ಚಿಕ್ಕಮಗಳೂರು[ಫೆ.23]: ಚಿಕ್ಕಮಗಳೂರು ದಂತವೈದ್ಯ ಆತ್ಮಹತ್ಯೆ ಪ್ರಕರಣ ಬಹುದೊಡ್ಡ ತಿರುವುದು ಪಡೆದುಕೊಂಡಿದೆ. ಪ್ರಿಯತಮೆಗಾಗಿ ಪತ್ನಿಯನ್ನು ಕೊಂದಿದ್ದ ಡಾಕ್ಟರ್ ರೇವಂತ್ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೀಗ ರೇವಂತ್ ಸೂಸೈಡ್ ಮಾಡಿಕೊಂಡ ಬೆನ್ನಲ್ಲೇ ಆತನ ಪ್ರಿಯತಮೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎಲ್ಲಾ ಜಂಜಾಟದಿಂದಾಗಿ ಪುಟ್ಟ ಕಂದಮ್ಮ ತಂದೆ, ತಾಯಿ ಇಲ್ಲದೇ ಅನಾಥವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ಬಾಣಂತಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದ ಪ್ರಕರಣ ಬೆಚ್ಚಿ ಬೀಳಿಸಿತ್ತು. ಆದರೆ ಪರಸ್ತ್ರೀ ವ್ಯಾಮೋಹಕ್ಕೆ ಬಲಿಯಾಗಿ ಹೆಂಡತಿಯನ್ನು ಕೊಂದ ಡಾಕ್ಟರ್ ಗಂಡ, ತನಿಖೆ ಆರಂಭವಾಗುತ್ತಿದ್ದಂತೆಯೇ ಭಯಗೊಂಡಿದ್ದ.  ಪತ್ನಿಯನ್ನು ಕೊಲೆಗೈಯಲಾಗಿದೆಯೆಂದ ಬಿಂಬಿಸಿದ್ದ ರೇವಂತ್ ತನಿಖೆಗೆ ಹೆದರಿ ನಿನ್ನೆಯಷ್ಟೇ ತಾನೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಆದರೀಗ ಈ ಆತ್ಮಹತ್ಯೆ ಬೆನ್ನಲ್ಲೇ ರೇವಂತ್ ಪ್ರಿಯತಮೆಯೂ ನೇಣಿಗೆ ಶರಣಾಗಿದ್ದಾಳೆ

ಹಾಲು ಕುಡಿಯುವಾಗ ಕಂದಮ್ಮ ಕಚ್ಚಿದ್ದಕ್ಕೆ 90 ಬಾರಿ ಚುಚ್ಚಿದ ತಾಯಿ..!

ದಂತವೈದ್ಯನಾಗಿದ್ದ ರೇವಂತ್ ಪರ ಸ್ತ್ರೀ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ಈ ಬಗ್ಗೆ ಆತನ ಹೆಂಡತಿ ಕವಿತಾ ಹಲವು ಬಾರಿ ಬುದ್ಧಿ ಹೇಳಿದ್ದರೂ ರೇವಂತ್ ಸುಧಾರಿಸಿಕೊಂಡಿರಲಿಲ್ಲ. ತನ್ನ ಈ ಅಕ್ರಮ ಸಂಬಂಧಕ್ಕೆ ಕವಿತಾ ಆಕ್ಷೇಪ ವ್ಯಕ್ತಪಡಿಸಿದಾಗ ಕುಪಿತಗೊಂಡಿದ್ದ ರೇವಂತ್ ಹೆಂಡತಿಯನ್ನು ಕೊಲೆಗೈಯ್ಯಲು ನಿರ್ಧರಿಸಿದೆ. ಇದಕ್ಕಾಗಿ ಯೋಜನೆ ರೂಪಿಸಿದ್ದ ರೇವಂತ್ ಫೆಬ್ರವರಿ 17ರಂದು ಪತ್ನಿ ಕವಿತಾಗೆ ಒಡವೆ ಕೊಡಿಸಿದ್ದಾರೆ. ಮನೆಗೆ ಬಂದ ಕೂಡಲೇ ಕವಿತಾ ಬಾಯಿಗೆ ಬಟ್ಟೆ ತುರುಕಿ ಹೊಟ್ಟೆ ಭಾಗಕ್ಕೆ ಇಂಜೆಕ್ಷನ್ ಕೊಟ್ಟಿದ್ದಾನೆ. ಇದರಿಂದ ಕವಿತಾ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ತಪ್ಪಿದ್ದಾರೆ. 

