಪಹರಿಸಿದ್ದಾರೆ.ಚೇತನ್ ಅವರ ಗನ್‌ಮ್ಯಾನ್ ಕೂಡ ಕಾಣೆಯಾಗಿದ್ದಾರೆ. ನಾನು ಪತಿ ಮಿಸ್ಸಿಂಗ್ ಕುರಿತು ದೂರು ದಾಖಲಿಸುತ್ತೇನೆ ಎಂದು ಚೇತನ್ ಪತ್ನಿ ಮೇಘಾ ಪೊಲೀಸರ ವಿರದ್ಧವೇ ಗಂಭೀರ ಆರೋಪ ಮಾಡಿದ್ದಾರೆ.