ದಾವಣಗೆರೆ: ನಾಗೇನಹಳ್ಳಿ ಹಳ್ಳದಲ್ಲಿ ಅಕ್ರಮ ಮರಳುಗಾರಿಕೆ; ನಾಲ್ವರ ಬಂಧನ

ಗ್ರಾಮಾಂತರ ಠಾಣಾ ವ್ಯಾಪ್ತಿಯ ತಾಲೂಕಿನ ನಾಗೇನಹಳ್ಳಿ ಬಳಿಯ ಸೂಳೆಕೆರೆ ಹಳ್ಳದಲ್ಲಿ ಅಕ್ರಮ ಮರಳುಗಾರಿಕೆ ಆರೋಪದ ಮೇಲೆ ಗ್ರಾಮಾಂತರ ಡಿವೈಎಸ್‌ಪಿ ತಂಡದ ಸಿಬ್ಬಂದಿ ನಾಲ್ವರ ಬಂಧಿಸಿ ವಿವಿಧ ವಾಹನಗಳ ವಶಪಡಿಸಿಕೊಂಡಿದ್ದಾರೆ.

Illegal sand mining in Nagenahalli Four arrested arrested at dangagere rav

ಹರಿಹರ (ಜೂ.29) ಗ್ರಾಮಾಂತರ ಠಾಣಾ ವ್ಯಾಪ್ತಿಯ ತಾಲೂಕಿನ ನಾಗೇನಹಳ್ಳಿ ಬಳಿಯ ಸೂಳೆಕೆರೆ ಹಳ್ಳದಲ್ಲಿ ಅಕ್ರಮ ಮರಳುಗಾರಿಕೆ ಆರೋಪದ ಮೇಲೆ ಗ್ರಾಮಾಂತರ ಡಿವೈಎಸ್‌ಪಿ ತಂಡದ ಸಿಬ್ಬಂದಿ ನಾಲ್ವರ ಬಂಧಿಸಿ ವಿವಿಧ ವಾಹನಗಳ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಡಿವೈಎಸ್‌ಪಿ ಕನ್ನಿಕಾ ಸಿಕ್ರಿವಾಲ್‌ ಸೂಚನೆ ಮೇರೆಗೆ ತಡರಾತ್ರಿ ದಾಳಿ ನಡೆಸಲಾಗಿದೆ. ನಾಗೇನಹಳ್ಳಿ ವಾಸಿಗಳಾದ ಅರುಣ್‌, ಸಂಕಪ್ಪ, ಬಸವರಾಜ ಹಾಗೂ ಧೂಳೆಹೊಳೆ ಗ್ರಾಮದ ವರುಣ್‌ ಕುಮಾರ್‌ ಎಂಬವರ ಅಕ್ರಮ ಮರಳುಗಾರಿಕೆ ಆರೋಪದಲ್ಲಿ ಬಂಧಿಸಲಾಗಿದೆ. ಪರಾರಿಯಾದ ಆರೋಪಿಗಳಾದ ನಾಗೇನಹಳ್ಳಿ ಗ್ರಾಮದ ನಾಗರಾಜಪ್ಪ, ಉಮಾಕಾಂತ್‌ ಎಂಬುವರ ಪತ್ತೆ ನಡೆಸಲಾಗುತ್ತಿದೆ. ಸ್ಥಳದಲ್ಲಿದ್ದ ಎರಡು ಟ್ರ್ಯಾಕ್ಟರ್‌, ಎರಡು ಬೈಕ್‌ ವಶಪಡಿಸಲಾಗಿದೆ. ದಾಳಿಯಲ್ಲಿ ಎಎಸ್‌ಐಗಳಾದ ಯಾಸೀನ್‌ ಉಲ್ಲಾ, ಕರಿಬಸಪ್ಪ ಮತ್ತು ಪೇದೆ ಸೈಯದ್‌ ಗಫಾರ್‌ ಭಾಗವಹಿಸಿದ್ದರು. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಶಾಲೆಗೆ ತೊಂದರೆ: ಕ್ವಾರಿ ಸ್ಥಗಿತಗೊಳಿಸಲು ಆಗ್ರಹ

ಕಾರವಾರ: ಶಿರಸಿ ತಾಲೂಕಿನ ಮುಂಡಿಗೆಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ನಡೆಸಲಾಗುತ್ತಿರುವ ಕ್ವಾರಿಯಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕ್ವಾರಿ ಸ್ಥಗಿತಗೊಳಿಸಬೇಕು ಅಥವಾ ಶಾಲೆಗೆ ಬೇರೆಡೆ ಜಾಗ ನೀಡಬೇಕು ಎಂದು ಗ್ರಾಮಸ್ಥ ಶ್ರೀಧರ ಬಸವಗೌಡ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಲೆ ಇರುವ ಜಾಗ ರುದ್ರ ಗೌಡ ಅವರದ್ದಾಗಿದೆ. ಶಿರಸಿಯ ಮಾಬ್ಲೇಶ್ವರ ತಾರೀಮನೆ ಎನ್ನುವವರು ಈ ಜಾಗವನ್ನು ಖರೀದಿಸಿದ್ದರು. 2004-05ರಲ್ಲಿ 2 ಗುಂಟೆ ಜಾಗವನ್ನು ತಾರಿಮನೆ ಶಾಲೆಗೆ ನೀಡಿದ್ದರು. ಈ ಬಗ್ಗೆ ದಾನಪತ್ರವಿದೆ. ತಾರೀಮನೆ ಕುಟುಂಬದಲ್ಲಿ ಅವರ ಸೊಸೆ ಮಾತ್ರ ಇದ್ದಾರೆ. ಆದರೆ ಜಿಪಂ ಮಾಜಿ ಸದಸ್ಯ ಚಂದ್ರಪ್ಪ ಚನ್ನಯ್ಯ ಎನ್ನುವವರು ತಾವು ಜಾಗ ಖರೀದಿ ಮಾಡಿರುವುದಾಗಿ ಹೇಳಿ ಶಾಲೆಯ ಸಮೀಪವೇ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

ಈ ಬಗ್ಗೆ ಈ ಹಿಂದೆಯೇ ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆರು ತಿಂಗಳ ಹಿಂದೆ ಶಿರಸಿ ತಹಸೀಲ್ದಾರರಿಗೆ ಮನವಿ ನೀಡಿದ ಬಳಿಕ ಎರಡು ತಿಂಗಳು ಕ್ವಾರಿ ಸ್ಥಗಿತಗೊಳಿಸಿದ್ದರು. ಈಗ ಪುನಃ ಕ್ವಾರಿ ಆರಂಭಿಸಿದ್ದಾರೆ. ಶಾಲೆಯ ಸಮೀಪದಲ್ಲೇ ಕ್ವಾರಿ ನಡೆಸುತ್ತಿದ್ದು, ಶಿಕ್ಷಕರಿಗೆ ಪಾಠ ಮಾಡಲು ತೊಂದರೆ ಆಗುತ್ತಿದೆ. ಮಕ್ಕಳಿಗೆ ಪ್ರತಿನಿತ್ಯ ಆರೋಗ್ಯದಲ್ಲಿ ಒಂದಿಲ್ಲೊಂದು ಸಮಸ್ಯೆ ಆಗುತ್ತಿದೆ. ಕಾನೂನು ಪ್ರಕಾರ ಜಾಗ ಅವರದ್ದಾಗಿದ್ದರೆ ಸರ್ಕಾರ ಶಾಲೆ ನಡೆಸಲು ಬೇರೆ ಜಾಗ ನೀಡಬೇಕು. ಅವರ ಜಾಗವಲ್ಲದೇ ಇದ್ದರೆ ಕ್ವಾರಿ ಸ್ಥಗಿತಗೊಳಿಸಿ ಶಾಲೆ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

 

Uttara Kannada: ಮಕ್ಕಳ ಭವಿಷ್ಯ ನುಂಗುತ್ತಿದೆ ಕಲ್ಲಿನ ಕ್ವಾರಿ: ಕುಸಿದು ಬೀಳುವ ಭೀತಿಯಲ್ಲಿ ಶಿರಸಿಯ ಶಾಲೆ!

ಎಸ್‌ಡಿಎಂಸಿ ಅಧ್ಯಕ್ಷ ಕೆರಿಯಪ್ಪ ಗೌಡ, ಗ್ರಾಮಸ್ಥರಾದ ನಾಗಪತಿ ನಾಯ್ಕ, ಭಾಸ್ಕರ ಗೌಡ, ಗಣಪತಿ ಗೌಡ, ವಿಠ್ಠಲ ಗೌಡ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios