ಬಿಜೆಪಿ ಸೇರಿಕೊಳ್ಳಲಿದ್ದ ಜೆಡಿಎಸ್ ನಾಯಕನ ಬರ್ಬರ ಹತ್ಯೆ, ಕಲ್ಲಿನಿಂದ ಗುಪ್ತಾಂಗಕ್ಕೆ ಹೊಡೆದು ಕೊಲೆ!
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ, ರಾಜಕೀಯ ವಾಕ್ಸಮರ, ಆರೋಪ ಪ್ರತ್ಯಾರೋಪ ಹೆಚ್ಚಾಗಿದೆ. ಇದರ ನಡುವೆ ಭೀಕರ ಹತ್ಯೆಯೊಂದು ನಡೆದಿದೆ. ಸದ್ಯದಲ್ಲಿ ಬಿಜೆಪಿ ಸೇರ್ಪಡೆಗೆ ಸಜ್ಜಾಗಿದ್ದ ಕಲಬುರಗಿ ಜೆಡಿಎಸ್ ನಾಯಕ ಭೀಕರವಾಗಿ ಹತ್ಯೆಯಾಗಿದ್ದಾರೆ.
ಕಲಬುರಗಿ(ನ.16): ವಿಧಾನಸಭಾ ಚುನಾವಣೆಗೆ ಕರ್ನಾಟಕದಲ್ಲಿ ಭಾರಿ ತಯಾರಿಗಳು ನಡೆಯುತ್ತಿದೆ. ರಾಜಕೀಯ ನಾಯಕರ ಪಕ್ಷಾಂತರ ಪರ್ವ ಕೂಡ ಹೆಚ್ಚಾಗಿದೆ. ಹೀಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿಕೊಳ್ಳಲು ಸಜ್ಜಾಗಿದ್ದ ಕಲಬುರಗಿ ನಾಯಕ ಮಲ್ಲಿಕಾರ್ಜುನ ಮುತ್ಯಾಲ ಭೀಕರವಾಗಿ ಹತ್ಯೆಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಕೋಲಿ ಕಬ್ಬಲಿಗ ಸಮಾಜದ ತಾಲೂಕು ಘಟಕದ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಮುತ್ಯಾಲ (65) ಅವರನ್ನು ಮಂಗಳವಾರ ಬೆಳಗ್ಗೆ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದಾರೆ. ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಅವರದು ವಿಷ್ಣು ಎಲೆಕ್ಟ್ರಾನಿಕ್ಸ್ ಅಂಗಡಿ ಇದ್ದು, ನಿತ್ಯವೂ ರಾತ್ರಿ ಅಂಗಡಿಯಲ್ಲಿ ಮಲಗುತ್ತಿದ್ದರು. ಕಲ್ಲಿನಿಂದ ಗುಪ್ತಾಂಗಕ್ಕೆ ಹೊಡೆದು ಅವರ ಕೊಲೆ ಮಾಡಲಾಗಿದೆ. ಜೊತೆಗೆ ಕುತ್ತಿಗೆಗೆ ನೇಣು ಸಹ ಬಿಗಿಯಲಾಗಿದೆ ಎಂದು ತಿಳಿದುಬಂದಿದೆ.
ಕೊಲೆಯಾದ ಮಲ್ಲಿಕಾರ್ಜುನ ಜೆಡಿಎಸ್ ಪಕ್ಷದಲ್ಲಿದ್ದರು, ಸದ್ಯದಲ್ಲೇ ಬಿಜೆಪಿಗೆ ಸೇರ್ಪಡೆಗೆ ತಯಾರಿ ಮಾಡಿದ್ದರು. ಕಲಬುರಗಿ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಮಲ್ಲಿಕಾರ್ಜುನ ಮುತ್ಯಾಲ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಬಿಜೆಪಿ ಸಮಾವೇಶದಲ್ಲಿ ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಲು ನಿರ್ಧರಿಸಲಾಗಿತ್ತು. ಇದರ ಬೆನ್ನಲ್ಲೇ ಮಲ್ಲಿಕಾರ್ಜುನ ಮುತ್ಯಾಲ ಭೀಕರವಾಗಿ ಹತ್ಯೆಯಾಗಿದ್ದಾರೆ. ಆದರೆ ಈ ಕೊಲೆಗೆ ಯಾವುದೇ ಕಾರಣ ಬಹಿರಂಗವಾಗಿಲ್ಲ.
