ಬೆಂಗಳೂರು, (ಮಾ.06): ವಿದೇಶಿ ಮಹಿಳೆಯ ಅಶ್ಲೀಲ್ ಫೋಟೋ ಕ್ಲಿಕ್ಕಿಸಿಕೊಂಡು ಬ್ಲ್ಯಾಕ್ ಮೇಲ್  ಮಾಡುತ್ತಿದ್ದ  ಅಂತಾರಾಷ್ಟ್ರೀಯ ಸಿನಿಮಾ ವಿತರಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

33 ವರ್ಷದ ರೂಪೇಶ್ ಅನ್ನು ನಂದಿನಿ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತ‌ ರೂಪೇಶ್, ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಸಿನಿಮಾ ವಿತರಣೆ ಮಾಡುತ್ತಾನೆ ಎಂದು ತಿಳಿದು ಬಂದಿದೆ.

ತಂಗಿ ಎನ್ನುತ್ತಿದ್ದಾತನೇ ರೇಪ್‌ಗೆ ಮುಂದಾದ, ವಿರೋಧಿಸಿದಾಗ ಕತ್ತು ಕೊಯ್ದ!

ಆರೋಪಿ ಇತ್ತೀಚೆಗೆ ತನ್ನ ಕೆಲಸ ನಿಮಿತ್ತ ಆಸ್ಟ್ರೇಲಿಯಾಕ್ಕೆ ತೆರಳಿದ್ದ. ಆ ವೇಳೆ ಅಲ್ಲಿ ಮಹಿಳೆಯೊಬ್ಬರ ಪರಿಚಯವಾಗಿದ್ದು, ತನ್ನ ಬಣ್ಣದ ಮಾತುಗಳಿಂದ ಆಕೆಯನ್ನ ಬುಟ್ಟಿಗೆ ಹಾಕಿಕೊಂಡು ಆತ್ಮೀಯವಾಗಿ ನಡೆದುಕೊಂಡಿದ್ದಾನೆ.

ಇದನ್ನ ನಂಬಿದ್ದ ಮಹಿಳೆ  ರೂಪೇಶ್ ಜತೆ ಸುತ್ತಾಡಿದ್ದಾಳೆ. ಇದೆ ಸಿಕ್ಕಿದ್ದೇ ಚಾನ್ಸ್ ಎಂದು  ಆಕೆಗೆ  ಜ್ಯೂಸ್​ನಲ್ಲಿ ಮತ್ತು ಬರುವ ಔಷಧಿ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಆಕೆ ಜೊತೆಗಿನ ಖಾಸಗಿ ಫೋಟೋ  ಕ್ಲಿಕ್ಕಿಸಿಕೊಂಡಿದ್ದಾನೆ.

ಗೆಳೆಯನ ಮಂಚಕ್ಕೆ ದೂಡಿದ ಪತಿ, ಗೃಹಿಣಿ ಆತ್ಮಹತ್ಯೆ

ಇದಾದ ಬಳಿಕ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಅಷ್ಟೇ ಅಲ್ಲದೇ ತನ್ನೊಂದಿಗೆ ಅಕ್ರಮ ಸಂಬಂಧಕ್ಕೆ ಒಪ್ಪಿಕೋ ಎಂದು ಪೀಡಿಸಿದ್ದಾನೆ. ಆದ್ರೆ, ಇದಕ್ಕೆ ಮಹಿಳೆ ನಿರಾಕರಿಸಿದಾಗ ಫೋಟೋಗಳನ್ನ ವೈರಲ್ ಮಾಡುವುದಾಗಿ ಬ್ಯ್ಲಾಕ್ ಮೇಲ್ ಮಾಡಿದ್ದಾನೆ. ಇದನ್ನ ಆಕೆ ತನ್ನ ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ಹೀಗಾಗಿ ನೊಂದ ಮಹಿಳೆ ಭಾರತಕ್ಕೆ ವಾಪಸ್ಸಾಗಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ದೂರಿನ ಮೇರೆಗೆ ಆರೋಪಿ ರೂಪೇಶ್‌ನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.