ಬೆಂಗಳೂರು( ಜ.  13)   ಮಾಜಿ ಸಚಿವ ರೋಷನ್ ಬೇಗ್ ಗೆ ಬಿಗ್ ರಿಲೀಫ್ ಸಿಕ್ಕಿದೆ.  ಅಕ್ರಮ ಆಸ್ತಿ ಗಳಿಕೆ ಪ್ರಕರಣಭಕ್ಕೆ ಸಂಬಂಧಿಸಿ ಬೇಗ್ ಅವರನ್ನು ಮುಂದಿನ ವಿಚಾರಣೆವರೆಗೂ ಬಂಧಿಸಬಾರದು ಎಂದು  ನ್ಯಾಯಾಲಯ ತಿಳಿಸಿದೆ.

ರೋಷನ್ ಬೇಗ್ ಸೇರಿದಂತೆ ಕುಟುಂಬಸ್ಥರನ್ನು ಬಂಧಿಸಬಾರದು ಎಂದು  ಸುಪ್ರೀಂಕೋರ್ಟ್ ನ ನ್ಯಾ. ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ಸೂಚನೆ ನೀಡಿದೆ.

ಯತ್ನಾಳ್ ಸಿಡಿ ಬಾಂಬ್ ತಂದ ಫಜೀತಿ

2012 ರಲ್ಲಿ ಬೇಗ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ದೂರು ದಾಖಲಾಗಿತ್ತು. ಅಬ್ದುಲ್  ಹಕ್ ಎಂಬುವರು ದೂರು ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಬಿ ರಿಪೋರ್ಟ್ ಹಾಕಿದ್ದರು.

ಪ್ರಕರಣ ರದ್ದು ಕೋರಿ ಬೇಗ್ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಹೈಕೋರ್ಟ್ ನಿರಾಕರಣೆ ಮಾಡಿದ ನಂತರ ಬೇಗ್ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು.