ಬಾದಾಮಿ(ಜು.25): ಪತ್ನಿಯ ಅನೈತಿಕ ಸಂಬಂಧ ಸಂಶಯ ಹಿನ್ನೆಲೆಯಲ್ಲಿ ಕುಡಿದ ಮತ್ತಿನಲ್ಲಿ ಪತಿಯಿಂದಲೇ ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಶುಕ್ರವಾರ ಪಟ್ಟಣದ ರಂಗನಾಥನಗರದಲ್ಲಿ ನಡೆದಿದೆ. 

ಮಂಜುಳಾ(24) ಕೊಲೆಯಾದ ಪತ್ನಿ. ಪತಿ ಸಂದೀಪ್‌ ಬನಪಟ್ಟಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಪತ್ನಿ ಕೊಲೆ ಮಾಡಿ ತಾನು ಕಲ್ಲಿನಿಂದ ಜಜ್ಜಿಕೊಂಡಿರುವ ಪತಿ ಸಂದೀಪ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. 

ಗಂಡನನ್ನು ಕೊಂದು ದೂರು ಕೊಟ್ಟ ಪತ್ನಿ ಸೇರಿ ನಾಲ್ವರು ಆರೆಸ್ಟ್..!

ಸಂದೀಪ್‌ ಮಹಾರಾಷ್ಟ್ರದ ಸೊಲ್ಲಾಪುರದ ನಿವಾಸಿಯಾಗಿದ್ದು, ಪತ್ನಿ ಮಂಜುಳಾ ತವರು ಮನೆ ಬಾದಾಮಿಗೆ ನಾಲ್ಕು ತಿಂಗಳ ಹಿಂದೆ ಬಂದಿದ್ದಳು. ಪತಿ ಸಂದೀಪ್‌ ಎರಡು ತಿಂಗಳ ಹಿಂದೆ ಬಾದಾಮಿಗೆ ಬಂದು ನಿತ್ಯ ಜಗಳವಾಡಿತ್ತಿದ್ದನು. ಅನೈತಿಕ ಸಂಬಂಧ ಸಂಶಯದಿಂದ ಶುಕ್ರವಾರ ಮಧ್ಯಾಹ್ನ ಕೊಲೆ ಮಾಡಿದ್ದಾನೆ. 

ಸ್ಥಳಕ್ಕೆ ಎಸ್‌.ಪಿ.ಲೋಕೇಶ್‌ ಜಗಲಾಸರ, ಬಾದಾಮಿ ಪಿಎಸ್‌ಐ ಪ್ರಕಾಶ್ ಬಣಕಾರ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.