Asianet Suvarna News Asianet Suvarna News

ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ

ಗಂಡ ಸರಿಯಿಲ್ಲ ಎಂದಾದರೆ ಅವರನ್ನು ಬಿಟ್ಟು ಬೇರೆ ಬದುಕು ಕಟ್ಟಿಕೊಂಡವರು ಲಕ್ಷಾಂತರ ಜನರಿದ್ದಾರೆ. ಆದರೆ, ಕೇವಲ 11 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ, ಇಂಜಿನಿಯರ್ ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Husband immoral relationship wife commits suicide
Author
First Published Nov 23, 2022, 5:59 PM IST

ಬೆಂಗಳೂರು (ನ.23): ರಾಜಧಾನಿಯಲ್ಲಿ ಎಂತಹ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದೇ ತಿಳಿಯುತ್ತಿಲ್ಲ. ಗಂಡ ಸರಿಯಿಲ್ಲ ಎಂದಾದರೆ ಅವರನ್ನು ಬಿಟ್ಟು ಬೇರೆ ಬದುಕು ಕಟ್ಟಿಕೊಂಡವರು ಲಕ್ಷಾಂತರ ಜನರಿದ್ದಾರೆ. ಆದರೆ, ಕೇವಲ 11 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ, ಇಂಜಿನಿಯರ್ ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಂಗಳೂರಿನ ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್ (Richard Garden) ನಲ್ಲಿ ನ.10ರಂದು ನಡೆದಿರುವ ಘಟನೆ ನಡೆದಿದೆ. 13 ದಿನಗಳ ಹಿಂದಿನ ಘಟನೆಯಾಗಿದೆ. ಕೇವಲ 11 ತಿಂಗಳ ಹಿಂದಷ್ಟೇ ಇಬ್ಬರಿಗೂ ವಿವಾಹವಾಗಿತ್ತು. ಮೃತ ಶ್ವೇತಾ (Shwetha) ಐಬಿಎಂ ಕಂಪನಿ (IBM Company)ಉದ್ಯೋಗಿಯಾಗಿದ್ದರೆ, ಗಂಡ ಅಭಿಷೇಕ್ ಟಿಸಿಎಸ್ (TCS) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಆದರೆ, ಗಂಡನ ಅನೈತಿಕ ಸಂಬಂಧಕ್ಕೆ (Affair) ಬೇಸತ್ತು ಶ್ವೇತಾ (27) ನೇಣಿಗೆ ಶರಣಾಗಿದ್ದಾಳೆ. ಘಟನೆಯ ಬೆನ್ನಲ್ಲೇ ಪತಿ ಅಭಿಷೇಕ್ (Abhishek) ವಿರುದ್ಧ ಮೃತಳ ಕುಟುಂಬಸ್ಥರ ಆರೋಪ ಮಾಡಿದ್ದು, ಪ್ರಕರಣದ ಹಿಂದಿನ ಅಸಲಿಯತ್ತು ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೆ ಯತ್ನಿಸಿದ ಕಿರುತೆರೆ ನಟಿ ಅಪೂರ್ವ; ಕರಾಳ ಸತ್ಯ ಕೇಳಿ ಎಲ್ಲರೂ ಶಾಕ್...

ರಾಜಿ ಮಾಡಿಸಿದ್ದ ಕುಟುಂಬ: ಅಭಿಷೇಕ್ ಮದುವೆಗೂ (Marriage) ಮುನ್ನ ಯುವತಿಯೊಬ್ಬಳೊಂದಿಗೆ ಸಂಬಂಧ ಹೊಂದಿದ್ದನು. ಇದನ್ನು ಮುಚ್ಚಿಟ್ಟು ಮನೆಯವರು ಸೇರಿ ಮದುವೆ ಮಾಡಿಸಿದ್ದರು. ಮದುವೆಯ ನಂತರ ಸರಿಹೋಗಬಹುದು ಎಂಬ ಆಶಾಭಾವ (Hope)ವನ್ನೂ ಮಮನೆಯವರು ಹೊಂದಿದ್ದರು. ಆದರೆ, ಮದುವೆ ನಂತರವೂ ಅಭಿಷೇಕ್‌ ತನ್ನ ಅನೈತಿಕ ಸಂಬಂಧ (Immoral relationship)ವನ್ನು ಮುಂದುವರಿಸಿದ್ದನು. ಈ ವಿಚಾರ ಪತ್ನಿಗೆ ತಿಳಿದಿದ್ದರಿಂದ ಇಬ್ಬರ ನಡುವೆಯೂ ಜಗಳ ಆಗಿತ್ತು. ನಂತರ ಎರಡೂ ಕುಟುಂಬದವರು ಸೇರಿ ಪರಸ್ಪರ ರಾಜಿ (Compromise) ಪಂಚಾಯತಿ ಮಾಡಿಸಿದ್ದರು. ಬಳಿಕ ಇಬ್ಬರುಒಟ್ಟಿಗೆ ಜೀವನ ಸಾಗಿಸುತ್ತಿದ್ದರು. 

ಹಳೇ ಚಾಳಿ ಮುಂದುವರಿಕೆ: ಇಬ್ಬರೂ ಇಂಜಿನಿಯರ್‍‌ ಆಗಿದ್ದರಿಂದ ಅದ್ಧೂರಿಯಾಗಿ ಮದುವೆಯಾಗಿತ್ತು. ಇವರಿಬ್ಬರ ದಾಂಪತ್ಯ ಮುರಿಯಬಾರದು ಎಂಬ ಕಾರಣಕ್ಕೆ ಕುಟುಂಬದವರು ಇಬ್ಬರ ಮನವೊಲಿಸಿ ಒಟ್ಟಾಗಿ ಸಂಸಾರ ಮಾಡುವಂತೆ ವ್ಯವಸ್ಥೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಪುನಃ ಅಭಿಷೇಕ್‌ ತನ್ನ ಹಳೇ ಚಾಳಿ‌ ಮುಂದುವರೆಸಿದ್ದನು. ಗಂಡನ ಈ ರಂಗಿನಾಟವನ್ನು ಸಹಿಸದೇ ಬೇಸತ್ತ ಶ್ವೇತಾ ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Follow Us:
Download App:
  • android
  • ios