ಬಳಿಕ ಕವಿತಾಳನ್ನು ಕಾರ್ ಶೆಡ್ ಗೆ ಎಳೆದೊಯ್ದಿದ್ದ ರೇವಂತ್ ಆರು ತಿಂಗಳ ಮಗುವಿನ ಮುಂದೆಯೇ ಪತ್ನಿಯ ಕತ್ತು ಕೊಯ್ದಿದ್ದ. ಹಾಗೂ ರಕ್ತ ಹರಿಯಬಾರದೆಂದು ಕವಿತಾ ಸುತ್ತ ಮ್ಯಾಟ್ ಕೂಡಾ ಹಾಕಿದ್ದ. ಬಳಿಕ ಇಬ್ಬರು ಮಕ್ಕಳನ್ನು ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದ.

ತನಿಖೆ ನಡೆಸುತ್ತಿದ್ದ ಪೊಲೀಸರನ್ನು ದಿಕ್ಕು ತಪ್ಪಿಸಲು ಯಾರೋ ದುಷ್ಕರ್ಮಿಗಳು ಮನೆಗೆ ಬಂದು ಕೊಲೆ ಮಾಡಿ, ಚಿನ್ನಾಭರಣವನ್ನ ದೋಚಿದ್ದಾರೆ ಎಂದು ದೂರು ನೀಡಿದ್ದ. ಆದರೆ ಕವಿತಾ ಮರಣೋತ್ತರ ವರದಿಯಲ್ಲಿ ರೇವಂತ್ ಅಸಲಿ ಮುಖ ಬಯಲಾಗಿತ್ತು. ಕವಿತಾಳನ್ನು ಕೊಲೆ ಮಾಡುವ ಮುನ್ನ ಆಕೆಗೆ ಇಂಜೆಕ್ಷನ್ ನೀಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು. 

ಅಕ್ರಮ ಸಂಬಂಧ: ಪತ್ನಿಯ ಗುಪ್ತಾಂಗಕ್ಕೆ ಗಮ್ ಹಾಕಿದ ಪತಿ..!

ಈ ವರದಿ ಬಹಿರಂಗವಾಗುತ್ತಿದ್ದಂತೆ ಹೆದರಿದ ರೇವಂತ್ ಸಿಕ್ಕಾಕೊಳ್ಳೋ ಭಯದಲ್ಲಿ, ನಿನ್ನೆ ಶುಕ್ರವಾರ ಕಡೂರಿನ ಮಸಾಲ ಡಾಬಾದ ಸಮೀಪ ಕಾರು ನಿಲ್ಲಿಸಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣದ ಬೆನ್ನಲ್ಲೇ ಇತ್ತ ರೇವಂತ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆತನ ಪ್ರಿಯತಮೆ  ಹರ್ಷಿತಾ ರಾಜರಾಜೇಶ್ವರಿ ನಗರದ ಮನೆಯಲ್ಲಿಆತ್ಮಹತ್ಯೆಗೆ ಶರಣಾಗಿದ್ದಾರೆ. 

 ಒಟ್ಟಾರೆಯಾಗಿ ಈ ದುರಂತದಿಂದ 6 ತಿಂಗಳ ಹಸುಗೂಸು ಹಾಗೂ 5 ವರ್ಷದ ಮಗು ಇದೀಗ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ.