ಹರಿಯಾಣ (ಜೂ. 14)  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಕಳ್ಳರು ದೊಡ್ಡ ಶಾಕ್ ಕೊಟ್ಟಿದ್ದಾರೆ. 14  ಲಕ್ಷ ರೂ. ತುಂಬಿದ್ದ ಎಟಿಎಂ ಯಂತ್ರವನ್ನು ಹೊತ್ತೊಯ್ದಿದ್ದಾರೆ.

ಶನಿವಾರ ಕಳ್ಳರು ಎಟಿಎಂ ಯಂತ್ರ ಕದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರ ಮುಂಜಾವಿನ ಒಳಗೆ ಈ ಕಳ್ಳತನ ನಡೆದಿದೆ. 
ಇದು ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಯದಿಂದ ಆಗಿದೆ ಎಂದು ಹೇಳಲಾಗಿದೆ. 

ಎಟಿಎಂಗಳಲ್ಲಿಯೂ ಸಾನಿಟೈಸರ್ ಇರುತ್ತಾ?

ಹರಿಯಾಣದಲ್ಲಿ ಎಟಿಎಂ ಯಂತ್ರ ಹೊತ್ತುಕೊಂಡು ಹೋಗಿದ್ದರೆ ಬಿಹಾರದ ಸಿವಾನ್ ನಲ್ಲಿ ಶಸ್ತ್ರಧಾರಿ ಕಳ್ಳರು ಎಟಿಎಂ ದೋಚುವ ಯತ್ನ ಮಾಡಿದ್ದು ಪೊಲೀಸರು ತಡೆದಿದ್ದಾರೆ.

ರಾತ್ರಿ 1.30 ರ ವೇಳೆ ಕಳ್ಳರು ದಾಳಿ ಮಾಡಿದ್ದರು. ಆದರೆ ಪೊಲೀಸರು ಗುಂಡಿನ ದಾಳಿ ಮಾಡಿದಾಗ ಕಳ್ಳರು ಎಸ್ಕೇಪ್ ಆಗಿದ್ದಾರೆ.  ಲಾಕ್ ಡೌನ್ ಕಾರಣಕ್ಕೆ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ಇಡೀ ದೇಶಾದ್ಯಂತ ಪೊಲೀಸ್ ಇಲಾಖೆಗೆ ಹೊಸ ಸವಾಲು ತಂದಿಟ್ಟಿದೆ.