Asianet Suvarna News Asianet Suvarna News

ಹೋಟೆಲ್‌ನಲ್ಲಿ ಯುವತಿ ಜತೆ ಅಸಭ್ಯ ವರ್ತನೆ ಆರೋಪ: ಇನ್ಸ್‌ಪೆಕ್ಟರ್ ಸಸ್ಪೆಂಡ್‌

ಕೆ.ಪಿ.ಅಗ್ರಹಾರ ಇನ್ಸ್ ಪೆಕ್ಟರ್ ವಿರುದ್ಧ ಜೀವನ ಭೀಮಾನಗರ ಠಾಣೆಗೆ ದೂರು ನೀಡಿದ್ದ ನೊಂದ ಯುವತಿ

Inspector Suspended For Misbehave With Woman in Bengaluru grg
Author
Bengaluru, First Published Aug 29, 2022, 12:00 AM IST

ಬೆಂಗಳೂರು(ಆ.29):  ನಗರದ ಹೊಟೇಲ್‌ವೊಂದರಲ್ಲಿ ಯುವತಿ ಜೊತೆ ಅನುಚಿತ ವರ್ತನೆ ಹಿನ್ನಲೆ ಕೆ.ಪಿ‌.ಅಗ್ರಹಾರ ಇನ್ಸ್‌ಪೆಕ್ಟರ್ ಗೋಪಾಲ್ ಕೃಷ್ಣ ಗೌಡ ಅಮಾನತು ಮಾಡಿ ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ. ಜೀವನ ಭೀಮಾನಗರ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕೆ‌‌.ಪಿ.ಅಗ್ರಹಾರ ಇನ್ಸ್ ಪೆಕ್ಟರ್ ಗೋಪಾಲ್ ಕೃಷ್ಣ ಗೌಡ ಖಾಸಗಿ ಹೊಟೇಲ್ ಗೆ ತೆರಳಿದ್ರು.. ಈ ವೇಳೆ ಕುಡಿದಿದ್ದ ಇನ್ಸ್ ಪೆಕ್ಟರ್ ಯುವತಿಗೆ ರೂಮ್ ಕೇಳಿದ್ದಾರೆ. ಈ ಸಂದರ್ಭದಲ್ಲಿ ಆಕೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ..

ಜೀವನ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನೊಂದ ಯುವತಿ ಕೆ.ಪಿ.ಅಗ್ರಹಾರ ಇನ್ಸ್ ಪೆಕ್ಟರ್ ವಿರುದ್ಧ ಜೀವನ ಭೀಮಾನಗರ ಠಾಣೆಗೆ ದೂರು ನೀಡಿದ್ರು‌. ಕುಡಿದ ಅಮಲಿನಲ್ಲಿ ಅಸಭ್ಯ ವರ್ತನೆ ಬಗ್ಗೆ  ನೊಂದ ಯುವತಿ ದೂರಿನ ಮೇರೆಗೆ ಜೀವನ ಭೀಮಾನಗರ ಪೊಲೀಸರು ಎನ್ ಸಿಆರ್ ದಾಖಲಿಸಿದ್ದಾರೆ .ಕೆ.ಪಿ.ಅಗ್ರಹಾರ ಇನ್ಸ್ ಪೆಕ್ಟರ್ ಗೆ ಬುದ್ದಿವಾದ ಕೂಡ ಹೇಳಲಾಗಿದೆ.

PSI Scam: ಒಂದುವರೆ ತಿಂಗ್ಳಿಂದ ಸಿಐಡಿಯನ್ನೇ ಆಟ ಆಡಿಸಿ ಬಲೆಗೆ ಬಿದ್ದ ಫಸ್ಟ್ ರ‍್ಯಾಂಕ್ ರಚನಾ!

ಹಿರಿಯ ಅಧಿಕಾರಿಗಳ ಗಮನಕ್ಕೆ ಈ ಬಗ್ಗೆ ಜೀವನ ಭೀಮಾನಗರ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.ಇನ್ನು ಕುಡಿದು ಕೂಡ ಸ್ಟೇಷನ್ ಗೆ ಬರ್ತಿದ್ರು ಎಂಬ ಆರೋಪದ ಬಗ್ಗೆ ಮಾಹಿತಿ ಇದೆ..ಅಲ್ಲದೇ ಈ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸದ ಹಿನ್ನಲೆ ಡಿಸಿಪಿ ಇನ್ಸ್ ಪೆಕ್ಟರ್ ಗೆ ಎಚ್ಚರಿಕೆ ನೀಡಿದ್ರು. ಸದ್ಯ ಹೊಟೇಲ್ ನಲ್ಲಿ ಯುವತಿ ರೂಮ್ ನೀಡದಿದ್ದಕ್ಕೆ ಗಲಾಟೆ ಮಾಡಿ ಅಸಭ್ಯವಾಗಿ ವರ್ತಿಸಿ,ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಕ್ಕೆ ಅಮಾನತು ಮಾಡಲಾಗಿದೆ ಎನ್ನಲಾಗಿದೆ. 
 

Follow Us:
Download App:
  • android
  • ios