ಬೆಂಗಳೂರು(ಫೆ. 25)  ಹಿರಿಯ ನಿರೂಪಕ ಗಜಾನನ ಹೆಗಡೆ(52) ಸಾವನ್ನಪ್ಪಿದ್ದು ಇಡೀ ಮಾಧ್ಯಮ ಲೋಕ ಕಂಬನಿ ಮಿಡಿದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಈ ಟಿವಿ ನ್ಯೂಸ್ ಮೂಲಕ ಮಾಧ್ಯಮ ರಂಗಕ್ಕೆ ಕಾಲಿಟ್ಟವರು ಕಸ್ತೂರಿ ಮತ್ತು ಪ್ರಜಾ ಟಿವಿಯಲ್ಲಿ ಕೆಲಸ ಮಾಡಿದ್ದರು. ಬಹುಮುಖ ಪ್ರತಿಭೆ ಗಜಾನನ ಹೆಗಡೆ ಅನೇಕ ಜನರನ್ನು ತಮ್ಮ ಗರಡಿಯಲ್ಲಿ ಬೆಳೆಸಿದ್ದರು.

ನೀರಲ್ಲಿ ಮುಳುಗಿ ಯುವ ಪತ್ರಕರ್ತ ಸಾವು

ರವೀಂದ್ರ ಕಲಾಕ್ಷೇತ್ರದಿಂದ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಹೆಗಡೆ ರಸ್ತೆಯಲ್ಲೇ ಕುಸಿದು ಬಿದ್ದಿದ್ದರು. ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೆಗಡೆ ಮಾಧ್ಯಮ ಲೋಕ ಅಗಲಿದ್ದಾರೆ.

ಕಳೆದ ಒಂದು ವರ್ಷದಿಂದ ಮಾಧ್ಯಮ ಕ್ಷೇತ್ರದಿಂದ ದೂರವಾಗಿ ಸಂಗೀತ ಮತ್ತು ನಾಟಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹೆಗಡೆ ನಿಧನಕ್ಕೆ ಮಾಧ್ಯಮ ಲೋಕದ ಗಣ್ಯರು ಸೇರಿದಂತೆ ಅನೇಕ ವಾಹಿನಿಗಳು ಕಂಬನಿ ಮಿಡಿದಿವೆ.