ಮುಂಬೈ(ಅ. 26) ಮಕ್ಕಳ ಪೋರ್ನ್ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಬಿಐ ಪತ್ತೆ ಮಾಡಿದ್ದು ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ವಿದೇಶದ ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡಿದ್ದ.

ಅಮೆರಿಕದ ಮಕ್ಕಳು ಈತನ ಮಾರುಕಟ್ಟೆಯಾಗಿದ್ದರು. ದಂಧೆ ನಡೆಸಲು ಸುಮಾರು  1,000 ಜನರನ್ನು ಸಂಪರ್ಕಿಸಿದ್ದ ಎಂಬ ಮಾಹಿತಿಯೂ ಬಹಿರಂಗವಾಗಿದೆ.

ಪೋರ್ನ್ ಸೈಟಿನಿಂದ ವಿಡಿಯೋ ತೆಗೆಯಲು ಆರು ವರ್ಷದಿಂದ ಹೋರಾಟ ಮಾಡ್ತಿದ್ದಾಳೆ ನಟಿ!

ಸೋಶಿಯಲ್ ಮೀಡಿಯಾ ಡೇಟಿಂಗ್‌  ಆಪ್ ಬಳಕೆ ಮಾಡಿಕೊಂಡು ಮಕ್ಕಳನ್ನು ಸಂಪರ್ಕ ಮಾಡುತ್ತಿದ್ದ. ಅಲ್ಲಿ ಸಂದೇಶ ಕಳುಹಿಸಿ ವಿಡಿಯೋ ಕಾಲ್  ಮಾಡುತ್ತಿದ್ದ. ಅಲ್ಲದೇ ಅಶ್ಲೀಲ ಭಂಗಿಯಲ್ಲಿ ಪೋಸ್ ನೀಡಲು ಕೇಳುತ್ತಿದ್ದ. ಮಕ್ಕಳು ಒಪ್ಪದಿದ್ದರೆ ನಿಮ್ಮ ಪೋಟೋ ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ.

ಆರೋಪಿಯ ಮುಂಬೈ ಮನೆ ಮೇಲೆ ದಾಳಿ ಮಾಡಿ ಲ್ಯಾಪ್ ಟಾಪ್ ಸೇರಿದಂತೆ ಅನೇಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.  ಫೊರೆನ್ಸಿಕ್ ಲ್ಯಾಬ್ ಗೆ ವಸ್ತುಗಳನ್ನು ಕಳುಹಿಸಿಕೊಡಲಾಗಿದ್ದು ಆರೋಪಿಯನ್ನು ಬಂಧಿಸಿ ಇದರ ಹಿಂದಿನ ಜಾಲ ಪತ್ತೆ ಮಾಡಲಾಗುತ್ತಿದೆ.