Asianet Suvarna News Asianet Suvarna News

ಮನೆ ಮುಂದಿನ ಚರಂಡಿ ವಿಚಾರಕ್ಕೆ ಪುರಸಭೆ ಸದಸ್ಯನನ್ನೇ ಮಚ್ಚಿನಿಂದ ಕೊಚ್ಚಿ ಹಾಕಿದ ಯುವಕ

ಮನೆಯ ಮುಂದಿನ ವಿಚಾರಕ್ಕೆ ಪುರಸಭೆ ಸದಸ್ಯನೊಂದಿಗೆ ಜಗಳ ಮಾಡಿಕೊಂಡು, ಮಚ್ಚಿನಿಂದ ಕೊಚ್ಚಿ ಹಾಕಿರುವ ದುರ್ಘಟನೆ ತೋರಣಗಲ್ಲಿನಲ್ಲಿ ನಡೆದಿದೆ.

JSW Located Toranagallu municipal councilor was attacked from young man for sewage issue sat
Author
First Published Nov 13, 2023, 5:41 PM IST

ಬಳ್ಳಾರಿ (ನ.13): ಒಬ್ಬ ಜನಪ್ರತಿನಿಧಿಯಾದವನ್ನು ತನ್ನ ವ್ಯಾಪ್ತಿಯ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಆತನಿಗೆ ಮುಂದಿನ ಬಾರಿ ಮತ ಹಾಕದೇ ಸೊಲಿಸುತ್ತಾರೆ. ಆದರೆ, ಇಲ್ಲೊಬ್ಬ ಯುವಕ ಮನೆಯ ಮುಂದಿನ ವಿಚಾರಕ್ಕೆ ಪುರಸಭೆ ಸದಸ್ಯನೊಂದಿಗೆ ಜಗಳ ಮಾಡಿಕೊಂಡು, ಆತನನ್ನು ಮಚ್ಚಿನಿಂದ ಕೊಚ್ಚಿ ಹಾಕಿರುವ ದುರ್ಘಟನೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ನಡೆದಿದೆ.

ದೇಶದ ಪ್ರಸಿದ್ಧ ಉಕ್ಕಿನ ಕಾರ್ಖಾನೆಗಳಲ್ಲಿ ಒಂದಾಗಿರುವ ಜಿಂದಾಲ್‌ ಸ್ಟೀಲ್‌ ವರ್ಕ್ಸ್‌ ಲಿ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿದೆ. ಇಂತಹ ಕೈಗಾರಿಕಾ ನಗರಿ ತೋರಣಗಲ್ಲಿನ ಪುರಸಭೆಯ ಸದಸ್ಯನ್ನು ಹಾಡಹಗಲೇ ಮನೆಯವರ ಮುಂದೆ ಕೊಚ್ಚಿ ಹಾಕಿದ ಘಟನೆ ನಡೆದಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಖರೀದಿಸಿ ತಂದು ಮನೆಯಲ್ಲಿ ಹಬ್ಬ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ತೋರಣಗಲ್ಲು ಪುರಸಭೆ ಸದಸ್ಯ ನಾಗರಾಜ ನಾಯಕ್ (32) ಹಲ್ಲೆಗೀಡಾದ ವ್ಯಕ್ತಿಯಾಗಿದ್ದಾನೆ. 

ಮಂಗನ ದಾಳಿಗೆ ಬಲಿಯಾದ ವ್ಯಕ್ತಿ: ಕೈ ರಕ್ತನಾಳವನ್ನೇ ಕಚ್ಚಿತಾ ಕೋತಿ!

