Karnataka crime; ದುಷ್ಕರ್ಮಿಗಳಿಂದ ಬಸವಣ್ಣನ ವಿಗ್ರಹದ ಕಳವಿಗೆ ಯತ್ನ

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕಾಡುಗೊಲ್ಲರ ಆರಾಧ್ಯ ದೈವ ಕಳುವರಹಳ್ಳಿ ಜುಂಜಪ್ಪನ ಕ್ಷೇತ್ರದಲ್ಲಿರುವ ಬಸವನ ವಿಗ್ರಹವನ್ನು ಕದಿಯಲು ಯತ್ನಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

Karnataka crime today Miscreants attempt to steal Basavanna statue rav

ಶಿರಾ (ಜೂ.16): ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕಾಡುಗೊಲ್ಲರ ಆರಾಧ್ಯ ದೈವ ಕಳುವರಹಳ್ಳಿ ಜುಂಜಪ್ಪನ ಕ್ಷೇತ್ರದಲ್ಲಿರುವ ಬಸವನ ವಿಗ್ರಹವನ್ನು ಕದಿಯಲು ಯತ್ನಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ದುಷ್ಕರ್ಮಿಗಳು ಜುಂಜಪ್ಪನ ಗುಡ್ಡೆ(Junjappanagudde)ಯ ದೇವರ ಮೂರ್ತಿಯ ಮುಂಭಾಗದಲ್ಲಿದ್ದ ಬಸವಣ್ಣನ ವಿಗ್ರಹದ ಸುತ್ತಲೂ ಅಗೆದಿದ್ದು, ಅಗೆಯುವ ಸಂದರ್ಭದಲ್ಲಿ ಹಾವು ಕಾಣಿಸಿಕೊಂಡಿದೆ. ನಂತರ ಹಾವನ್ನು ಸಹ ಸಾಯಿಸಿ ಕಳ್ಳತನಕ್ಕೆ ತಂದಿದ್ದ ಸಲಕರಣೆಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

 

ಕಲಬುರಗಿಯಲ್ಲಿ ಮನೆ​ಗ​ಳ್ಳನ ಬಂಧ​ನ: ಚಿನ್ನಾ​ಭ​ರಣ ಜಪ್ತಿ

ಹಾತೂರು: ಎರಡು ಮನೆಗಳಲ್ಲಿ ನಗ- ನಗದು ಕಳವು

ಗೋಣಿಕೊಪ್ಪ : ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮದಲ್ಲಿ ಜೂನ್‌ 12ರಂದು ಸರಣಿ ಕಳ್ಳತನವಾಗಿದೆ. ಎರಡು ಮನೆಗಳ ಮೇಲ್ಛಾವಣಿಯ ಹೆಂಚು ತೆಗೆದು ನಗದು ಹಾಗೂ ಚಿನ್ನಾಭರಣ ಕಳುವಾಗಿದೆ. ಗ್ರಾಮದ ನವೀನ್‌ ಎಂಬವರ ಮನೆಯಿಂದ 1,02,500 ರುಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಕಳ್ಳರು, ಹಾತೂರು ನಿವಾಸಿ ಗಣೇಶ್‌ ಎಂಬವರ ಮನೆಯಲ್ಲೂ ಕಳ್ಳತನವಾಗಿದ್ದು, ಬೀರುವಿನಲ್ಲಿದ್ದ 30,000 ರು. ನಗದು ದೋಚಿದ್ದಾರೆ. ಎರಡು ಪ್ರತ್ಯೇಕ ಪ್ರಕರಣ ಸಂಬಂಧ ಗೋಣಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಮನೆ ಬಾಗಿಲು ಮುರಿದು ಕಳ್ಳತನ

ಗುಂಡ್ಲುಪೇಟೆ: ಮನೆಯ ಬಾಗಿಲು ಮುರಿದು 40 ಗ್ರಾಂ ನಷ್ಟುಚಿನ್ನಾಭರಣ ಕಳ್ಳತನ ಪಟ್ಟಣದ ಜನತಾ ಕಾಲೋನಿಯಲ್ಲಿ ಬೆಳಕಿಗೆ ಬಂದಿದೆ. ಜನತಾ ಕಾಲೋನಿಯ ನಿವಾಸಿ, ಖಾಸಗಿ ಕಂಪನಿಯ ನೌಕರ ಗಣೇಶ್‌ಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಣೇಶ್‌ ತಾಯಿಗೆ ಹುಷಾರಿಲ್ಲದ ಕಾರಣ ಕಳೆದ ಮೂರು ದಿನಗಳ ಹಿಂದೆ ಮೈಸೂರು ಆಸ್ಪತ್ರೆಗೆ ಗಣೇಶ್‌ ದಾಖಲು ಮಾಡಿದ್ದರು. ಗುರುವಾರ ಬೆಳಗ್ಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಪತ್ತೆಯಾಗಿದೆ. ಕಳ್ಳತನವಾದ ಮನೆಗೆ ಶ್ವಾನ ದಳ ಬಂದಿತ್ತು. ಸ್ಥಳೀಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮಹಜರು ನಡೆಸಿದ್ದಾರೆ. ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಪೊಲೀಸರು ಬೆನ್ನುಹತ್ತಿದ್ದು ಒಂದು, ಸಿಕ್ಕಿದ್ದು ಮೂರು! ಶಿರಾಳಕೊಪ್ಪದ ಖತರ್ನಾಕ್ ಕಳ್ಳ ಅರೆಸ್ಟ್!

Latest Videos
Follow Us:
Download App:
  • android
  • ios