ಬೆಂಗಳೂರು: ಅಕ್ರಮ ಸಂಬಂಧಕ್ಕೆ ತುರೆಮಣೆಯಿಂದ ಕೊಯ್ದು ಪತ್ನಿ ಹತ್ಯೆ
ರಮೇಶ್ ಮೈಸೂರಿನಲ್ಲಿದ್ದ ಭಾಗ್ಯಮ್ಮಳನ್ನು ಗೋರಿನ ಬೆಲೆಗೆ ಕರೆದುಕೊಂಡು ಬಂದಿದ್ದ. ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಹೆಂಡತಿಯನ್ನು ತುರೆಮಣೆಯಿಂದ ಕತ್ತು ಸೀಳಿ ಕೊಲೆಮಾಡಿದ್ದಾನೆ. ಇಬ್ಬರಿಗೂ ಇದು ಎರಡನೇ ಮದುವೆ ಆಗಿತ್ತು ಎನ್ನಲಾಗಿದೆ.
ದಾಬಸ್‌ಪೇಟೆ(ಜ.26): ಅಕ್ರಮ ಸಂಬಂಧ ನಡೆದ ಜಗಳದಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ನಡೆದಿದೆ. ನೆಲಮಂಗಲ ತಾಲೂಕಿನ ಗೋರಿನಬೆಲೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭಾಗ್ಯಮ್ಮ (31) ಮೃತ ದುರ್ದೈವಿ, ಮೃತನ ಪತಿ ರಮೇಶ್ (35) ಕೊಲೆ ಮಾಡಿದ ಆರೋಪಿ.
ಮೈಸೂರು ಮೂಲದ ಭಾಗ್ಯಮ್ಮ ಆರೋಪಿ ರಮೇಶ್‌ನಿಗೆ ಮೈಸೂರಿನಲ್ಲಿ ಹನುಮಂತು ಪಲಾವ್ ಬಿರಿಯಾನಿ ಹೋಟೆ ಲಿನಲ್ಲಿ ಆಕಸ್ಮಿಕವಾಗಿ ಪರಿಚಯವಾಗಿತ್ತು. ನಂತರ ಇಬ್ಬರು ಪ್ರೀತಿಸಿ ನಾಲ್ಕು ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದರು. ನಂತರ ಗೋರಿನಬೆಲೆಯಲ್ಲಿ ವಾಸವಾಗಿದ್ದರು.
ಅಫೇರ್ ಮುಚ್ಚಿಡಲು ಪತ್ನಿ ಕೊಲೆ ಮಾಡಿ ಆಕಸ್ಮಿಕ ಸಾವೆಂದು ಬಿಂಬಿಸಿದ ಐಷಾರಾಮಿ ಹೋಟೆಲ್ ಮ್ಯಾನೇಜರ್!
ಭಾಗ್ಯಮ್ಮ ಬ್ಯೂಟಿಪಾರ್ಲ್‌ರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆ ಅನ್ಯ ಪುರುಷನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳು ಎನ್ನಲಾಗಿದ್ದು, ಈ ವಿಷಯ ಗೊತ್ತಾಗಿ ಗಂಡ ರಮೇಶ್ ಕೆಲವು ದಿನಗಳಿಂದಲೂ ಜಗಳವಾಗುತ್ತಿತ್ತು ಎನ್ನಲಾಗಿದೆ.
ರಮೇಶ್ ಮೈಸೂರಿನಲ್ಲಿದ್ದ ಭಾಗ್ಯಮ್ಮಳನ್ನು ಗೋರಿನ ಬೆಲೆಗೆ ಕರೆದುಕೊಂಡು ಬಂದಿದ್ದ. ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಹೆಂಡತಿಯನ್ನು ತುರೆಮಣೆಯಿಂದ ಕತ್ತು ಸೀಳಿ ಕೊಲೆಮಾಡಿದ್ದಾನೆ. ಇಬ್ಬರಿಗೂ ಇದು ಎರಡನೇ ಮದುವೆ ಆಗಿತ್ತು ಎನ್ನಲಾಗಿದೆ. ಕೊಲೆ ಮಾಡಿದ ನಂತರ ಆರೋಪಿ ರಮೇಶ್ ನೆಲಮಂಗಲ ಪಟ್ಟಣದ ಟೌನ್ ಪಾರ್ಕ್ ನಲ್ಲಿ ಬಂದು ಮಲಗಿದ್ದಾನೆ. ರಕ್ತದ ಕಲೆ ನೋಡಿ ಪೊಲೀಸರು ಈತನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿದಾಗ ಹೆಂಡತಿಯನ್ನು ಕೊಂದಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.