ಬೆಂಗಳೂರು: ಒತ್ತುವರಿ ತೆರವಿನ ವೇಳೆ ಪೊಲೀಸರ ಎದುರೇ ಜೆಸಿಬಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು
ಒತ್ತುವರಿ ತೆರವಿನ ವೇಳೆ ಜೆಸಿಬಿಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರು ಉತ್ತರದ ಹೆಸರಘಟ್ಟ ಹೋಬಳಿಯ ಶಿವಕೋಟೆ ಗ್ರಾಮದಲ್ಲಿ ನಡೆದಿದೆ. ಅಧಿಕಾರಿಗಳು ಸರ್ಕಾರಿ ಬಂಡಿದಾರಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.
ಬೆಂಗಳೂರು (ಫೆ.28): ಒತ್ತುವರಿ ತೆರವಿನ ವೇಳೆ ಜೆಸಿಬಿಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರು ಉತ್ತರದ ಹೆಸರಘಟ್ಟ ಹೋಬಳಿಯ ಶಿವಕೋಟೆ ಗ್ರಾಮದಲ್ಲಿ ನಡೆದಿದೆ. ಅಧಿಕಾರಿಗಳು ಸರ್ಕಾರಿ ಬಂಡಿದಾರಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.
ಒಂದೇ ದಿನ ಆಪರೇಷನ್ ಮಾಡಿಸಿಕೊಂಡ ಮೂವರು ಮಹಿಳೆಯರು ಸಾವು, ಇದೆಂಥಾ ಸರ್ಕಾರಿ ಆಸ್ಪತ್ರೆ!
ಶಿವಕೋಟೆ ಗ್ರಾಮ್ ಸರ್ವೆ ನಂ 10/7&8 ರಲ್ಲಿ ಬಂಡಿದಾರಿ ತೆರವಿಗೆ ಅಧಿಕಾರಿಗಳು ಮುಂದಾಗಿದ್ದರು ಆರ್ ಐ ರವಿಕುಮಾರ್ ನೇತೃತ್ವದಲ್ಲಿ ಬಂಡಿದಾರಿ ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಸರ್ಕಾರಿ ಜಾಗ ಒತ್ತುವರಿದಾರರಿಂದ ವಿರೋಧ ವ್ಯಕ್ತವಾಗಿದೆ. ಸಿಟ್ಟಿಗೆದ್ದ ಒತ್ತುವರಿದಾರರು ಗಲಾಟೆ ನಡೆಸಿ ಜೆಸಿಬಿಗೆ ಬೆಂಕಿ ಹಾಕಿದ್ದಾರೆ.
ಬೈಕ್‌ನಲ್ಲಿ ಮದುವೆಗೆ ಹೊರಟಿದ್ದ ಮಾವ, ಸೊಸೆಗೆ ಗುದ್ದಿದ ಲಾರಿ, ಇಬ್ಬರೂ ಸ್ಥಳದಲ್ಲೇ ಸಾವು
ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ತೆರವು ಕಾರ್ಯ ನಡೆಸುತ್ತಿದ್ದರು. ಸದ್ಯ ಒತ್ತುವರಿದಾರರನ್ನ ಸೋಲದೇವನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳಾದ ಬಚ್ಚೇಗೌಡ ಮತ್ತು ಚೇತನ್ ವಿರುದ್ಧ ದೂರು ದಾಖಲಾಗಿದೆ.