Asianet Suvarna News Asianet Suvarna News

ಕೊಪ್ಪಳ: ಅಂತರ್ಜಾತಿ ಪ್ರೇಮ: ತಮ್ಮನ ಪ್ರೀತಿಗೆ ಅಣ್ಣ ಟಾರ್ಗೇಟ್‌

Koppal Crime News: ತಮ್ಮನ ಪ್ರೀತಿಗೆ ಅಣ್ಣ ಬಲಿಯಾದ ಘಟನೆ  ಕೊಪ್ಪಳ ತಾಲೂಕು ಇಂದಿರಾನಗರ ಗ್ರಾಮದಲ್ಲಿ ಘಟನೆ

Inter Caste affair  boy s brother brutally attacked in Koppal mnj
Author
Bengaluru, First Published Aug 4, 2022, 5:00 PM IST

ಕೊಪ್ಪಳ (ಆ. 04):  ತಮ್ಮನ ಪ್ರೀತಿಗೆ ಅಣ್ಣಣ ಮೇಲೆ ದಾಳಿಯಾಗಿರುವ  ಘಟನೆ  ಕೊಪ್ಪಳ (Koppal) ತಾಲೂಕು ಇಂದಿರಾನಗರ ಗ್ರಾಮದಲ್ಲಿ ಘಟನೆ. ಅಂತರ್ಜಾತಿ  ಪ್ರೇಮ ಪ್ರಕರಣದಲ್ಲಿ ಯುವಕನ ಮೇಲೆ ಮಚ್ಚಿನಿಂದ ದಾಳಿ ಮಾಡಲಾಗಿದೆ. ಹನುಮೇಶ ಭೋವಿ (25) ದಾಳಿಗೊಳಗಾದ ಯುವಕ. ಹನುಮೇಶ ಸದ್ಯ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು  ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಂತರ್ಜಾತಿ ಯುವತಿಯೊಂದಿಗೆ ಶ್ರೀನಿವಾಸ ಓಡಿ ಹೋಗಿದ್ದಾನೆ. ಈ ಬೆನ್ನಲ್ಲೇ ಶ್ರೀನಿವಾಸನ ಸಹೋದರ ಹನುಮೇಶನ ಮೇಲೆ ಮಚ್ಚಿನಿಂದ ದಾಳಿ ಮಾಡಿ ಕೊಲೆಗೆ ಯತ್ನಿಸಿಲಾಗಿದೆ. ಯಲ್ಲಪ್ಪ ಓಬಳಬಂಡಿ, ಬಸವರಾಜ ಓಬಳಬಂಡಿ ಎಂಬುವರು ಹನುಮೇಶನ ಮೇಲೆ ಮಚ್ಚಿನಿಂದ ದಾಳಿ  ಮಾಡಿದ್ದಾರೆ ಎನ್ನಲಾಗಿದೆ. 

ಹರಿಯುವ ನೀರಿನಲ್ಲಿ ಕೊಚ್ಚಿಕೊಂಡು ಹೋದ ಓಮಿನಿ‌ ಕಾರು: ತುಮಕೂರಿನಲ್ಲಿ ಸತತವಾಗಿ ಸುರಿದ ಮಳೆ ಹಿನ್ನೆಲೆ ಹರಿಯುವ ನೀರಿನಲ್ಲಿ ಓಮಿನಿ‌ ಕಾರು ಕೊಚ್ಚಿಕೊಂಡು ಹೋಗಿದೆ. ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿನಲ್ಲಿದ್ದ ಮತ್ತೊರ್ವ ನಾಪತ್ತೆಯಾಗಿದ್ದಾರೆ. ಪಟೇಲ್ ಕುಮಾರ್ (70) ನಾಪತ್ತೆಯಾದ ವ್ಯಕ್ತಿ. ತಿಪಟೂರು ತಾಲೂಕು ಗಡಬನಹಳ್ಳಿ ಗ್ರಾಮದ ಪಟೇಲ್ ಕುಮಾರ್‌ಗಾಗಿ ಶೋಧ ಮುಂದುವರೆದಿದೆ. 

ಭೀಮಾತೀರದಲ್ಲಿ ಖಾಕಿ ಮೈಂಡ್ ಗೇಮ್: ಹಂತಕನ ಪತ್ನಿ ವಿಮಲಾಬಾಯಿ ಸರೆಂಡರ್‌

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಕ್ರಾಸ್ ಬಳಿ ಘಟನೆ ನಡೆದಿದೆ.  ಕಲ್ಲೂರು ಕ್ರಾಸ್ ರಸ್ತೆಯಲ್ಲಿರುವ ಸೂಪ್ಪನಹಳ್ಳಿ ಹಳ್ಳದಲ್ಲಿ  ಓಮಿನಿ ಕಾರು ಕೊಚ್ಚಿ ಹೋಗಿದೆ. ಸ್ಥಳೀಯರ ಸಹಾಯದಿಂದ ಚಾಲಕ ಪುಟ್ಟಸಿದ್ದಯ್ ಪ್ರಾಣಾಪಾಯದಿಂದ  ಪಾರಾಗಿದ್ದಾರೆ.

ಕಾರಿನಲ್ಲಿದ್ದ 70 ವರ್ಷದ ಪಟೇಲ್ ಕುಮಾರ್ ಕಾಣೆ. ಪಟೇಲ್ ಕುಮಾರಯ್ಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.  ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ತುರುವೆಕೆರೆಯ ದಂಡಿನ‌ ಶಿವರ ಪೊಲೀಸರು ಭೇಟಿ ನೀಡಿದ್ದಾರೆ. ನಾಪತ್ತೆಯಾದವರಿಗೆ ಶೋಧ ಕಾರ್ಯ ಮುಂದುವರೆದಿದೆ. ನಿನ್ನೆ ರಾತ್ರಿ 8 ಗಂಟೆಯಿಂದ ತಡರಾತ್ರಿಯವರೆಗೆ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದರು. ಮತ್ತೆ ಇಂದು  ಬೆಳಗ್ಗೆ 6 ಗಂಟೆಯಿಂದ ಅಗ್ನಿಶಾಮಕ ಹಾಗೂ ದಂಡಿನ ಶಿವರ ಪೊಲೀಸರಿಂದ ಶೋಧಕಾರ್ಯ ಆರಂಭವಾಗಿದೆ

Follow Us:
Download App:
  • android
  • ios