18 ವರ್ಷದ ಬಳಿಕ ಕೊಲೆ ಆರೋಪಿ ಅರೆಸ್ಟ್, ತಂತ್ರಜ್ಞಾನ ಮೂಲಕ ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸ್!
ವಿಷ್ಣು ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಮುತ್ಯಾಲ ಅವರನ್ನು ಭೀಕರವಾಗಿ ಹತ್ಯೆ ಮಾಡಿರುವ ದುಷ್ಕರ್ಮಿಗಳು ಅಂಗಡಿಯಲ್ಲಿದ್ದ ಹಣವವನ್ನು ದೋಚಿಸಿದ್ದಾರೆ. ಈ ಕುರಿತು ಮಲ್ಲಿಕಾರ್ಜುನ ಮುತ್ಯಾಲ ಪುತ್ರ ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದಾರೆ. ತಂದೆ ಪ್ರತಿ ದಿನ ಅಂಗಡಿಯಲ್ಲೇ ಮಲಗುತ್ತಿದ್ದರು. ಈ ಹಿಂದೆ ಕೆಲವು ಬಾರಿ ಅಂಗಡಿಯಲ್ಲಿನ ಹಣ ದೋಚುವ, ವಸ್ತುಗಳನ್ನು ದೋಚುವ ಪ್ರಯತ್ನ ನಡೆದಿದೆ. ಈ ಬಾರಿಯೂ ಹಣ ದೋಚುವ ಪ್ರಯತ್ನದಲ್ಲಿ ತಂದೆಯ ಹತ್ಯೆಯಾಗಿದೆ ಎಂದು ವೆಂಕಟೇಶ್ ಮುತ್ಯಾಲ ಹೇಳಿದ್ದಾರೆ.
ಸೋಮವಾರ(ನ.14) ನಡೆದ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಕೌಟುಂಬಿಕ ಕಲಹವೇ ಕಾರಣವೆನ್ನಲಾಗುತ್ತಿದೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಎಸ್‌ಪಿ ಇಶಾ ಪಂತ್, ಸಿಪಿಐ ಆನಂದರಾವ್, ಪಿಎಸ್‌ಐ ಸೋಮಲಿಂಗ ಒಡೆಯರ್, ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಶಿವಕುಮಾರ ಪಾಟೀಲ್ ತೇಲ್ಕೂರ ಭೇಟಿ ನೀಡಿದ್ದಾರೆ.
ಆನ್‌ಲೈನ್‌ನಲ್ಲೇ ಡ್ರಗ್ಸ್ ದಂಧೆ: ಯುವತಿ, ಗೆಳೆಯ ಮತ್ತೆ ಜೈಲಿಗೆ
ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಭೇಟಿ ನೀಡಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ. ಕೊಲೆ ಯಾಕಾಯ್ತೋ, ಯಾಕೆ ಇವರನ್ನು , ಯಾವ ಉದ್ದೇಶದಿಂದ ಕೊಲೆ ಮಾಡಲಾಯ್ತು ಎಂಬುದನ್ನೆಲ್ಲ ತನಿಖೆ ನಡೆಸಿ ಹಂತಕರನ್ನು ಕಟಿಣ ಶಿಕ್ಷೆಗೆ ಗುರಿಪಡಿಸುವಂತೆ ತೇಲ್ಕೂರ್ ಪೊಲೀಸರಿಗೆ ಸೂಚಿಸಿದ್ದಾರೆ.