ತೋರಣಗಲ್ಲು ಪಟ್ಟಣದ ರೈಲು ನಿಲ್ದಾಣ ಬಳಿಯ 11 ನೇ ವಾರ್ಡ್‌ ಘೋರ್ಪಡೆ ನಗರದಲ್ಲಿ ಘಟನೆ ನಡೆದಿದೆ.  ಘೋರ್ಪಡೆ ನಗರದ ಎಚ್‌ಎಲ್‌ಸಿ ಕಾಲುವೆ ಬಳಿ ಮಚ್ಚಿನಿಂದ ಪುರಸಭೆ ಸದಸ್ಯನ ಮೇಲೆ ಹಲ್ಲೆ ಮಾಡಲಾಗಿದೆ. ಪುರಸಭೆ ಸದಸ್ಯ ನಾಗರಾಜ ನಾಯ್ಕ ಮೇಲೆ ಶಿವಕುಮಾರ್‌ ಎಂಬ ಯುವಕ ಹಲ್ಲೆ ಮಾಡಿದ್ದಾನೆ. ಮಚ್ಚಿನಿಂದ ತೆಲೆ, ಬೆನ್ನು ಹಾಗೂ ಕೈಗಳಿಗೆ ಕೊಚ್ಚಿ ಹಾಕಲಾಗಿದೆ. ಇನ್ನು ಘಟನೆಯ ಕಾರಣದ ಬಗ್ಗೆ ಮಾಹಿತಿ ನೀಡಿದ ಸ್ಥಳೀಯರು ಕಳೆದ ಒಂದು ವರ್ಷದಿಂದ ಮನೆ ಮುಂದೆ ಇರುವ ಚರಂಡಿ ವಿಚಾರವಾಗಿ ಪರಸ್ಪರ ಗಲಾಟೆ ಮಾಡಿಕೊಂಡು ಬರುತ್ತಿದ್ದಾರೆ. ಶಿವಕುಮಾರ್ ಮತ್ತು ನಾಗರಾಜ ನಾಯಕ್ ನಡುವೆ ಇಂದು ಬೆಳಗ್ಗೆ ಮಾತಿಗೆ ಮಾತು ಬೆಳೆದು ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಇನ್ನು ಗಾಯಾಳು ನಾಗರಾಜನಾಯಕನನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಕುರಿತಂತೆ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಾಳಿಯ ಭೀಕರ ದೃಶ್ಯವನ್ನು ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ: ಪುರಸಭಾ ಸದಸ್ಯ ನಾಗರಾಜ್ ನಾಯಕ್ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಜೊತೆಗಿದ್ದ ಸ್ನೇಹಿತ ರಫೀಕ್ ಹಲ್ಲೆಯ ಭೀಕರತೆ ಬಗ್ಗೆ ಮಾಹಿತಿ ನೀಡಿದ್ದಾರೆ. ದೀಪಾವಳಿ ಹಬ್ಬಕ್ಕೆಂದು ಬಟ್ಟೆ ತೆಗೆದುಕೊಂಡು ಮನೆಗೆ ಹೋಗುತ್ತಿದ್ದೆವು. ಬೈಕ್ ಮೇಲೆ  ಹೋಗುತ್ತಿದ್ದಾಗ ಆರೋಪಿ ಶಿವಕುಮಾರ್ ಬೈಕ್ ಅಡ್ಡಗಟ್ಟಿದ್ದಾನೆ. ಯಾಕೆ ಅಡ್ಡಗಟ್ಟಿದೆ ಎಂದು ಕೇಳಿದ ಕುಡಲೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾ ಹತ್ತಿರಕ್ಕೆ ಬಂದ ಶಿವಕುಮಾರ್‌ ಬೈಕ್‌ ಓಡಿಸುತ್ತಿದ್ದ ನಾಗರಾಜ್ ಮೇಲೆ ಹಲ್ಲೆ ಮಾಡಿದ್ದಾನೆ. ಇನ್ನು ಗ್ರಾಮಸ್ಥರೆಲ್ಲರೂ ಬಮದು ಕೂಗುತ್ತಾ ಹಲ್ಲೆ ಮಾಡುವುದನ್ನು ಬಿಡಿಸಲು ಮುಂದಾದರೂ, ಅವರ ಮೇಲೆ ಮಚ್ಚು ಬೀಸುತ್ತಾ ಪುರಸಭೆ ಸದಸ್ಯ ನಾಗರಾಜನ ಮೇಲೆ ಮನಸೋ ಇಚ್ಛೆ ಮಚ್ಚಿನಿಂದ ದಾಳಿ ಮಾಡಿದನು.

ಹೋಂಸ್ಟೇನಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯನ್ನು ಕೋಣೆಯೊಳಗೆ ಎಳೆದೊಯ್ದು ಗ್ಯಾಂಗ್‌ ರೇಪ್‌: ವಿಡಿಯೋ ವೈರಲ್‌

ಹಲ್ಲೆ ತಡೆಯಲು ಬಂದವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿ: ಹರಿತವಾದ ಆಯುಧ ಮಚ್ಚನ್ನು ಹಿಡಿದು ಬೇಕಾಬಿಟ್ಟು ಬೀಸುತ್ತಿದ್ದರಿಂದ ನಾಗರಾಜ ನಾಯಕನ ಮೇಲೆ ದಾಳಿ ನಡೆಯುತ್ತಿದ್ದರೂ ಅದನ್ನು ತಡೆಯಲು ಗ್ರಾಮಸ್ಥರಿಂದ ಆಗಲಿಲ್ಲ. ಇನ್ನು ಹಲ್ಲೆಗೆ ಕಾರಣ ನಾಗರಾಜ್ ಕುಟುಂಬಕ್ಕೆ ಹಾಗೂ ಶಿವಕುಮಾರ್ ಕುಟುಂಬಕ್ಕೆ ಹಳೆಯ ದ್ವೇಷ ಇತ್ತು. ಹೀಗಾಗಿ, ನಿನ್ನೆ ರಾತ್ರಿಯೂ ನಾಗರಾಜ್ ಜೊತೆಗೆ ಶಿವು ಜಗಳವಾಡಿದ್ದರು. ಈಗ ಬೆಳಗ್ಗೆ ಏಕಾಏಕಿ ಬಂದು ಹಬ್ಬದ ಸಂಭ್ರಮದಲ್ಲಿದ್ದ ಪುರಸಭೆ ಸದಸ್ಯನ ಮೇಲೆ ದಾಳಿ ಮಾಡಿದ್ದಾನೆ ಎಂದು ದಾಳಿಗೊಳಗಾದ ಪುರಸಭೆ ಸದಸ್ಯನ ಸ್ನೇಹಿತ ರಫೀಕ್ ಹೇಳಿದ್ದಾರೆ.

Follow Us:
Download App:
  • android
  • ios